ETV Bharat / city

ರಾಜ್ಯದ ಸ್ಥಿತಿ ದೇವರೇ ಗತಿ! ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಟ್ವೀಟ್​ - ನಿರುದ್ಯೋಗ, ಆರ್ಥಿಕ ಕುಸಿತ

ಸರ್ಕಾರದ ಅಸಮರ್ಥತೆ 2020ರ ವರ್ಷದಲ್ಲಿ ರಾಜ್ಯದ ಜನರಿಗೆ ನರಕ ದರ್ಶನ ಮಾಡಿಸಿದೆ. ಈ ವರ್ಷವೂ ಬಿಜೆಪಿಯಲ್ಲಿನ ಬಿಕ್ಕಟ್ಟು ಜನರನ್ನು ಕಾಡುವ ಲಕ್ಷಣ ಗೋಚರಿಸಿವೆ ಎಂದು ಡಿ.ಕೆ.ಶಿವಕುಮಾರ್​ ಟ್ವೀಟ್​ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

D.K.Shivakumar
ಡಿ.ಕೆ.ಶಿವಕುಮಾರ್
author img

By

Published : Jan 1, 2021, 10:49 PM IST

ಬೆಂಗಳೂರು: 2020 ಮುಕ್ತಾಯವಾಗಿದ್ದು ಈ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್​ ಮೂಲಕ ಲೇವಡಿ ಮಾಡಿದ್ದಾರೆ.

  • ಅಧಿಕಾರ ದಾಹ, ಹಣ ಲೂಟಿ ಮಾಡುವುದರಲ್ಲಿ @BJP4Karnataka ಸರ್ಕಾರಕ್ಕಿರುವ ಆಸಕ್ತಿ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಇಲ್ಲ.

    ಸರ್ಕಾರದ ಅಸಮರ್ಥತೆ 2020ರ ವರ್ಷದಲ್ಲಿ ರಾಜ್ಯದ ಜನರಿಗೆ ನರಕ ದರ್ಶನ ಮಾಡಿಸಿದೆ.

    ಈ ವರ್ಷವೂ ಬಿಜೆಪಿಯಲ್ಲಿನ ಬಿಕ್ಕಟ್ಟು ರಾಜ್ಯದ ಜನರನ್ನು ಕಾಡುವ ಲಕ್ಷಣ ಗೋಚರಿಸಿವೆ.
    ಒಟ್ಟಿನಲ್ಲಿ ರಾಜ್ಯದ ಸ್ಥಿತಿ ದೇವರೇ ಗತಿ! pic.twitter.com/TUfHkDb8lB

    — D K Shivakumar, President, KPCC (@KPCCPresident) January 1, 2021 " class="align-text-top noRightClick twitterSection" data=" ">

ಟ್ವೀಟ್ ಮೂಲಕ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಅಧಿಕಾರ ದಾಹ, ಹಣ ಲೂಟಿ ಮಾಡುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕಿರುವ ಆಸಕ್ತಿ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಇಲ್ಲ. ಸರ್ಕಾರದ ಅಸಮರ್ಥತೆ 2020ರ ವರ್ಷದಲ್ಲಿ ರಾಜ್ಯದ ಜನರಿಗೆ ನರಕ ದರ್ಶನ ಮಾಡಿಸಿದೆ. ಈ ವರ್ಷವೂ ಬಿಜೆಪಿಯಲ್ಲಿನ ಬಿಕ್ಕಟ್ಟು ರಾಜ್ಯದ ಜನರನ್ನು ಕಾಡುವ ಲಕ್ಷಣ ಗೋಚರಿಸಿವೆ. ಒಟ್ಟಿನಲ್ಲಿ ರಾಜ್ಯದ ಸ್ಥಿತಿ ದೇವರೇ ಗತಿ!ಎಂದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಡಿಕೆಶಿ, ದೇಶದ ಜನರಿಗೆ 'ಅಚ್ಛೇ ದಿನ'ದ ಕನಸು ತೋರಿಸಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ 2020ರ ವರ್ಷದಲ್ಲಿ ಜನರಿಗೆ ಸಿಕ್ಕಿದ್ದು, ನೋವು, ನರಳಾಟ ಮಾತ್ರ. ನಿರುದ್ಯೋಗ, ಆರ್ಥಿಕ ಕುಸಿತ, ಸರ್ವಾಧಿಕಾರಿ ನೀತಿಗಳು, ಜನ ವಿರೋಧಿ ಕಾಯ್ದೆಗಳಿಂದ ದೇಶದ ಅಭಿವೃದ್ಧಿ ಪಥವನ್ನು ದಿಕ್ಕು ತಪ್ಪಿಸಿದ್ದೇ ಅವರ ಸಾಧನೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.