ETV Bharat / city

ವಿಧಾನಸಭೆಯಲ್ಲಿ 'ಗದುಗಿನ ನಾರಾಯಣಪ್ಪ': ಆಗ ಸಿದ್ದರಾಮಯ್ಯ, ಈಗ ಬೊಮ್ಮಾಯಿ..!

ಇದೇ ತಿಂಗಳ 15ರಂದು ಕುಮಾರವ್ಯಾಸನ ಪದ್ಯವೊಂದನ್ನು ವಾಚಿಸಿ, ಸರ್ಕಾರವನ್ನು ಟೀಕಿಸಿದ್ದ ಸಿದ್ದರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ಅದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

kumaravyasa poem in karnataka legislative assembly
ವಿಧಾನಸಭೆಯಲ್ಲಿ 'ಗದುಗಿನ ನಾರಾಯಣಪ್ಪ': ಆಗ ಸಿದ್ದರಾಮಯ್ಯ, ಈಗ ಬೊಮ್ಮಾಯಿ..!
author img

By

Published : Sep 21, 2021, 5:26 AM IST

Updated : Sep 21, 2021, 6:23 AM IST

ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಕೆಲವು ದಿನಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರವ್ಯಾಸನ ಪದ್ಯವೊಂದನ್ನು ಹೇಳಿ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದರು. ಇದರ ಜೊತೆಗೆ ಕೆಲವೊಂದು ವ್ಯಾಕರಣ ವಿಶೇಷಗಳನ್ನೂ ಕೂಡಾ ಪ್ರಸ್ತಾಪಿಸಿದ್ದರು.

ಕೇಂದ್ರ ಸರ್ಕಾರದಿಂದ ಬೆಲೆ ಕಡಿಮೆ ಮಾಡಲು ಸಾಧ್ಯವಾಗದಿದ್ದರೆ, ರಾಜ್ಯದಲ್ಲಿ ಸೆಸ್ ಕಡಿಮೆ ಮಾಡಿ ಇಂಧನ ಬೆಲೆ ಕಡಿಮೆ ಮಾಡಬೇಕೆಂದೂ, ತಮಿಳುನಾಡಿನಲ್ಲಿ ಇಂಧನ ಬೆಲೆ ಕಡಿಮೆ ಮಾಡಿದಂತೆ ಇಲ್ಲೂ ಕಡಿಮೆ ಮಾಡಬೇಕು. ತಮಿಳುನಾಡಿಗಿಂತ ನಾವು ಕಡಿಮೆ ಇರಬಾರದು ಎಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಕುಮಾರವ್ಯಾಸನ ಕಾವ್ಯ ವಾಚನ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು, ಮೊದಲು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬೆಲೆ ಕಡಿಮೆ ಮಾಡಲಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರು ಕುಮಾರವ್ಯಾಸ ಪದ್ಯ ಹೇಳಿದ್ದಕ್ಕೆ ಪ್ರತಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸೋಮವಾರ ಕುಮಾರವ್ಯಾಸನ ಕವಿತೆಯೊಂದನ್ನು ಹೇಳಿ, ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಪರಸ್ಪರ ಕಾಲೆಳೆದುಕೊಂಡ ಕಾಂಗ್ರೆಸ್- ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಸಲಹೆ ಏನು?

Last Updated : Sep 21, 2021, 6:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.