ETV Bharat / city

ಪ್ರಯಾಣಿಕರ ಗಮನಕ್ಕೆ: KSRTC ಲಗೇಜ್ ದರ ಏರಿಕೆ; ಡಿ.10 ರಿಂದ ಹೊಸ ದರ ಜಾರಿ - ಕೆಎಸ್‌ಆರ್‌ಟಿಸಿ ಲಾಜಿಸ್ಟಿಕ್ಸ್

ಪ್ರಯಾಣಿಕರು ಲಗೇಜ್ ತೆಗೆದುಕೊಂಡು ಹೋದರೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಶೇ.10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ.

ksrtc-luggage-price-increase
ಕೆಎಸ್​ಆರ್​ಟಿಸಿ , ksrtc
author img

By

Published : Dec 2, 2021, 4:57 PM IST

ಬೆಂಗಳೂರು: ಆಟೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಸಾರ್ವಜನಿಕರಿಗೆ ಕೆಎಸ್​ಆರ್​ಟಿಸಿಯಿಂದಲೂ ದರ ಏರಿಕೆ ಶಾಕ್‌ ನೀಡಿದೆ. ಲಗೇಜ್ ದರ ಪರಿಷ್ಕರಿಸಿ, ಡಿಸೆಂಬರ್ 10 ರಿಂದಲೇ ಜಾರಿ ಮಾಡಲು ಕೆಎಸ್ಆರ್‌ಟಿಸಿ ಆದೇಶ ಹೊರಡಿಸಿದೆ.

KSRTC Luggage price Increase
ಆದೇಶ ಪ್ರತಿ

ಕೆಎಸ್​ಆರ್​ಟಿಸಿ ಲಗೇಜ್ ದರ ಏರಿಕೆ: ಪ್ರಯಾಣ ದರ ಅಲ್ಲದೆಯೇ, ಪ್ರಯಾಣಿಕರು ಲಗೇಜ್ ತೆಗೆದುಕೊಂಡು ಹೋದರೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ. 'ಕೆಎಸ್‌ಆರ್‌ಟಿಸಿ ಲಾಜಿಸ್ಟಿಕ್ಸ್' ಸೇವೆಗಳನ್ನು ಆರಂಭಿಸಲಾಗಿದ್ದು, ಈ ವ್ಯವಸ್ಥೆಯಲ್ಲಿ ಹೊಸ ತಂತ್ರಾಂಶ ಬಳಕೆ ಮೂಲಕ ಪ್ರಯಾಣಿಕ ರಹಿತ ಲಗೇಜ್‌ಗಳನ್ನು ಒಂದು ಬಸ್ ನಿಲ್ದಾಣದಿಂದ ಮತ್ತೊಂದು ಬಸ್ ನಿಲ್ದಾಣಕ್ಕೆ ವ್ಯವಸ್ಥಿತವಾಗಿ ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಹೊರಗುತ್ತಿಗೆ ಮೇರೆಗೆ ತಂತ್ರಾಂಶ ಅಭಿವೃದ್ಧಿಗೆ ಹಾಗೂ ವಹಿವಾಟು ನಡೆಸುವ ಏಜೆನ್ಸಿಯವರನ್ನು ಆಯ್ಕೆಗೊಳಸಿ ಆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಈ ವ್ಯವಸ್ಥೆಯ ಅನುಷ್ಠಾನಕ್ಕೆ ಪ್ರತ್ಯೇಕ ದರಪಟ್ಟೆಯನ್ನು ಜಾರಿಗೆ ತರಲಾಗಿದೆ ಎಂದು ಕೆಎಸ್​ಆರ್​ಟಿಸಿ ಪ್ರಕಟಿಸಿದೆ. ಇದೇ ದರವನ್ನು ಪ್ರಯಾಣಿಕ ಸಹಿತ ಲಗೇಜ್​ಗಳ ಸಾಗಾಣಿಕೆಗೂ ವಿಧಿಸಲಾಗಿದೆ.

KSRTC Luggage price Increase : ನೂತನ ದರ ಮತ್ತು ಹಿಂದಿನ ದರದ ಮಾಹಿತಿ ಈ ಕೆಳಗಿನಂತಿದೆ.

ಸ್ಟೇಜ್ಹಿಂದಿನ ಲಗೇಜ್ ದರನೂತನ ಲಗೇಜ್ ದರ
1 ರಿಂದ 55 ರೂ5 ರೂ
6 ರಿಂದ 1010 ರೂ10 ರೂ
11 ರಿಂದ 1515 ರೂ17 ರೂ
16 ರಿಂದ 2018 ರೂ21 ರೂ
21 ರಿಂದ 2521 ರೂ24 ರೂ
26 ರಿಂದ 30 25 ರೂ28 ರೂ
31 ರಿಂದ 35 29 ರೂ32 ರೂ
36 ರಿಂದ 40 33 ರೂ36 ರೂ
41 ರಿಂದ 4536 ರೂ39 ರೂ
46 ರಿಂದ 50 40 ರೂ43 ರೂ
51 ರಿಂದ 5544 ರೂ47 ರೂ
56 ರಿಂದ 6048 ರೂ51 ರೂ
61 ರಿಂದ 6551 ರೂ54 ರೂ
66 ರಿಂದ 7055 ರೂ58 ರೂ
156 ರಿಂದ 160123 ರೂ126 ರೂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.