ETV Bharat / city

ಸಿಎಂ ಕಚೇರಿಯಲ್ಲಿ ವಿಲೇವಾರಿಗಾಗಿ ಕಾದು ಕುಳಿತಿವೆ ರಾಶಿ ರಾಶಿ ಕಡತ: ಅಭಿವೃದ್ಧಿಗೆ ಹೊಡೆತ - ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ

ಆಗಸ್ಟ್ 2 ರಂದು ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 10 ರಂದು ಗುಣಮುಖರಾಗಿ ನಿವಾಸಕ್ಕೆ ಮರಳಿದ್ದರು. ಆದರೆ ಮುಂದಿನ 10 ದಿನ ತುರ್ತು ವಿಲೇವಾರಿ ಕಡತ ಹೊರತು ಇತರ ಕಡತಗಳನ್ನು ತರದಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ ಒಂದೊಂದು ಇಲಾಖೆಯಲ್ಲಿಯೂ ಹತ್ತಕ್ಕೂ ಹೆಚ್ಚು ಕಡತಗಳ ವಿಲೇವಾರಿ ಬಾಕಿ ಉಳಿದಿದೆ. ಹೀಗಾಗಿ ಸಿಎಂ ಕಚೇರಿಯಲ್ಲಿ ವಿಲೇವಾರಿಯಾಗಬೇಕಾದ ಕಡತಗಳ ರಾಶಿಯೇ ಸೃಷ್ಟಿಯಾಗಿದೆ.

Many files are pending for the approval of CM
ಸಿಎಂ ಕಚೇರಿಯಲ್ಲಿ ರಾಶಿ ರಾಶಿ ಕಡತ
author img

By

Published : Aug 18, 2020, 5:43 PM IST

ಬೆಂಗಳೂರು: ಕೊರೊನಾದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಣಮುಖರಾದರೂ ಕಡತಗಳಿಗೆ ಮಾತ್ರ ವಿಲೇವಾರಿ ಭಾಗ್ಯ ಸಿಕ್ಕಿಲ್ಲ. ಕಳೆದ 20 ದಿನಗಳಿಂದ ಸಿಎಂ ಕಚೇರಿಯಲ್ಲಿ ಹಲವು ಕಡತಗಳ ವಿಲೇವಾರಿ ಬಾಕಿ ಉಳಿದಿದ್ದು, ಅಭಿವೃದ್ಧಿ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಕಳೆದ 20 ದಿನಗಳಿಂದ ಸಿಎಂ ಕಚೇರಿ ಸ್ತಬ್ಧವಾಗಿದೆ. ಯಾವುದೇ ಕಡತಗಳ ವಿಲೇವಾರಿ ಆಗುತ್ತಿಲ್ಲ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ, ಹಣಕಾಸು ಇಲಾಖೆ, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಯೋಜನೆ, ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಣ್ಣ ಕೈಗಾರಿಕೆ ಹಾಗೂ ಮಂತ್ರಿಗಳಿಗೆ ಹಂಚಿಕೆಯಾಗದ ಇತರೆ ಇಲಾಖೆಗಳಿಗೆ ಸಂಬಂಧಪಟ್ಟ ಕಡತಗಳ ವಿಲೇವಾರಿ ಬಾಕಿ ಉಳಿದಿದೆ.

ಆಗಸ್ಟ್ 2 ರಂದು ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 10 ರಂದು ಗುಣಮುಖರಾಗಿ ನಿವಾಸಕ್ಕೆ ಮರಳಿದ್ದರು. ಆದರೆ ಮುಂದಿನ 10 ದಿನ ತುರ್ತು ವಿಲೇವಾರಿ ಕಡತ ಹೊರತು ಇತರ ಕಡತಗಳನ್ನು ತರದಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ ಆಗಸ್ಟ್ 1 ಸರ್ಕಾರಿ ರಜೆ ಹಾಗೂ 2 ಭಾನುವಾರ ಆಗಿದ್ದ ಕಾರಣ ಆಗಸ್ಟ್ ತಿಂಗಳಿನ ಆರಂಭದಿಂದ ಇಲ್ಲಿಯವರೆಗೆ ಸಹಜವಾಗಿ ವಿಲೇವಾರಿಯಾಗಬೇಕಾದ ಯಾವುದೇ ಕಡತಗಳ ವಿಲೇವಾರಿ ಆಗಿಲ್ಲ. ಒಂದೊಂದು ಇಲಾಖೆಯಲ್ಲಿಯೂ ಹತ್ತಕ್ಕೂ ಹೆಚ್ಚು ಕಡತಗಳ ವಿಲೇವಾರಿ ಬಾಕಿ ಉಳಿದಿದೆ. ಹೀಗಾಗಿ ಸಿಎಂ ಕಚೇರಿಯಲ್ಲಿ ವಿಲೇವಾರಿಯಾಗಬೇಕಾದ ಕಡತಗಳ ರಾಶಿಯೇ ಸೃಷ್ಟಿಯಾಗಿದೆ.

ನೆರೆ, ಕೊರೊನಾ ತುರ್ತು ಇರುವ ಕಡತಗಳನ್ನು ಮಾತ್ರ ಸಿಎಂ ವಿಲೇವಾರಿ ಮಾಡಿದ್ದಾರೆ. ಇತರ ಕಡತಗಳನ್ನು ನಿವಾಸಕ್ಕೆ ತರದಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಹೀಗಾಗಿ ಅಭಿವೃದ್ಧಿ ಕೆಲಸಗಳ ಕಡತಗಳಿಗೂ ಗ್ರಹಣ ಹಿಡಿದಂತಾಗಿದೆ. 20 ದಿನಗಳ ಕಾಲ ಕಡತಗಳು ಸಿಎಂ ಕಚೇರಿಯಲ್ಲಿಯೇ ಕೊಳೆಯುವಂತಾಗಿದೆ.

ಸಿಎಂ ಕಚೇರಿಯಲ್ಲಿ ರಾಶಿ ರಾಶಿ ಕಡತ

ಪ್ರತಿ ದಿನ ನೆರೆ, ಕೊರೊನಾ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯುತ್ತಿರುವ ಸಿಎಂ, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ಮಾತ್ರ ಮುಂದಾಗಿಲ್ಲ. ಸಿಎಂ ಸೂಚಿಸಿರುವ 10 ದಿನಗಳ ಅವಧಿ ಇನ್ನೆರಡು ದಿನಗಳಿಗೆ ಪೂರ್ಣಗೊಳ್ಳಲಿದ್ದು, ಆನಂತರ ಸ್ವತಃ ವಿಧಾನಸೌಧಕ್ಕೆ ತೆರಳಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ. ಅಗತ್ಯ ಮಾಹಿತಿ ಪಡೆದುಕೊಂಡ ನಂತರವೇ ಕಡತಗಳ ವಿಲೇವಾರಿ ಕಾರ್ಯವನ್ನು ಸಿಎಂ ಆರಂಭಿಸಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಹೆಚ್ಚು ಕಡಿಮೆ ಮೂರು ವಾರದ ಕಡತಗಳ ವಿಲೇವಾರಿ ಬಾಕಿ ಉಳಿದಿದ್ದು, ಇವುಗಳ ವಿಲೇವಾರಿಗೂ ಸಾಕಷ್ಟು ಸಮಯ ಬೇಕಾಗಲಿದೆ ಎನ್ನುವ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಕೊರೊನಾ ಸೋಂಕಿಗೆ ಸಿಎಂ ಸಿಲುಕಿದ್ದರಿಂದ ರಾಜ್ಯದ ಅಭಿವೃದ್ಧಿ ವೇಗಕ್ಕೆ ಅಡ್ಡಿಯಾದಂತಾಗಿದೆ. ಈಗಾಗಲೇ ಕೊರೊನಾ, ನೆರೆಹಾವಳಿಯಿಂದ ಅಭಿವೃದ್ಧಿ ಕಾರ್ಯಗಳ ವೇಗ ಕುಂಠಿತಗೊಂಡಿದ್ದು, ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಕುಂಠಿತವಾಗುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.