ETV Bharat / city

9ನೇ ತರಗತಿ ಪುಸ್ತಕದಲ್ಲಿ ಅಂಬೇಡ್ಕರ್ 'ಸಂವಿಧಾನ ಶಿಲ್ಪಿ' ಎಂಬುದನ್ನೇ ತೆಗೆದು ಹಾಕಿದ್ದಾರೆ : ಡಿಕೆಶಿ ಆಕ್ರೋಶ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

6ನೇ ತರಗತಿಯಲ್ಲಿ ಚನ್ನಣ್ಣ ವಾಲೇಕಾರ್ ಅವರು ಅಂಬೇಡ್ಕರ್ ಬಗ್ಗೆ ಬರೆದ 'ನೀ ಹೋದ ಮರುದಿನ' ಎಂಬ ಕವಿತೆ ತೆಗೆದಿದ್ದಾರೆ. ಅಲ್ಲದೇ, 9ನೇ ತರಗತಿ ಪುಸ್ತಕದಲ್ಲಿ ಅಂಬೇಡ್ಕರ್ 'ಸಂವಿಧಾನ ಶಿಲ್ಪಿ' ಎಂಬುದನ್ನೇ ತೆಗೆದು ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು..

DK shivakumar
ಡಿ.ಕೆ.ಶಿವಕುಮಾರ್
author img

By

Published : Jun 5, 2022, 2:43 PM IST

ಬೆಂಗಳೂರು : ನಮ್ಮ ದೇಶ ನಿಂತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಧಾರದ ಮೇಲೆ. ದೇಶದ ಸಮಸ್ತ ಜನರು 75 ವರ್ಷದಿಂದ ಆ ಸಂವಿಧಾನವನ್ನು ಒಪ್ಪಿ ಅದರಂತೆ ನಡೆಯುತ್ತಿದ್ದೇವೆ. ನಮ್ಮ ಸಂವಿಧಾನವನ್ನು ಹೊರ ದೇಶದವರು ಮೆಚ್ಚಿದ್ದಾರೆ. ಆದರೆ, 6ನೇ ತರಗತಿಯಲ್ಲಿ ಚನ್ನಣ್ಣ ವಾಲೇಕಾರ್ ಅವರು ಅಂಬೇಡ್ಕರ್ ಬಗ್ಗೆ ಬರೆದ 'ನೀ ಹೋದ ಮರುದಿನ' ಎಂಬ ಕವಿತೆ ತೆಗೆದಿದ್ದಾರೆ. ಅಲ್ಲದೇ, 9ನೇ ತರಗತಿ ಪುಸ್ತಕದಲ್ಲಿ ಅಂಬೇಡ್ಕರ್ 'ಸಂವಿಧಾನ ಶಿಲ್ಪಿ' ಎಂಬುದನ್ನೇ ತೆಗೆದು ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿರುವುದು..

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ. ಸಂವಿಧಾನದಲ್ಲಿ ಎಲ್ಲ ಹಕ್ಕು ಕೊಟ್ಟಿರುವ ಒಬ್ಬ ಶ್ರೇಷ್ಠ ನಾಯಕ. ಅಂದು ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಕೊಟ್ಟು, ಅವರ ಮುಖಂಡತ್ವದಲ್ಲಿ ಸಂವಿಧಾನ ರಚನೆ ಆಯಿತು ಎಂದರು.

7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಮಾಜ ಸುಧಾಕರ ಬಗ್ಗೆ ಇದೆ. ಅದರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯಿದೆ. ಈ ಹಿಂದೆ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ-ತಾಯಿ, ಹುಟ್ಟಿದ ಸ್ಥಳ, ದಿನಾಂಕ ಹೆಸರುಗಳಿದ್ದವು‌. ಆದರೆ, ಈಗ ಅಂಬೇಡ್ಕರ್ ಬೃಹತ್ ಹೋರಾಟಗಳನ್ನು ತೆಗೆದು ಹಾಕಿದ್ದಾರೆ.

ಇಷ್ಟು ಬೇಜವಾಬ್ದಾರಿ ಸರ್ಕಾರ ನೋಡಿಲ್ಲ. ನಾನು ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುವುದಲ್ಲಿ ಅರ್ಥ ಇಲ್ಲ. ಇದು ಬಿಜೆಪಿಯ ಮುಖವಾಡ ಮತ್ತು ಮನಸ್ಥಿತಿ. ಕುವೆಂಪು, ಭಗವದ್ಗೀತೆ, ಜೈನ ಸಮುದಾಯ, ನಾರಾಯಣಗುರು ಸೇರಿದಂತೆ ಎಲ್ಲರನ್ನು ನಾವು ಗೌರವದಿಂದ ಕಾಣುತ್ತೇವೆ. ಆದರೆ, ಬಿಜೆಪಿಯವರು ಅದನ್ನು ತಿರುಚಿ, ಸಾಮಾನ್ಯರ ವರ್ಗಕ್ಕೆ ಸೇರಿಸಿದ್ದಾರೆ ಎಂದು ದೂರಿದರು.

ಸರ್ಕಾರ ಎಸ್​ಟಿ ಸಮುದಾಯದ ಬೆನ್ನೆಲುಬಾಗಿ ನಿಂತಿದೆ. ಬೇಕಾದಷ್ಟು ಕಾನೂನು ತಂದಿದ್ದೇವೆ ಎನ್ನುತ್ತಾರೆ. ಅವರೇನು ದಡ್ಡರಾ. ಕಾಡಿನಲ್ಲಿ ಜೀವನ ಮಾಡಿಕೊಂಡು, ನಮಗೆ ರಕ್ಷಣೆ ಕೊಟ್ಟಿದ್ದಾರೆ. ಪಾಳೇಗಾರಿಗೆ ಮಾಡಿದ್ದಾರೆ, ಹೋರಾಟ ಮಾಡಿದವರು ಇದ್ದಾರೆ‌. ರಾಜ್ಯವನ್ನು ಆಳಿದವರು ಇದ್ದಾರೆ. ರಾಮಯಾಣ ಬರೆದ ವಾಲ್ಮೀಕಿ ಸಮುದಾಯವನ್ನು ತುಚ್ಛವಾಗಿ ನೋಡೋದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದರು.

ಸಿಎಂ ಅವರ ಪತ್ರಿಕಾ ಹೇಳಿಕೆ ದ್ವಂದ್ವವಾಗಿದೆ. ಡಬಲ್ ಸ್ಟ್ಯಾಂಡರ್ಡ್ ಆಗಿದೆ. ಸಮಿತಿ ವಿಸರ್ಜನೆಯಾದ ಮೇಲೆ, ಎಲ್ಲವೂ ಕೂಡ ಕ್ಲೋಸ್ ಆಗಬೇಕಲ್ಲವೇ?, ಬಸವಣ್ಣ ಹಾಗೂ ಕೆಂಪೇಗೌಡರ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಎಲ್ಲಾ ಶ್ರೀಗಳನ್ನು ನಾನು ಅಭಿನಂದಿಸುತ್ತೇನೆ. ಸಾಹಿತಿಗಳು, ಬರಹಗಾರರು ಧಿಕ್ಕಾರ ಕೂಗಿದ್ದಕ್ಕೆ ನಾನು ಅಭಿನಂದಿಸುತ್ತೇನೆ. ನಾವು ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ ಎಂದರು.

ಇದನ್ನೂ ಓದಿ: ಪರಿಷ್ಕೃತ ಪಠ್ಯಕ್ರಮವನ್ನು ಕಸದ ಬುಟ್ಟಿಗೆ ಎಸೆಯಿರಿ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.