ETV Bharat / city

ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ - ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ ತಿದ್ದುಪಡಿಗೆ ವಿಧಾನಸಭೆ ಅಂಗೀಕಾರ

ತುರ್ತು ಪರಿಸ್ಥಿತಿಯಲ್ಲಿ ಬಳಸಲು ಮೀಸಲಿಡುವ ಸಾದಿಲ್ವಾರು ನಿಧಿಯಲ್ಲಿ 80 ಕೋಟಿ ರೂ. ಬದಲಿಗೆ 500 ಕೋಟಿ ರೂ.ಗೆ ಹೆಚ್ಚಿಸಲು ವಿಧಾನಸಭೆ ಒಪ್ಪಿಗೆ ನೀಡಿದೆ.

legislature-approves-sadilvaru-fund-amendment
ವಿಧಾನಸಭೆ
author img

By

Published : Sep 24, 2020, 9:24 PM IST

ಬೆಂಗಳೂರು: ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ - 2020 ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಮೀಸಲಿಡುವ ಸಾದಿಲ್ವಾರು ನಿಧಿಯಲ್ಲಿ 80 ಕೋಟಿ ರೂ. ಬದಲಿಗೆ 500 ಕೋಟಿ ರೂ.ವರೆಗೆ ಹೆಚ್ಚಿಸಲು ವಿಧಾನಸಭೆ ಒಪ್ಪಿಗೆ ನೀಡಿದೆ.

ಸಿಎಂ ಯಡಿಯೂರಪ್ಪ ಅವರ ಪರವಾಗಿ ತಿದ್ದುಪಡಿ ವಿಧೇಯಕ ಮಂಡಿಸಿದ ಸಚಿವ ಜೆ. ಸಿ. ಮಾಧುಸ್ವಾಮಿ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಹಣ ಬಳಕೆ ಮಾಡಿಕೊಳ್ಳಲು ಅನುವಾಗುವಂತೆ ಸಾದಿಲ್ವಾರು ನಿಧಿಯಲ್ಲಿ ಆಪತ್ತು ಹಣ ಇಡಲಾಗುತ್ತಿತ್ತು. 1988ನೇ ಇಸವಿಯಲ್ಲಿ 2,380 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡುವಾಗ 80 ಕೋಟಿ ರೂ. ಸಾದಿಲ್ವಾರು ನಿಧಿ ಇಡಲು ಕಾನೂನಿನಲ್ಲಿ ಅವಕಾಶವಿತ್ತು. ಇದೀಗ ನಮ್ಮ ಬಜೆಟ್ ಗಾತ್ರ 2.37 ಲಕ್ಷ ಕೋಟಿಗಳಷ್ಟಾಗಿದ್ದರೂ ಈಗಲೂ 89 ಕೋಟಿ ರೂ. ಮಾತ್ರವೇ ಇದೆ ಎಂದು ವಿವರಿಸಿದರು.

ಕೋವಿಡ್ 19 ಕಾರಣದಿಂದ ದುರ್ಬಲ ವರ್ಗಗಳಿಗೆ ಹಲವು ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಇವುಗಳಿಗೆ ಆಯವ್ಯಯದಲ್ಲಿ ಅವಕಾಶ ಇರುವುದಿಲ್ಲ. ಈ ವೆಚ್ಚವನ್ನು ಭರಿಸಲು ಸಾದಿಲ್ವಾರು ನಿಧಿಯನ್ನು ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.

ಈಗ 80 ಕೋಟಿ ರೂ. ನಿಧಿಯಿಂದ ಏನೂ ಮಾಡಲಾಗುವುದಿಲ್ಲ. ಹೀಗಾಗಿ ಹಣವಿಲ್ಲದೇ ಕೊರೊನಾ ಸಂಕಷ್ಟದ ವೇಳೆ ಪರದಾಡುವಂತಾಯಿತು. ಇಂತಹ ಪರಿಸ್ಥಿತಿಗಳು ಎದುರಾದಾಗ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ 80 ಕೋಟಿ ರೂ. ಬದಲಿಗೆ 500 ಕೋಟಿ ರೂ.ವರೆಗೆ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.