ETV Bharat / city

ಮರಾಠಿ ಭಾಷಾ ಹೋರಾಟಕ್ಕೂ, ಮರಾಠ ಸಮುದಾಯಕ್ಕೂ ಸಂಬಂಧವಿಲ್ಲ: ಮಾರುತಿರಾವ್ ಮುಳೆ

author img

By

Published : Jul 13, 2022, 5:11 PM IST

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಸುಮಾರು 100 ಕೋಟಿ ರೂ. ಅನುದಾನ ನೀಡಿದ್ದು, ಜುಲೈ 19ಕ್ಕೆ ಅಭಿವೃದ್ಧಿ ನಿಗಮದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಜೊತೆಗೆ ನಿಗಮದಿಂದ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾರುತಿರಾವ ಮುಳೆ ತಿಳಿಸಿದರು.

marathi-language-struggle-has-not-related-to-maratha-community-says-maruthi-rao-muley
ಮರಾಠಿ ಭಾಷಾ ಹೋರಾಟಕ್ಕೂ, ಮರಾಠ ಸಮುದಾಯಕ್ಕೂ ಸಂಬಂಧವಿಲ್ಲ: ಮಾರುತಿರಾವ್ ಮುಳೆ

ಬೆಂಗಳೂರು: ಮಹಾರಾಷ್ಟ್ರ ಗಡಿ ಭಾಗದಲ್ಲಿ ಮರಾಠಿ ಭಾಷಿಕರು ಭಾಷಾ ವಿಷಯಕ್ಕೆ ನಡೆಸುವ ಹೋರಾಟಕ್ಕೂ, ಮರಾಠ ಸಮುದಾಯಕ್ಕೂ ಸಂಬಂಧ ಇಲ್ಲ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮರಾಠ ಸಮುದಾಯ ಬೇರೆ, ಮರಾಠಿ ಭಾಷಿಕರು ಬೇರೆ. ಮರಾಠಿ ಭಾಷೆಯನ್ನು ಮರಾಠರು, ಬ್ರಾಹ್ಮಣರು, ಲಿಂಗಾಯತರು ಮಾತನಾಡುತ್ತಾರೆ. ಮರಾಠ ಸಮುದಾಯದ ರಾಜ್ಯದಲ್ಲಿ ಸಾಕಷ್ಟು ಇತಿಹಾಸ ಹೊಂದಿದೆ. ನಾವು ಇಲ್ಲಿನ ಮೂಲ ನಿವಾಸಿಗಳು ಎಂದರು.

ಶಿವಾಜಿಯ ಬಾಲ್ಯ ಕರ್ನಾಟಕದಲ್ಲಿಯಾಗಿದೆ. ಶಿವಾಜಿಯ ತಂದೆ ಷಹಾಜಿ ಬೆಂಗಳೂರಿನಲ್ಲಿ 20 ವರ್ಷ ಆಳ್ವಿಕೆ ಮಾಡಿದ್ದಾರೆ. ಕಾಡು ಮಲ್ಲೇಶ್ವರ ದೇವಸ್ಥಾನವನ್ನು ಷಹಾಜಿ ನಿರ್ಮಾಣ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಷಹಾಜಿ ಸಮಾಧಿ ಇದೆ. ಷಹಾಜಿ ಅಣ್ಣ ಸಂಭಾಜಿ ಸಮಾಧಿ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿದೆ. ಇವುಗಳನ್ನು ಮುಖ್ಯಮಂತ್ರಿಗಳು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮರಾಠ ಮಿಲಿಟರಿ ಕ್ಯಾಂಟೀನ್ ಸ್ಥಾಪನೆಗೆ ಯೋಜನೆ: ಮರಾಠ ಅಭಿವೃದ್ಧಿ ನಿಗಮದಿಂದ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಈ ವರ್ಷ 40 ಕ್ಯಾಂಟೀನ್ ತೆರೆಯಲಾಗುತ್ತದೆ. ಪ್ರತಿ ಘಟಕಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು ಮತ್ತು 2.5 ಲಕ್ಷ ರೂ. ಸಬ್ಸಿಡಿ ಕೊಡಲಾಗುವುದು. ಹಣಕಾಸು ಇಲಾಖೆ ಅನುಮೋದನೆ ಸಿಕ್ಕ ತಕ್ಷಣವೇ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾರುತಿರಾವ ಮುಳೆ ತಿಳಿಸಿದರು.

ಇದರ ಜೊತೆಗೆ ವೃತ್ತಿಪರ ಕೋರ್ಸ್​​ಗಳಿಗೆ ಸೇರ್ಪಡೆಯಾಗುವ ವಿದ್ಯರ್ಥಿಗಳಿಗೆ ಪ್ರತಿ ವರ್ಷ 1 ಲಕ್ಷದಂತೆ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು. ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುವ ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ರೈತರಿಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಗದಗ ಜಿಲ್ಲೆಯ ಶ್ರೀಮಂತಗಢ ರಣತೂರು ಯುದ್ದಭೂಮಿಯಲ್ಲಿ ಸೈನಿಕ ಶಾಲೆ ಆರಂಭಿಸಬೇಕು ಎನ್ನುವ ಚಿಂತನೆ ಇದೆ. ಅಲ್ಲಿ ಶಿವಾಜಿ ಮಹಾರಾಜರು ಸೈನಿಕ ತರಬೇತಿ ನೀಡುತ್ತಿದ್ದರಂತೆ. ಹಾಗಾಗಿ ಅಲ್ಲಿ ತರಬೇತಿ ಶಾಲೆ ಆರಂಭಿಸುವ ಯೋಜನೆ ಇದೆ.
ಈ ವರ್ಷ ಬಜೆಟ್​ನಲ್ಲಿ ಇದರ ಯೋಜನೆ ಹಾಕಿಕೊಳ್ಳಲಾಗಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರಿನಲ್ಲಿ ಈಗಾಗಲೇ ಸರ್ಕಾರವೇ ಸೈನಿಕ ಶಾಲೆ ಆರಂಭಕ್ಕೆ ಸಿದ್ದತೆ ಮಾಡಿಕೊಂಡಿದೆ. ಅದೇ ಮಾದರಿಯಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಂಡು ನಿಗಮದಿಂದ ಸೈನಿಕ ಶಾಲೆ ಆರಂಭಿಸಲಾಗುತ್ತದೆ ಎಂದರು.

ಜುಲೈ 19ಕ್ಕೆ ಅಭಿವೃದ್ಧಿ ನಿಗಮದ ಉದ್ಘಾಟನೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜುಲೈ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು ಎಂದು ಅವರು ಇದೇ ವೇಳೆ ತಿಳಿಸಿದರು.

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಗವಿಪುರಂನ ಭವಾನಿ ದತ್ತ ಪೀಠದ ಗೋಸಾಯಿ ಮಹಾ ಸಂಸ್ಥಾನ ಮಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ನಿಗಮದ ಅಂತರ್ಜಾಲ ತಾಣವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ. ನಿಗಮದ ಯೋಜನೆಗಳ ಪರಿಚಯ ಪುಸ್ತಕವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಅವರ ನಂತರ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗಮ ಸ್ಥಾಪನೆಯ ಆದೇಶ ಹೊರಡಿಸಿ, ನಿಗಮಕ್ಕೆ ಈ ವರ್ಷ ಸುಮಾರು 100 ಕೋಟಿ ರೂ. ಅನುದಾನ ನೀಡಿದ್ದಾರೆ.

ನಿಗಮದ ವತಿಯಿಂದ ಸಮುದಾಯದ ಮಹಿಳೆಯರು, ವಿದ್ಯಾರ್ಥಿಗಳು ಯುವಕರು, ರೈತರ ಅನುಕೂಲಕ್ಕೆ ಯೋಜನೆಗಳನ್ನು ರೂಪಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ ಮಾಡಲಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: ರಾಮಸೇನಾದ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.