ETV Bharat / city

'ತಬ್ಲಿಘಿ'ಗಳಿಂದ ದೇಶಾದ್ಯಂತ ಕೊರೊನಾ ಹರಡುವ ಸಂಚು: ಸಂಸದ ಅನಂತಕುಮಾರ್​ ಹೆಗಡೆ ಆರೋಪ - lockdown

ನಿಜಾಮುದ್ದೀನ್​ನಲ್ಲಿ ​ ತಬ್ಲಿಘಿ ಜಮಾತ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದೇಶದಲ್ಲೆಡೆ ಕೊರೊನಾ ಸೋಂಕು ಹರಡಿಸುತ್ತಿದ್ದು, ಚಿಕಿತ್ಸೆಗೂ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಅನಂತ್​ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

anatkumar hegde
ಸಂಸದ ಅನಂತ್​ ಕುಮಾರ್ ಹೆಗಡೆ
author img

By

Published : Apr 8, 2020, 7:50 PM IST

ಬೆಂಗಳೂರು: ದೆಹಲಿಯ ನಿಜಾಮುದ್ದೀನ್​ನ​ ಮರ್ಕಾಜ್​ ಕಟ್ಟಡದಲ್ಲಿ ನಡೆದ ತಬ್ಲಿಘಿ ಜಮಾತ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ನಾಪತ್ತೆಯಾಗಿರುವ ಹಿನ್ನೆಲೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​ ಪೋಸ್ಟ್​ ಒಂದರಲ್ಲಿ ಈ ಕುರಿತು ಬರೆದುಕೊಂಡಿರುವ ಅನಂತ್​ ಕುಮಾರ್ ಹೆಗಡೆ ಸೋಂಕಿತರಾದ ತಬ್ಲಿಘಿ ಜಮಾತ್ ಸದಸ್ಯರು ದೇಶಪೂರ್ತಿ ಓಡಾಡಿ, ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ವೈರಾಣು ತಡೆಗೆ ಕೇಂದ್ರ ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

  • " class="align-text-top noRightClick twitterSection" data="">

ಇದರ ಜೊತೆಗೆ ತಬ್ಲಿಘಿ ಜಮಾತ್​ನ ಮುಖ್ಯಸ್ಥ ಸೇರಿ ಹಲವರು ಎಲ್ಲೆಲ್ಲೋ ತಲೆ ತಪ್ಪಿಸಿಕೊಂಡಿದ್ದಾರೆ. ಕೆಲವರು ಮಸೀದಿಗಳಲ್ಲಿ ಅವಿತುಕೊಂಡಿದ್ದಾರೆ. ಎಷ್ಟೇ ವಿನಂತಿ ಮಾಡಿದ್ರೂ ಸೋಂಕು ತಪಾಸಣೆಗೆ ಒಪ್ಪುತ್ತಿಲ್ಲ. ಕ್ವಾರಂಟೈನ್​ಲ್ಲಿರುವವರೂ ಕೂಡಾ ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ. ವೈದ್ಯರು, ನರ್ಸ್​ಗಳ ಮೇಲೆ ದುರ್ವತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಹಲವು ಪ್ರಶ್ನೆಗಳನ್ನು ಜನರ ಮುಂದಿಟ್ಟು.. ಮುಂದುವರೆಯುತ್ತದೆ ಎಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.