ETV Bharat / city

ಆರ್ ಆರ್ ನಗರ ಕ್ಷೇತ್ರದಲ್ಲಿ ನೀರಸ ಮತದಾನ... ಇವೇ ಕೆಲ ಕಾರಣಗಳು..!!!? - ಆರ್ ಆರ್ ನಗರ ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ

ಪ್ರತಿಷ್ಠಿತ ಆರ್ ಆರ್ ನಗರದಲ್ಲೇ ಅತಿ ಕಡಿಮೆ ಶೇ 42 ರಷ್ಟು ಮತದಾನವಾಗಿದೆ. ಎರಡು ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದಷ್ಟು ಮತದಾನ ವೇಗ ಪಡೆದಿಲ್ಲದಿರುವುದು ನಗರ ಪ್ರದೇಶದ ಜನರ ಚುನಾವಣೆ, ಅಭ್ಯರ್ಥಿಗಳ ಬಗೆಗಿನ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ.

voting
ಮತದಾನ
author img

By

Published : Nov 4, 2020, 9:25 PM IST

Updated : Nov 4, 2020, 9:35 PM IST

ಬೆಂಗಳೂರು: ನಿನ್ನೆ ನಡೆದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಾರದಿರುವುದು ನಗರ ಪ್ರದೇಶಗಳ ಜನ ಚುನಾವಣೆಗೆ ಅಂತಹ ಆಸಕ್ತಿಯನ್ನು ತೋರಿಸುವುದಿಲ್ಲ ಎನ್ನುವ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಕೋವಿಡ್ ಚಿಕಿತ್ಸಾ ಕೇಂದ್ರಗಳು, ಕಾರ್ಖಾನೆಗಳು, ಕಛೇರಿಗಳಿಗೆ ರಜೆ ನೀಡದಿರುವುದು ಪ್ರಮುಖ ಕಾರಣಗಳಾದರೂ, ಜನ ಈ ಮಧ್ಯಂತರ ಬಂದ ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದು ಕಂಡುಬಂದಿತು. ಕೇವಲ ಶೇ.45 ರಷ್ಟು ಮಾತ್ರ ಮತದಾನ ಈ ಕ್ಷೇತ್ರ ದಾಖಲಿಸಿದೆ.

ಕೆಲ ಯುವಕರು, ವಯಸ್ಸಾದವರು ಉತ್ಸಾಹ ತೋರಿದರೂ, ಮಧ್ಯ ವಯಸ್ಕರು ಮತಗಟ್ಟೆಗಳತ್ತ ಸುಳಿಯಲಿಲ್ಲ. ಇದು ಪಕ್ಷಾಂತರದಿಂದ ತೆರವಾದ ಸ್ಥಾನವಾಗಿದ್ದು, ಮತ್ತೆ ಮುಂದಿನ ಚುನಾವಣೆಗೆ ಇನ್ನು ಕೇವಲ ಎರಡೂವರೆ ವರ್ಷ ಉಳಿದಿರುವುದು ಸಹಾ ಜನರ ನಿರಾಸಕ್ತಿಗೆ ಕಾರಣವಾಗಿದೆ. ಮಧ್ಯಮ ವರ್ಗದ ಮತ್ತು ಬಡ ಜನರೇ ಹೆಚ್ಚಾಗಿ ಮತ ನೀಡಿದ್ದು ಕಂಡು ಬಂದಿದೆ. ಶ್ರೀಮಂತರು, ಐಟಿ, ಬಿ ಟಿ ಮಂದಿಯ ನಿರಾಸಕ್ತಿ ಮುಂದುವರೆದಿದೆ.

ಇನ್ನು ವಾರ್ಡ್ ವಾರು ವಿಂಗಡನೆಯನ್ನು ನೋಡಿದರೆ ಪ್ರತಿಷ್ಠಿತ ಆರ್ ಆರ್ ನಗರದಲ್ಲೇ ಅತಿ ಕಡಿಮೆ ಶೇ 42 ರಷ್ಟು ಮತದಾನವಾಗಿದೆ. ಹೆಚ್ಎಂಟಿ ವಾರ್ಡ್​ನಲ್ಲೂ ಕೂಡ ಕಾರ್ಖಾನೆಗಳಿಗೆ ರಜೆ ಕೊಡದ ಕಾರಣ ಮತದಾನದ ಪ್ರಮಾಣ ಕಡಿಮೆಯಾಗಿದೆ. ಒಟ್ಟಿನಲ್ಲಿ ಎರಡು ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದಷ್ಟು ಮತದಾನ ವೇಗ ಪಡೆದಿಲ್ಲದಿರುವುದು ನಗರ ಪ್ರದೇಶದ ಜನರ ಚುನಾವಣೆ, ಅಭ್ಯರ್ಥಿಗಳ ಬಗೆಗಿನ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ.

Last Updated : Nov 4, 2020, 9:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.