ETV Bharat / city

ಮೆಟ್ರೋ ಪಿಲ್ಲರ್​ಗೆ ಡಿಕ್ಕಿಯಾದ ಕೆಎಸ್​ಆರ್​​ಟಿಸಿ ಬಸ್​​: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಕೆಎಸ್ಆರ್​ಟಿಸಿ ಬಸ್ ಮೆಟ್ರೋ ಪಿಲ್ಲರ್​ಗೆ ಡಿಕ್ಕಿ

ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಕೆಂಗೇರಿ ಬಳಿ ಮೆಟ್ರೋ ಪಿಲ್ಲರ್​ಗೆ ಡಿಕ್ಕಿಯಾಗಿರುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ksrtc bus hit metro pillar in bengaluru
ಮೆಟ್ರೋ ಪಿಲ್ಲರ್​ಗೆ ಡಿಕ್ಕಿಯಾದ ಕೆಎಸ್​ಆರ್​​ಟಿಸಿ ಬಸ್​​: ಸಿಸಿಟಿವಿಯಲ್ಲಿ ದೃಶ್ಯ ಸೆರೆ
author img

By

Published : May 10, 2022, 12:29 PM IST

ಬೆಂಗಳೂರು: ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ಬಳಿ ಮೆಟ್ರೋ ಪಿಲ್ಲರ್​ಗೆ ಕೆಎಸ್ಆರ್​ಟಿಸಿ ಬಸ್ ಡಿಕ್ಕಿಯಾದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ಮುಂಜಾನೆ 1.30ರ ಸುಮಾರಿನಲ್ಲಿ ಮೆಟ್ರೋ ಪಿಲ್ಲರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಸಿಸಿಟಿವಿ ದೃಶ್ಯಗಳನ್ನ ಗಮನಿಸಿದಾಗ ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ಕಂಡುಬಂದಿದೆ.

ಕೆ.ಆರ್.ನಗರ ಡಿಪೋಗೆ ಸೇರಿದ 45 ಪ್ರಯಾಣಿಕರಿದ್ದ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಇಪ್ಪತ್ತೈದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಇದನ್ನೂ ಓದಿ: ಮೈಸೂರು: ತಂದೆ-ಮಗನ ಸುಲಿಗೆ ಯತ್ನ, ನಾಲ್ವರು ಯುವಕರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.