ದೊಡ್ಡಬಳ್ಳಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು - ದೊಡ್ಡಬಳ್ಳಾಪುರ ರಸ್ತೆಯ ಮೇಲಿನ ನಾಯಕರಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಕೀಲ ಬಾಲಗಂಗಾಧರಯ್ಯ (61) ಹಾಗೂ ಅವರ ಕಕ್ಷಿದಾರ ಶಿವಶಂಕರಯ್ಯ (54)ಮೃತರು.
ಮೃತ ಬಾಲಗಂಗಾಧರಯ್ಯ ಗೌರಿಬಿದನೂರಿನ ಇಂದಿರಾ ನಗರದ ನಿವಾಸಿ. ಕಕ್ಷಿದಾರ ಶಿವಶಂಕರಯ್ಯ ಈಡಗೂರು ನಿವಾಸಿ. ಕೆಲಸ ನಿಮಿತ್ತ ಇವರು ದೊಡ್ಡಬಳ್ಳಾಪುರ ಕಡೆಯಿಂದ ಹಿಂದೂಪುರಕ್ಕೆ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ, ಕಾರಿನ ಚಾಲಕ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಹ ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯಾಗಳಾಗಿವೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಡಾ. ಪರಮೇಶ್ವರ್