ಕೆಆರ್ಪುರ: ರಾಕಿಂಗ್ ಸ್ಟಾರ್ ಯಶ್ಗೆ ಬೈಕ್ವೊಂದನ್ನು ಉಡುಗೊರೆ ಕೊಡಲು ಕೆಜಿಎಫ್ ಸಿನಿಮಾ ಬೈಕ್ನಂತೆ ಆಲ್ಟರ್ ಮಾಡಿಸಿದ್ದ ಯುವಕರ ಗ್ಯಾಂಗ್ವೊಂದು ವ್ಹೀಲಿಂಗ್ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದೆ.
ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಕೆ.ಆರ್.ಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಏಳು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಹೊಸಕೋಟೆ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕುಂಬಳಹಳ್ಳಿಯ ಸುನೀಲ್, ಮುಬಾರಕ್ ಸೇರಿ ಇನ್ನಿಬ್ಬರನ್ನು ಕೆ.ಆರ್. ಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ವಶಕ್ಕೆ ಪಡೆದಿರುವ ಬೈಕ್ಗಳ ಮೇಲೆ ವ್ಹೀಲಿಂಗ್ ಮಾಡುವ ಚಿತ್ರಗಳು ಹಾಗೂ ಫ್ಯಾನ್ಸಿ ನಂಬರ್ಗಳು, ಹಿಂದೆ ಮಡ್ ಗಾರ್ಡ್ಗಳನ್ನು ಕಟ್ ಮಾಡಿರುವುದನ್ನು ಗಮನಿಸಿ ವ್ಹೀಲಿಂಗ್ ಮಾಡಲು ಬೈಕ್ಗಳನ್ನು ಬಳಸುತ್ತಿದ್ದರು ಎಂದು ಇನ್ಸ್ಪೆಕ್ಟರ್ ಮೊಹಮದ್ ಖಚಿತ ಪಡಿಸಿದ್ದಾರೆ.
ವಶಪಡಿಸಿಕೊಂಡ ಬೈಕ್ ಗಳ ಪೈಕಿ ಒಂದು ಪಲ್ಸರ್ ಬೈಕ್ ಅನ್ನು ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರು ಬಳಸಿರುವ ಬೈಕ್ ನಂತೆಯೇ ಆಲ್ಟರ್ ಮಾಡಲಾಗಿದೆ. ಅದೇ ಬೈಕ್ನಲ್ಲಿ ವ್ಹೀಲಿಂಗ್ ಮಾಡಿ ಯುವಕರು ಅಂದರ್ ಆಗಿದ್ದಾರೆ.