ETV Bharat / city

KSRTC ನೌಕರರ ಕೂಟದಲ್ಲಿ ಬಿರುಕು : ಸಂಸ್ಥಾಪಕ ಅಧ್ಯಕ್ಷರ ನಿರ್ಧಾರಕ್ಕೆ ನೌಕರರು, ಪದಾಧಿಕಾರಿಗಳು ಗರಂ - KSRTC ನೌಕರರ ಸಂಸ್ಥಾಪಕ ಅಧ್ಯಕ್ಷ ನಿರ್ಧಾರಕ್ಕೆ ನೌಕರರು, ಪದಾಧಿಕಾರಿಗಳು ಗರಂ

ಇವರ ನಡುವಳಿಕೆಯಿಂದ ಬೇಸತ್ತು ಸ್ವಯಂ ರಾಜೀನಾಮೆ ನೀಡಿ ಪದಾಧಿಕಾರಿಗಳು ವಾಪಸ್‌ ಬಂದಿದ್ದಾರೆ. ಹಲವಾರು ನೌಕರರಿಗೆ ಆಗಿರುವ ಡ್ಯಾಮೇಜ್​ಗಳನ್ನು ಸರಿಪಡಿಸಲು ಸಾರಿಗೆ ಸಚಿವರನ್ನು ಜುಲೈ 16ರಂದು ಭೇಟಿ ಮಾಡಿ ನೌಕರರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ವೇತನದ ವಿಚಾರವಾಗಿ ಸಭೆ ಕರೆದು ಸರಿಪಡಿಸಬೇಕೆಂದು ಸುಮಾರು 2 ಗಂಟೆಗಳ ಕಾಲ ಚರ್ಚೆ ಮಾಡಿ ಮಾತನಾಡಿದ್ದೇವೆ ಎಂದು ರೆಬೆಲ್ ನೌಕರರು ಹೇಳಿದರು..

KSRTC ನೌಕರರ ಕೂಟದಲ್ಲಿ ಬಿರುಕು
KSRTC ನೌಕರರ ಕೂಟದಲ್ಲಿ ಬಿರುಕು
author img

By

Published : Jul 17, 2021, 7:55 PM IST

ಬೆಂಗಳೂರು : KSRTC ನೌಕರರು ಕೆಲ ತಿಂಗಳ ಹಿಂದೆ ಒಕ್ಕಲಿಗರ ಸಂಘಟನೆ, ರಾಜ್ಯ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಬೆಂಬಲದಿಂದ ಸಾರಿಗೆ ನೌಕರರ ಕೂಟದಿಂದ ತಮ್ಮ ಬೇಡಿಕೆ ಈಡೇರಿಕೆಗಾಗಿ ಬೃಹತ್ ಮುಷ್ಕರ ಮಾಡಿದ್ದರು. ಆದರೆ, ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸೇರಿ ಹಲವು ಸಂಘಟನೆಗಳು ಕೂಟದಿಂದ ಹೊರ ಬಂದಿವೆ.

ಈ ನಿಟ್ಟಿನಲ್ಲಿ ರೆಬೆಲ್ ನೌಕರರು, ಪದಾಧಿಕಾರಿಗಳು ಶನಿವಾರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಮುಷ್ಕರ ಸಂದರ್ಭದಲ್ಲಿ ಹಲವರು ನೌಕರರಿಗೆ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಕೇಸ್‌ಗಳು ಆಗಿದ್ದು, ಅವುಗಳನ್ನು ಸರಿಪಡಿಸಲು ಸರಿಯಾದ ಕ್ರಮ ತೆಗೆದುಕೊಳ್ಳದೆ, ಏಕ ಪಕ್ಷೀಯ ನಿರ್ಧಾರಗಳನ್ನು ಸಂಸ್ಥಾಪಕ ಅಧ್ಯಕ್ಷ ಆರ್ ಚಂದ್ರಶೇಖರ್ ಕೈಗೊಂಡಿದ್ದಾರೆ ಎಂದು ದೂರಿದರು.

KSRTC ನೌಕರರ ಕೂಟದಲ್ಲಿ ಬಿರುಕು

ಕೂಟದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಈ ವಿಷಯಗಳಲ್ಲಿ ವಿಫಲರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ನೌಕರರಿಗೆ 4 ತಿಂಗಳಿನಿಂದ ಸರಿಯಾದ ರೀತಿ ಸಂಬಳ ಸಿಗದೆ ನೌಕರರು ಕುಟುಂಬ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ ಎಂದು ತಿಳಿಸಿದರು.

ಆರ್‌ ಚಂದ್ರಶೇಖರ್ ಸಂಘವನ್ನು ಕಾನೂನು ರೀತಿ ನಡೆಸದೆ ತನಗೆ ಇಷ್ಟ ಬಂದ ಹಾಗೆ ಸಂಘದಲ್ಲಿರುವ ಹಲವಾರು ಪಧಾದಿಕಾರಿಗಳನ್ನು ಉಚ್ಛಾಟನೆ ಮಾಡಿ ಸಂಘವನ್ನು ಮನಸೋ ಇಚ್ಛೆ ನಡೆಸುವುದರಿಂದ ಉಳಿದ ಪಧಾದಿಕಾರಿಗಳು ಬೇಸರಗೊಂಡಿದ್ದಾರೆ ಎಂದರು.

ಇವರ ನಡುವಳಿಕೆಯಿಂದ ಬೇಸತ್ತು ಸ್ವಯಂ ರಾಜೀನಾಮೆ ನೀಡಿ ಪದಾಧಿಕಾರಿಗಳು ವಾಪಸ್‌ ಬಂದಿದ್ದಾರೆ. ಹಲವಾರು ನೌಕರರಿಗೆ ಆಗಿರುವ ಡ್ಯಾಮೇಜ್​ಗಳನ್ನು ಸರಿಪಡಿಸಲು ಸಾರಿಗೆ ಸಚಿವರನ್ನು ಜುಲೈ 16ರಂದು ಭೇಟಿ ಮಾಡಿ ನೌಕರರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ವೇತನದ ವಿಚಾರವಾಗಿ ಸಭೆ ಕರೆದು ಸರಿಪಡಿಸಬೇಕೆಂದು ಸುಮಾರು 2 ಗಂಟೆಗಳ ಕಾಲ ಚರ್ಚೆ ಮಾಡಿ ಮಾತನಾಡಿದ್ದೇವೆ ಎಂದು ರೆಬೆಲ್ ನೌಕರರು ಹೇಳಿದರು.

ಇದನ್ನೂ ಓದಿ : ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್​​​ಗೆ ದರ್ಶನ್ ಸವಾಲು!

ಸಾರಿಗೆ ಸಚಿವರು ಕೂಡ ಇದಕ್ಕೆ ಒಳ್ಳೆಯ ರೀತಿಯಲ್ಲಿ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಘಟಕಗಳಲ್ಲಿ ಹಲವಾರು ರೀತಿಯ ಕಿರುಕುಳಗಳು ಆಗುತ್ತಿವೆ. ಅದನ್ನು ಕೂಡ ಸರಿಪಡಿಸಬೇಕು ಎಂದು ತಿಳಿಸಿದ್ದೇವೆ. ಅದಕ್ಕೆ ಸ್ಪಂದಿಸಿದ್ದು, ಸೋಮವಾರ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ಅಲ್ಲಿ ಚರ್ಚೆ ಮಾಡಿ ಬಗೆಹರಿಸುವ ಭರವಸೆ ಸಾರಿಗೆ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು.

ಈ ಎಲ್ಲಾ ವಿಷಯಗಳ ಸಂಬಂಧ ಕ್ಯಾಬಿನೆಟ್ ದರ್ಜೆಯ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಎಸ್.ಆರ್.ಬೊಮ್ಮಾಯಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಉಪಾಧ್ಯಕ್ಷ ಎಂ ಆರ್‌ ವೆಂಕಟೇಶ್ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ರೆಬೆಲ್ ನೌಕರರು, ಪದಾಧಿಕಾರಿಗಳು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.