ಬೆಂಗಳೂರು: ಇಲಾಖೆ ವಿಲೀನ, ಹುದ್ದೆ ರದ್ದತಿ ಸಂಬಂಧ ಪರಾಮರ್ಶಿಸಿ ವರದಿ ನೀಡಲು ರಚಿಸಲಾದ ಸಂಪುಟ ಉಪಸಮಿತಿ ಅಧ್ಯಕ್ಷ ಆರ್.ಅಶೋಕ್ ರನ್ನು ಭೇಟಿಯಾಗಿ ಸಚಿವ ಸಿ.ಟಿ.ರವಿ ಪ್ರಸ್ತಾವನೆ ಸಲ್ಲಿಸಿದರು.
ತಮ್ಮ ಪ್ರಸ್ತಾವನೆಯಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜೊತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ವಿಲೀನಗೊಳಿಸಿ, ಅದರಡಿ ಬರುವ ಆಯುಕ್ತಾಲಯ ಮತ್ತು ನಿರ್ದೇಶನಾಲಯಗಳನ್ನು ಒಂದೇ ಆಯುಕ್ತಾಲಯದಡಿ ತರುವಂತೆ ಮನವಿ ಮಾಡಿದ್ದಾರೆ.
ಆ ಮೂಲಕ ಆಡಳಿತ ವಿಕೇಂದ್ರೀಕರಣ ಮಾಡಿ, ಆರ್ಥಿಕ ಮಿತವ್ಯಯ ಸಾಧಿಸಲು ಹಾಗೂ ಕನಿಷ್ಠ ಆಡಳಿತ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸೇವೆ ನೀಡಬಹುದು ಎಂದು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ ಇಲಾಖೆ, ಕ್ರೀಡಾ ಇಲಾಖೆ ಜೊತೆ ವಾರ್ತಾ ಇಲಾಖೆ ವಿಲೀನಗೊಳಿಸಿ: ಸಚಿವ ಸಿ.ಟಿ.ರವಿ
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜೊತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ವಿಲೀನಗೊಳಿಸುವಂತೆ ಕೋರಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಂದಾಯ ಸಚಿವರಿಗೆ ಇಂದು ಪ್ರಸ್ತಾವನೆ ಸಲ್ಲಿಸಿದರು.