ETV Bharat / city

ಸದನವೇನು ಬೀಗರ ಮನೆಯಾ..? ಸಚಿವರ ಗೈರಿಗೆ ಸಭಾಪತಿ ಹೊರಟ್ಟಿ ಗರಂ..! - Karnataka Legislative council

ವಿಧಾನ ಪರಿಷತ್ ಕಲಾಪದಲ್ಲಿ ಸಚಿವರ ಗೈರಿಗೆ ಸಭಾಪತಿ ಬಸವರಾಜ ಬೊಮ್ಮಾಯಿ ಫುಲ್‌ ಗರಂ ಆಗಿದ್ದು, ಇದೇನು ಬೀಗರ ಮನೆಯಾ ಎಂದು ಪ್ರಶ್ನಿಸಿದ್ದಾರೆ.

Legislative council chairman basavaraj horatti unsatisfied for minister absent in session
ಸದನವೇನು ಬೀಗರ ಮನೆಯಾ..? ಸಚಿವರ ಗೈರಿಗೆ ಸಭಾಪತಿ ಹೊರಟ್ಟಿ ಗರಂ..!
author img

By

Published : Mar 9, 2022, 2:02 PM IST

ಬೆಂಗಳೂರು: ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಗೈರಿಗೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇನು ಬೀಗರ ಮನೆಯಾ ಎಂದು ಸಭಾನಾಯಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸದನವೇನು ಬೀಗರ ಮನೆಯಾ..? ಸಚಿವರ ಗೈರಿಗೆ ಸಭಾಪತಿ ಹೊರಟ್ಟಿ ಗರಂ..!

ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಶೂನ್ಯವೇಳೆ ಕೈಗೆತ್ತಿಕೊಳ್ಳುವ ಮುನ್ನ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವ ಸಚಿವರ ಹೆಸರನ್ನು ಸಭಾಪತಿಗಳು ಕರೆದರು. ಆದರೆ, ಸಚಿವರಾದ ಅಶ್ವತ್ಥನಾರಾಯಣ, ಸುಧಾಕರ್, ನಾಗೇಶ್, ಸುನೀಲ್ ಕುಮಾರ್ ಗೈರಾಗಿದ್ದರು. ಕೇವಲ ಓರ್ವ ಸಚಿವರು ಮಾತ್ರ ಹಾಜರಿದ್ದರು. ಸಚಿವರ ಗೈರಿಗೆ ಸಭಾಪತಿ ಗರಂ ಆದಾಗ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಶೂನ್ಯವೇಳೆ ಆರಂಭಿಸಿ 10 ನಿಮಿಷದಲ್ಲಿ ಸಚಿವರು ಬರುತ್ತಾರೆ ಎಂದರು.

ಸಭಾನಾಯಕರ ಹೇಳಿಕೆಗೆ ಕೆಂಡಾಮಂಡಲರಾದ ಸಭಾಪತಿಗಳು ಇದೇನು ಬೀಗರ ಮನೆಯಾ? ನಾಳೆಯಿಂದ ಕಡ್ಡಾಯ ಹಾಜರಿರುವ ಸಚಿವರು ಎನ್ನುವುದನ್ನೇ ತೆಗೆದುಬಿಡಿ ಎಂದು ಕಿಡಿಕಾರಿದರು. ದಿನಾ ಇದೇ ರೀತಿ ಸಚಿವರು ಗೈರಾದರೆ ಹೇಗೆ? ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಇದನ್ನೂ ಓದಿ: ಬಜೆಟ್‌ ಮೇಲಿನ ಚರ್ಚೆ.. ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪಿಸಿದ ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್‌ ಶಾಸಕರು ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.