ETV Bharat / city

ಆರ್ಥಿಕ ವಹಿವಾಟು ಸ್ಥಗಿತ, ರಾಜ್ಯದಲ್ಲಿ ಮತ್ತೆ ಏರಿಕೆಯಾಗ್ತಿದೆ ನಿರುದ್ಯೋಗ - ರಾಜ್ಯದಲ್ಲಿ ಮತ್ತೆ ಏರಿಕೆಯಾಗ್ತಿದೆ ನಿರುದ್ಯೋಗ

ರಾಜ್ಯ ಶೇ 29.8ರಷ್ಟು ದರದ ನಿರುದ್ಯೋಗ ಪ್ರಮಾಣವನ್ನು ದಾಖಲಿಸಿತ್ತು. ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕಿಂತಲೂ ಹೆಚ್ಚಿನ ನಿರುದ್ಯೋಗವನ್ನು ಕರ್ನಾಟಕ ಹೊಂದಿತ್ತು.

Lockdown
Lockdown
author img

By

Published : May 6, 2021, 8:23 PM IST

ಬೆಂಗಳೂರು: ರಾಜ್ಯದಲ್ಲಿ ಈಗ ಮತ್ತೆ ಕೊರೊನಾ ಎರಡನೇ ಅಲೆ ಮಿತಿ ಮೀರಿ ಉಲ್ಬಣಿಸುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ರಾಜ್ಯದಲ್ಲಿ ಮತ್ತೆ ನಿರುದ್ಯೋಗ ಪ್ರಮಾಣ ಏರಿಕೆ ಕಾಣುವ ಆತಂಕ ಎದುರಾಗಿದೆ.

ಕೋವಿಡ್ ವೇಗಕ್ಕೆ ಬ್ರೇಕ್ ಹಾಕುವ ಯತ್ನವಾಗಿ ಲಾಕ್‌ಡೌನ್, ಕೋವಿಡ್ ನಿರ್ಬಂಧ ಮತ್ತೆ ಮರುಕಳಿಸುತ್ತಿವೆ. ರಾಜ್ಯದಲ್ಲಿ ಬಹುತೇಕ ಲಾಕ್‌ಡೌನ್ ಹೇರಲಾಗಿದ್ದು, ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗುತ್ತಿವೆ. ಈ ಲಾಕ್‌ಡೌನ್ ನಿರ್ಬಂಧಗಳು ಮೇ ತಿಂಗಳು ಪೂರ್ತಿ ಇರುವ ಸಾಧ್ಯತೆ ಇದ್ದು, ಜೂನ್ ತಿಂಗಳಲ್ಲೂ ಕಠಿಣ ನಿರ್ಬಂಧಗಳು ಇರುವುದು ಬಹುತೇಕ‌ ಖಚಿತವಾಗಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ವರ್ಷ ಲಾಕ್‌ಡೌನ್​ನಿಂದ ಉಂಟಾದ ಸಂಕಷ್ಟಗಳು ಈ ವರ್ಷ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ರಾಜ್ಯದಲ್ಲಿ ಹೆಚ್ಚಲಿರುವ ನಿರುದ್ಯೋಗ ಪ್ರಮಾಣ:

ಕೊರೊನಾ ಎರಡನೇ ಅಲೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್, ನಿರ್ಬಂಧಗಳನ್ನು ಹೇರುತ್ತಿದೆ. ಈ ನಿರ್ಬಂಧಗಳು ಕೋವಿಡ್ ಹಬ್ಬುವಿಕೆಗೆ ಎಷ್ಟು ಅಂಕುಶ ಹಾಕಲಿದೆಯೋ ಅನ್ನೋದು ಗೊತ್ತಿಲ್ಲ. ಆದರೆ, ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಕೊಡಲಿ ಏಟನ್ನಂತೂ ಹಾಕಿದೆ. ಕೊರೊನಾ ಎರಡನೇ ಅಲೆಗೆ ಪ್ರವಾಸೋದ್ಯಮ, ಸಾರಿಗೆ, ಸಿನಿಮಾ ಕ್ಷೇತ್ರ, ಹೋಟೆಲ್ ಉದ್ಯಮಗಳು, ಮಾಲ್​ಗಳು, ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆಗಳು ಬಹುತೇಕ ಸ್ಥಗಿತಗೊಂಡಿವೆ.

ಅಗತ್ಯೇತರ ವಸ್ತುಗಳ ಮಾರಾಟ ವಹಿವಾಟು, ಖಾಸಗಿ ಸಂಸ್ಥೆಗಳು, ಅಂಗಡಿ ಮುಂಗಟ್ಟಿಗೆ ಬೀಗ ಬಿದ್ದಿದೆ. ಆರ್ಥಿಕ ಚಟುವಟಿಕೆ, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತವಾಗಿರುವುದರಿಂದ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ ಕಾಣುತ್ತಿದೆ. ಸಿಎಂಐಇ(CMIE)ವರದಿ ಪ್ರಕಾರ ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 2ಕ್ಕೆ ಏರಿಕೆಯಾಗಿದೆ. ಅದೇ ಮಾರ್ಚ್ ತಿಂಗಳಲ್ಲಿ ಶೇ 1.2 ದರದಲ್ಲಿ ನಿರುದ್ಯೋಗ ಪ್ರಮಾಣ ಇತ್ತು. ಮೇ ತಿಂಗಳಲ್ಲಿ ಲಾಕ್‌ಡೌನ್ ಎಫೆಕ್ಟ್ ಹೆಚ್ಚಿರಲಿದ್ದು, ನಿರುದ್ಯೋಗ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ. ಸುಮಾರು ಶೇ 15-10ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಸಂಪೂರ್ಣ ಲಾಕ್‌ಡೌನ್ ಹೇರಿದರೆ ನಿರುದ್ಯೋಗ ಪ್ರಮಾಣ ಮತ್ತೆ ಶೇ 20ರ ಗಡಿ ದಾಟಲಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್ ವೇಳೆ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ಶೇ 29.8ರಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿತ್ತು. ಮೇ ತಿಂಗಳಲ್ಲಿ ಅದು ಶೇ 20ಕ್ಕೆ ಇಳಿಕೆ ಕಂಡಿತ್ತು. ಬಳಿಕ ಆರ್ಥಿಕ ಚಟುವಟಿಕೆ ಪುನರಾರಂಭಗೊಂಡ ಹಿನ್ನೆಲೆ ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಕಾಣಲು ಪ್ರಾರಂಭವಾಯಿತು. ಬಹುಬೇಗ ರಾಜ್ಯದ ನಿರುದ್ಯೋಗ ಪ್ರಮಾಣದಲ್ಲಿ ಚೇತರಿಕೆ ಕಂಡಿತ್ತು. ಈಗ ಮತ್ತೆ ಲಾಕ್‌ಡೌನ್ ಹೇರಿಕೆಯಾಗಿದ್ದು, ಕಳೆದ ವರ್ಷದಂತೆ ರಾಜ್ಯದಲ್ಲಿ ಈ ವರ್ಷನೂ ನಿರುದ್ಯೋಗ ಪ್ರಮಾಣ ಏರಿಕೆ ಕಾಣಲಿದೆ.

ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಸುಮಾರು 8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದಾರೆ. ಕಳೆದ ಬಾರಿ ಲಾಕ್‌ಡೌನ್​ನಿಂದ ಗಾರ್ಮೆಂಟ್ಸ್ ವಲಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಅಸಂಘಟಿತ ವಲಯದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಕಳೆದ ವರ್ಷ ನಿರುದ್ಯೋಗದ ಕರಾಳತೆ ಹೇಗಿದೆ?

ಕಳೆದ ವರ್ಷ ಲಾಕ್‌ಡೌನ್ ವೇಳೆ ರಾಜ್ಯ ಅತ್ಯಂತ ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನು ಹೊಂದಿತ್ತು. ರಾಜ್ಯ ಶೇ 29.8ರಷ್ಟು ದರದ ನಿರುದ್ಯೋಗ ಪ್ರಮಾಣವನ್ನು ದಾಖಲಿಸಿತ್ತು. ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕಿಂತಲೂ ಹೆಚ್ಚಿನ ನಿರುದ್ಯೋಗವನ್ನು ಕರ್ನಾಟಕ ಹೊಂದಿತ್ತು. ಕಳೆದ ವರ್ಷ ಲಾಕ್‌ಡೌನ್ ಏಟಿಗೆ ಪ್ರವಾಸೋದ್ಯಮ ವಲಯ ಸಂಪೂರ್ಣ ನೆಲಕಚ್ಚಿತ್ತು. ಪ್ರವಾಸೋದ್ಯಮ ವಲಯದಲ್ಲಿ ಸುಮಾರು 20 ಲಕ್ಷ ಮಂದಿ ಕೆಲಸ ಕಳೆದುಕೊಂಡಿರುವುದಾಗಿ ಇಲಾಖೆ ಅಂಕಿ-ಅಂಶ ನೀಡಿತ್ತು.

ಅದೇ ರೀತಿ ಹೊಟೇಲ್ ಕ್ಷೇತ್ರದಲ್ಲಿ ಕಳೆದ ಲಾಕ್‌ಡೌನ್ ಅವಧಿಯಲ್ಲಿ ಸುಮಾರು 1.20 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದರು. ಸುಮಾರು 3000 ಹೊಟೇಲ್​ಗಳು ಬಾಗಿಲು ಮುಚ್ಚಿದ್ದವು. ಇನ್ನು ಲಾಕ್‌ಡೌನ್ ಹೊಡೆತಕ್ಕೆ ಗಾರ್ಮೆಂಟ್ಸ್ ವಲಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕೆಲಸ‌ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಕಳೆದುಕೊಂಡವರ ಪೈಕಿ ಸುಮಾರು 9 ಸಾವಿರ‌ ಮಂದಿ ಮುಂದೆ ಬಂದು ಕಾರ್ಮಿಕ ಇಲಾಖೆಗೆ ದೂರು ಸಲ್ಲಿಕೆ ಮಾಡಿದ್ದರು. ಆದರೆ ಲಾಕ್‌ಡೌನ್​ಗೆ ಲಕ್ಷಾಂತರ ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲಾಕ್‌ಡೌನ್ ನಿಂದಾಗಿ ಶೇ 30ರಷ್ಟು ಸಣ್ಣ ಕೈಗಾರಿಕೆಗಳು ಖಾಯಂ ಆಗಿ ಬಾಗಿಲು ಹಾಕಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.