ETV Bharat / city

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಒತ್ತಾಯಿಸಿ ಮಹಿಳೆಯರಿಂದ ಬೃಹತ್ ಪ್ರತಿಭಟನೆ - ಬೆಂಗಳೂರಲ್ಲಿ ಮಹಿಳೆಯರ ಬೃಹತ್ ಪ್ರತಿಭಟನಾ ಮೆರವಣಿಗೆ

ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮೆಜೆಸ್ಟಿಕ್​ನಿಂದ ನಗರದ ಫ್ರೀಡಂ ಪಾರ್ಕ್​​ವರೆಗೆ ಮಹಿಳೆಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರವನ್ನೂ ಖಂಡಿಸಿ ಪ್ರತಿಭಟಿಸಿದರು.

Protest demanding adequate implementation of Udyoga Khatri scheme
ಪ್ರತಿಭಟನಾ ಮೆರವಣಿಗೆ
author img

By

Published : Dec 17, 2019, 5:32 AM IST

ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹದಿನೈದು ಜಿಲ್ಲೆಗಳಿಂದ ಬಂದ ಸಾವಿರಾರು ಮಹಿಳೆಯರು ಮೆಜೆಸ್ಟಿಕ್​ನಿಂದ ನಗರದ ಫ್ರೀಡಂ ಪಾರ್ಕ್ ವರೆಗೆ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಉದ್ಯೋಗ ಖಾತ್ರಿ ಯೋಜನೆಯ ವಾರ್ಷಿಕ ಕೆಲಸದ ದಿನಗಳಿಗೆ ವಿಧಿಸಿರುವ 100 ದಿನಗಳ ಮಿತಿ ತೆಗೆಯಬೇಕು, ಕನಿಷ್ಠ ಕೂಲಿ 700 ರೂ ನೀಡಬೇಕು, ಕೆಲಸದ ಸ್ಥಳದಲ್ಲಿ ವೈದ್ಯಕೀಯ ವ್ಯವಸ್ಥೆ, ನೀರು, ನೆರಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಆಗಬೇಕು, ಯೋಜನೆಯಡಿ ಬಾಕಿ ಇರುವ 568 ಕೋಟಿ ರೂ. ಕೂಲಿಯನ್ನು ಕೇಂದ್ರ ಸರ್ಕಾರ ಕೂಡಲೇ ಪಾವತಿ ಮಾಡಬೇಕು. ಇನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಬಲಗೊಳಿಸಬೇಕು. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ‌ನ್ನು ಖಾತ್ರಿಗೊಳಿಸಬೇಕು, ಪಟ್ಟಣ ಮತ್ತು ನಗರ ಪ್ರದೇಶಕ್ಕೂ ಉದ್ಯೋಗ ಖಾತರಿ ಯೋಜನೆ ಹಾಗೂ ಕುಡಿಯುವ ನೀರು ಒದಗಿಸಿ, ಖಾಸಗಿ ನೀರಿನ ದಂದೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವಿಮಲಾ ರಾವ್, ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ ಮೇರೆ ಮೀರುತ್ತಿದೆ. ಇದನ್ನು ತಡೆಯಲಾಗದ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ. ರಾಜ್ಯದಲ್ಲಿ ಉಗ್ರಪ್ಪ ಸಮಿತಿ ವರದಿ, ದೇಶದ ಮಟ್ಟದಲ್ಲಿ ವರ್ಮಾ ಸಮಿತಿ ಶಿಫಾರಸ್ಸನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಂಗಸರಿಗೆ ಸಮರ್ಪಕವಾಗಿ ಕೆಲಸ ಹಾಗೂ ಕೂಲಿ ಕೊಡಬೇಕು. ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು. ಸ್ತ್ರೀಶಕ್ತಿ ಸಂಘಟನೆಗಳ ಸುತ್ತುನಿಧಿಯನ್ನು ನಿಲ್ಲಿಸಿ, ಎಂಎಫ್ಐ ತೆಕ್ಕೆಗೆ ತಳ್ಳಿ ಕಷ್ಟ ಅನುಭವಿಸುವಂತೆ ಆಗಿದೆ. ಇವೆಲ್ಲದರ ವಿರುದ್ಧ ಮಹಿಳೆಯರು ಬೀದಿಗೆ ಇಳಿದಿದ್ದೇವೆ ಎಂದರು.

Intro:ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಜಾರಿಗೆ ಮಹಿಳೆಯರ ಬೃಹತ್ ಪ್ರತಿಭಟನಾ ಮೆರವಣಿಗೆ

ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸಮರ್ಪಕ ಜಾರಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ವಿವಿಧ ಹದಿನೈದು ಜಿಲ್ಲೆಗಳಿಂದ ಬಂದ ಸಾವಿರಾರು ಮಹಿಳೆಯರು ಮೆಜೆಸ್ಟಿಕ್ ನಿಂದ ನಗರದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯ ವಾರ್ಷಿಕ ಕೆಲಸದ ದಿನಗಳಿಗೆ ವಿಧಿಸಿರುವ 100 ದಿನಗಳ ಮಿತಿ ತೆಗೆಯಬೇಕು ಕನಿಷ್ಠ ಕೂಲಿ 700 ರೂ ನೀಡಬೇಕು. ಕೆಲಸದ ಸ್ಥಳದಲ್ಲಿ ವೈದ್ಯಕೀಯ ವ್ಯವಸ್ಥೆ, ನೀರು, ನೆರಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಆಗಬೇಕು. ಯೋಜನೆಯಡಿ ಬಾಕಿ ಇರುವ 568 ಕೋಟಿ ರೂ ಕೂಲಿಯನ್ನು ಕೇಂದ್ರ ಸರ್ಕಾರ ಕೂಡಲೇ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾ ಹಾಕಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಬಲಗೊಳಿಸಬೇಕು. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ‌ನ್ನು ಖಾತ್ರಿಗೊಳಿಸಬೇಕು, ಪಟ್ಟಣ ಮತ್ತು ನಗರ ಪ್ರದೇಶಕ್ಕೂ ಉದ್ಯೋಗ ಖಾತರಿ ಯೋಜನೆ ಹಾಗೂ ಕುಡಿಯುವ ನೀರು ಒದಗಿಸಿ, ಖಾಸಗಿ ನೀರಿನ ದಂದೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತ್ನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವಿಮಲಾ ರಾವ್, ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ ಮೇರೆ ಮೀರುತ್ತಿದೆ. ಇದನ್ನು ತಡೆಯಲಾಗದ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ. ರಾಜ್ಯದಲ್ಲಿ ಉಗ್ರಪ್ಪ ಸಮಿತಿ ವರದಿ, ದೇಶದ ಮಟ್ಟದಲ್ಲಿ ವರ್ಮಾ ಸಮಿತಿ ಶಿಫಾರಸ್ಸನ್ನು ಸಂಪೂರ್ಣ ವಾಗಿ ಜಾರಿಗೆ ತರಬೇಕು. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಂಗಸರಿಗೆ ಸಮರ್ಪಕವಾಗಿ ಕೆಲಸ ಹಾಗೂ ಕೂಲಿ ಕೊಡಬೇಕು. ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು. ಸ್ತ್ರೀಶಕ್ತಿ ಸಂಘಟನೆಗಳ ಸುತ್ತುನಿಧಿಯನ್ನು ನಿಲ್ಲಿಸಿ, ಎಮ್ ಎಫ್ ಐ ತೆಕ್ಕೆಗೆ ತಳ್ಳಿ ಕಷ್ಟ ಅನುಭವಿಸುವಂತೆ ಆಗಿದೆ. ಇವೆಲ್ಲದರ ವಿರುದ್ಧ ಮಹಿಳೆಯರು ಬೀದಿಗೆ ಇಳಿದಿದ್ದೇವೆ ಎಂದರು. ಕನಿಷ್ಠ 700 ರೂ ಕೂಲಿ ಕೊಡಬೇಕು. 150 ದಿನದ ಕೆಲಸವನ್ನು ಇನ್ನೂ ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.

ಸೌಮ್ಯಶ್ರೀ
Kn_bng_04_Mahila_protest_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.