ETV Bharat / city

ಕಾಂಗ್ರೆಸ್ ನಾಯಕರ 'ಸಮಸ್ಯೆ'ಗೆ 'ಸಮಾಧಾನ'ದಿಂದ ಸಿಗುತ್ತಿಲ್ಲ ಪರಿಹಾರ ; ಡಿಕೆಶಿಗೆ ತಪ್ಪಿದ ತಲೆನೋವು

ಕಾಂಗ್ರೆಸ್ ಪಕ್ಷಕ್ಕೆ ಹಳೆಯ ವೈಭವ ಮರುಕಳಿಸಲು ಹಿರಿಯರ ಮಾರ್ಗದರ್ಶನದೊಂದಿಗೆ ಯುವ ತಂಡ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದು ಕೆಪಿಸಿಸಿ ಅಧ್ಯಕ್ಷರು ತಿಳಿದ ವಿಚಾರವೇ ಆಗಿದೆ. ಆದರೆ, ಪಕ್ಷದ ನಾಯಕರ ಜೊತೆ ಸಮಾಲೋಚಿಸಲು ಕಾಲ ಕೂಡಿ ಬಂದಿಲ್ಲ. ದಿನದಿಂದ ದಿನಕ್ಕೆ ಯುವ ನಾಯಕರಿಗೆ ಮಣೆ ಹಾಕುವ ಯತ್ನದಲ್ಲಿರುವ ಶಿವಕುಮಾರ್‌ಗೆ ಈಗಾಗಲೇ ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್‌ಯುಐ) ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿರುವ ಗೊಂದಲ ದೊಡ್ಡ ತಲೆಬಿಸಿಯಾಗಿ ಕಾಡಿದೆ..

Many problems faced by DK Sivakumar in the appointment of President, Chairperson to various committees of KPCC
ಕಾಂಗ್ರೆಸ್ ನಾಯಕರ 'ಸಮಸ್ಯೆ'ಗೆ 'ಸಮಾಧಾನ'ದಿಂದ ಸಿಗುತ್ತಿಲ್ಲ ಪರಿಹಾರ; ಡಿಕೆಶಿಗೆ ತಪ್ಪಿದ ತಲೆನೋವು..!
author img

By

Published : Aug 3, 2021, 8:40 PM IST

ಬೆಂಗಳೂರು : ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳು ಹಾಗೂ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿಕೊಂಡು ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಈಗ ನಾನಾ ಕಿರಿಕಿರಿಗಳು ಎದುರಾಗುತ್ತಿವೆ.

ಕಳೆದ ತಿಂಗಳಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆಗೆ ಕೆಪಿಸಿಸಿ ವಿವಿಧ ಸಮಿತಿಗಳ ರಚನೆ ಅತ್ಯವಶ್ಯಕ. ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ಅವಕಾಶ ನೀಡುವ ಮೂಲಕ ಸಂಘಟನೆಗೆ ಇನ್ನೊಂದು ಆಯಾಮ ನೀಡಲು ಬಯಸಿದ್ದೇನೆ ಎಂದು ಹೈಕಮಾಂಡ್ ನಾಯಕರನ್ನು ಮನವರಿಕೆ ಮಾಡಿದ್ದರು. ಆದರೆ, ಈ ಅಭಿಲಾಷೆ ಅವರಿಗೆ ಇದೀಗ ತೊಡಕಾಗಿ ಕಾಡಿದೆ.

ಒಂದೆಡೆ ವಿವಿಧ ಸಮಿತಿಗಳ ರಚನೆಯ ಕಸರತ್ತು ನಡೆಸುತ್ತಿರುವ ಡಿ ಕೆ ಶಿವಕುಮಾರ್‌ಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಇನ್ನೊಂದೆಡೆ ಆಯ್ಕೆಯಾದ ವಿವಿಧ ವಿಭಾಗಗಳ ಅಧ್ಯಕ್ಷರ ಕುರಿತಾಗಿಯೇ ಅಪಸ್ವರ ಎದ್ದಿದೆ. ಒಂದೆಡೆ ವಿವಿಧ ಸಮಿತಿಗಳಿಗೆ ಹಿರಿಯರನ್ನು ಕೈಬಿಟ್ಟು ಯುವ ನಾಯಕರನ್ನು ಮುಂಚೂಣಿಗೆ ತರುವ ಪ್ರಯತ್ನಕ್ಕೆ ಶಿವಕುಮಾರ್ ಮುಂದಾಗಿರುವುದೇ ಹಲವು ಹಿರಿಯ ಕಾಂಗ್ರೆಸ್ಸಿಗರ ಬೇಸರಕ್ಕೆ ಕಾರಣವಾಗಿದೆ.

ಹೇಗಿದ್ದರೂ ತಮಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವರು ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ. ಈ ಹಿಂದೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಕಾಂಗ್ರೆಸಿಗರು ಕಳೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ತಮಗೆ ಅವಕಾಶ ಸಿಗದೇ ನಜೀರ್ ಅಹ್ಮದ್ ಮರು ಆಯ್ಕೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಬಿ ಕೆ ಹರಿಪ್ರಸಾದ್‌ಗೆ ಮಣೆ ಹಾಕಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ.

ಅಂದಿನಿಂದಲೇ ಸಾಕಷ್ಟು ಹಿರಿಯ ಕಾಂಗ್ರೆಸ್ಸಿಗರು ಪಕ್ಷದ ಕಚೇರಿಯತ್ತ ಬರುವುದನ್ನು ಕಡಿಮೆ ಮಾಡಿದ್ದರು. ಆದರೆ, ಇತ್ತೀಚೆಗೆ ಯುವ ನಾಯಕತ್ವಕ್ಕೆ ಮಣೆ ಹಾಕುವ ಮಾತನಾಡುತ್ತಿದ್ದಂತೆ ನಿರಾಸೆಗೆ ಒಳಗಾಗಿದ್ದಾರೆ. ಹೊಸ ತಂಡ ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಿವಕುಮಾರ್‌ಗೆ ಹಿರಿಯರ ಅಸಹಕಾರ ತುಂಬಾ ದೊಡ್ಡ ತಲೆಬಿಸಿಯಾಗಿ ಕಾಡಿದೆ. ಈ ಮಧ್ಯೆ ಒಬಿಸಿ ಘಟಕದ ಅಧ್ಯಕ್ಷರಾಗಿದ್ದ ಲಕ್ಷ್ಮಿನಾರಾಯಣ್ ರಾಜೀನಾಮೆ ನೀಡಿದ್ದರು. ಡಿಕೆಶಿ ಸೂಚನೆ ಮೇರೆಗೆ ಸದ್ಯ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಆದರೆ, ಅವರಲ್ಲಿಯೂ ಹಿಂದಿನಷ್ಟು ಆಸಕ್ತಿ ಈಗ ಉಳಿದಿಲ್ಲ.

ಇದನ್ನೂ ಓದಿ: ಕಾಂಗ್ರೆಸ್​ ವಿಭಾಗೀಯ ಮಟ್ಟದ ಸಭೆ: ಮೈಸೂರಿಗೆ ಆಗಮಿಸಿದ ಸುರ್ಜೇವಾಲ, ಡಿ.ಕೆ ಶಿವಕುಮಾರ್

ಹಿರಿಯರ ಬೇಸರಕ್ಕೆ ಹೇಳಿಕೆಯೇ ಕಾರಣವಾಯ್ತಾ?
ಯುವ ತಂಡವನ್ನು ಕಟ್ಟುವ ಮೂಲಕ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಮಾಡುವುದಾಗಿ ಡಿ ಕೆ ಶಿವಕುಮಾರ್ ಹೇಳಿಕೆ ನೀಡುವುದು ಹಲವು ಅಪಾರ್ಥಗಳಿಗೆ ಕಾರಣವಾಗಿದೆ. ತಮ್ಮನ್ನು ಒಳಗೊಂಡಂತೆ ಯುವ ತಂಡ ಕಟ್ಟಲಾಗುತ್ತದೆ ಎಂಬ ಅರಿವು ಮೂಡದೆ ತಮ್ಮನ್ನು ಕೈಬಿಡುತ್ತಾರೆ ಎಂಬ ತಪ್ಪು ಗ್ರಹಿಕೆಗೆ ಒಳಗಾಗಿದ್ದಾರೆ.

ಈ ಮೂಲಕ ಹಿರಿಯರು ಪಕ್ಷದ ಚಟುವಟಿಕೆಯಿಂದ ವಿಮುಖರಾಗಿದ್ದಾರೆ. ಪಕ್ಷದಲ್ಲಿ ಎದ್ದು ಕಾಣುತ್ತಿರುವ ಹತ್ತು ಹಲವು ಗೊಂದಲಗಳು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ವಿಚಾರದಲ್ಲಿ ತೊಡಗಿರುವ ಶಿವಕುಮಾರ್‌ಗೆ ಯಾರನ್ನು ವಿಶ್ವಾಸಕ್ಕೆ ಪಡೆದು ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದೀಗ ದಿಲ್ಲಿಗೆ ತೆರಳಿರುವ ಡಿಕೆಶಿ ಮತ್ತೊಮ್ಮೆ ರಾಷ್ಟ್ರೀಯ ನಾಯಕರ ಜತೆ ಸಮಾಲೋಚಿಸಿ ಪಕ್ಷದ ವಿವಿಧ ಸಮಿತಿಗಳಿಗೆ ಆದಷ್ಟು ಬೇಗ ಪದಾಧಿಕಾರಿಗಳು, ಅಧ್ಯಕ್ಷರ ನೇಮಕಕ್ಕೆ ಮನವಿ ಮಾಡಲಿದ್ದಾರೆ.

ಹಿರಿಯರ ಮಾರ್ಗದರ್ಶನ ಅಗತ್ಯ

ಕಾಂಗ್ರೆಸ್ ಪಕ್ಷಕ್ಕೆ ಹಳೆಯ ವೈಭವ ಮರುಕಳಿಸಲು ಹಿರಿಯರ ಮಾರ್ಗದರ್ಶನದೊಂದಿಗೆ ಯುವ ತಂಡ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದು ಕೆಪಿಸಿಸಿ ಅಧ್ಯಕ್ಷರು ತಿಳಿದ ವಿಚಾರವೇ ಆಗಿದೆ. ಆದರೆ, ಪಕ್ಷದ ನಾಯಕರ ಜೊತೆ ಸಮಾಲೋಚಿಸಲು ಕಾಲ ಕೂಡಿ ಬಂದಿಲ್ಲ. ದಿನದಿಂದ ದಿನಕ್ಕೆ ಯುವ ನಾಯಕರಿಗೆ ಮಣೆ ಹಾಕುವ ಯತ್ನದಲ್ಲಿರುವ ಶಿವಕುಮಾರ್‌ಗೆ ಈಗಾಗಲೇ ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್‌ಯುಐ) ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿರುವ ಗೊಂದಲ ದೊಡ್ಡ ತಲೆಬಿಸಿಯಾಗಿ ಕಾಡಿದೆ.

ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ ಗಣೇಶ್ ಆಯ್ಕೆಯನ್ನು ಎನ್ಎಸ್‌ಯುಐ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತಿದ್ದಾರೆ. ವಿದ್ಯಾರ್ಥಿ ಮುಖಂಡರೊಂದಿಗೆ ಸಮಾಲೋಚಿಸಿ ಕೀರ್ತಿ ಗಣೇಶ್ ಆಯ್ಕೆಯನ್ನು ಡಿಕೆಶಿ ಮಾಡಿದ್ದರು. ಆದರೆ, ಆಯ್ಕೆಯಾದ ಎರಡನೇ ದಿನಕ್ಕೆ ಇಲ್ಲಿ ಅಪಸ್ವರ ಎದ್ದು ಕಾಡಿದ್ದು, ಡಿಕೆಶಿ ನಿವಾಸದ ಮುಂದೆ ವಿದ್ಯಾರ್ಥಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಈ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರೂ ಸಹ ಈವರೆಗೂ ಅದಕ್ಕೊಂದು ಅಂತ್ಯ ಕಂಡಿಲ್ಲ.

ಇನ್ನೊಂದೆಡೆ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಉಂಟಾದ ಗೊಂದಲಗಳನ್ನು ಬದಿಗಿಟ್ಟು ಒಂದು ವರ್ಷಕ್ಕೆ ರಕ್ಷಾ ರಾಮಯ್ಯ ಹಾಗೂ ಮುಂದಿನ ಎರಡು ವರ್ಷಕ್ಕೆ ಮೊಹಮ್ಮದ್ ನಲಪಾಡ್ ಅಧ್ಯಕ್ಷರು ಎಂದು ಮಾಡಿರುವ ಘೋಷಣೆ ಸಹ ದೊಡ್ಡ ಮಟ್ಟದ ಗೊಂದಲ ಸೃಷ್ಟಿಸಿದೆ. ಪಕ್ಷದ ಹೈಕಮಾಂಡ್ ತಮ್ಮನ್ನು ಅಧ್ಯಕ್ಷರು ಎಂದು ಘೋಷಿಸಿದ ಸಂದರ್ಭ 3 ವರ್ಷ ಕಾಲಾವಧಿಗೆ ಮುಂದುವರಿಯುವಂತೆ ಭರವಸೆ ನೀಡಿತ್ತು.

ಆದರೆ, ಇದೀಗ ಒಂದು ವರ್ಷಕ್ಕೆ ಸೀಮಿತಗೊಳಿಸಿರುವುದು ಎಷ್ಟು ಸರಿ ಎಂದು ರಕ್ಷಾ ರಾಮಯ್ಯ ರಾಜ್ಯ ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಮುಂಬರುವ ಜನವರಿ ತಿಂಗಳಲ್ಲಿ ಅಧ್ಯಕ್ಷಗಾದಿಗೆ ಏರಲು ಮಹಮ್ಮದ್‌ ನಲಪಾಡ್ ಸಿದ್ಧತೆ ನಡೆಸುತ್ತಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಯಾರು ಕೂರಬೇಕು ಎಂಬ ಗೊಂದಲದ ವಿಚಾರ ಈಗಲೂ ಮುಂದುವರಿದಿದ್ದು, ಅದಕ್ಕೊಂದು ಅಂತ್ಯ ಕಾಣಿಸುವ ಕಾರ್ಯ ಕಾಂಗ್ರೆಸ್‌ನಿಂದ ಆಗಿಲ್ಲ.

ಒಂದೊಮ್ಮೆ ಒಂದೇ ವರ್ಷಕ್ಕೆ ರಕ್ಷಾ ರಾಮಯ್ಯ ಕೆಳಗಿಳಿಯುವ ಸ್ಥಿತಿ ಎದುರಾದರೆ ಮುಂದೆ ಎದುರಾಗುವ ತೊಂದರೆಗಳು ಅರಿವು ಕೂಡ ಕಾಂಗ್ರೆಸ್ ನಾಯಕರಿಗೆ ಮೂಡಿಲ್ಲ. ಕೇವಲ ಸಮಾಧಾನಗಳನ್ನು ಮಾಡುವ ಮೂಲಕವೇ ಸಮಸ್ಯೆಗಳಿಗೆ ತೇಪೆ ಹಚ್ಚುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದು, ಇದು ಎಷ್ಟು ಸಮಯ ಹಿಡಿಯುತ್ತದೆ ಎನ್ನುವುದು ಪ್ರಶ್ನೆಯಾಗಿ ಕಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.