ETV Bharat / city

ಕೋವಿಡ್ ಕೇರ್ ಸೆಂಟರ್ ಆಗಿ ಕೋರಮಂಗಲದ ಇನ್​ಡೋರ್ ಸ್ಟೇಡಿಯಂ ರೆಡಿ

author img

By

Published : Apr 17, 2021, 4:48 PM IST

ಏಪ್ರಿಲ್ 19 ರಿಂದ ಕೋರಮಂಗಲದ ಇನ್​ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್ ಆಗಿ ಸೋಂಕಿತರಿಗೆ ಲಭ್ಯವಾಗಲಿದೆ. ಕೊರೊನಾದ ಏ-ಸಿಮ್ಟಮ್ಯಾಟಿಕ್ ಲಕ್ಷಣಗಳಿರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತೆ.‌

Koramangal indoor stadium
ಕೋರಮಂಗಲದ ಇನ್​ಡೋರ್ ಸ್ಟೇಡಿಯಂ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ದಿನೇ ದಿನೆ ಕೋವಿಡ್ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಕೋರಮಂಗಲದ ಇನ್​ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್ ಆಗಿ ಸಕಲ ಸಿದ್ಧತೆಯೊಂದಿಗೆ ಸಂಪೂರ್ಣಗೊಂಡಿದೆ.

ಕೋವಿಡ್ ಕೇರ್ ಸೆಂಟರ್ ಆಗಿ ಸಿದ್ಧವಾದ ಕೋರಮಂಗಲ ಇನ್​ಡೋರ್ ಸ್ಟೇಡಿಯಂ

ಈಗಾಗಲೇ ಸೆಂಟರ್‌ಗೆ ಹೊಸ ಮಂಚ, ಬೆಡ್, ಫ್ಯಾನ್, ಕುರ್ಚಿಗಳು ಬಂದಿವೆ. ಹೀಗಾಗಿ ಏಪ್ರಿಲ್ 19 ರಿಂದ ಕೋರಮಂಗಲ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಲಭ್ಯವಾಗಲಿದೆ. ಆರೋಗ್ಯದ ಸಮಸ್ಯೆ ಇರುವ ಏ - ಸಿಮ್ಟಮ್ಯಾಟಿಕ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತೆ.‌

ಇ‌ನ್ನು ಕೋವಿಡ್ ಕೇರ್ ಸೆಂಟರ್​ನಲ್ಲಿ‌ ವೈದ್ಯರು ಹಾಗೂ ನರ್ಸ್‌ಗಳು ಸೋಂಕಿತರ ಚಿಕಿತ್ಸೆಗೆ ದಿನದ 24 ಗಂಟೆಗಳ ಕಾಲ ಲಭ್ಯವಿರಲಿದ್ದಾರೆ. ಸೋಂಕಿತರಿಗೆ ಲಾಂಡ್ರಿ, ಊಟ ತಿಂಡಿ ವ್ಯವಸ್ಥೆ ‌ಕೂಡ ಇಲ್ಲಿ ಮಾಡಲಾಗಿದೆ.

ಇನ್ನು‌ ಈ ಕುರಿತಾದ ಹೆಚ್ಚಿನ ಮಾಹಿತಿಯನ್ನ ಝೋನಲ್ ಸ್ಪೆಷಲ್ ಕಮಿಷನರ್ ತುಳಸಿ ನೀಡಿದ್ದು, ಸಿಸಿಸಿ ಸಿದ್ಧಗೊಂಡಿದೆ, ಏ-ಸಿಮ್ಟಮ್ಯಾಟಿಕ್ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಎಲ್ಲ ತರಹದ ಚಿಕಿತ್ಸೆ ಸೌಲಭ್ಯ ಇಲ್ಲಿ ಸಿಗಲಿದೆ. ಸದ್ಯಕ್ಕೆ 100 ಬೆಡ್ ರೆಡಿ ಇದೆ. ಮುಂದಿನ ದಿನಗಳಲ್ಲಿ 150 ಬೆಡ್ ರೆಡಿಯಾಗತ್ತೆ. ಒಟ್ಟು 250 ಬೆಡ್​ಗಳು ಕೋರಮಂಗಲ ಕೋವಿಡ್ ಕೇರ್ ಸೆಂಟರ್​ನಲ್ಲಿ ಲಭ್ಯವಾಗಲಿದೆ.‌ ಇಂದಿನಿಂದ ಕೋವಿಡ್ ಸೋಂಕಿತರ ಕೈಗಳಿಗೆ ಸ್ಟಾಪಿಂಗ್ ಹಾಕಲಾಗತ್ತದೆ. ಮನೆಯಲ್ಲಿ ಐಸೊಲೇಟ್ ಆಗುವ ಸೋಂಕಿತರಿಂದ ರೂಲ್ಸ್ ಬ್ರೇಕ್ ಮಾಡಲಾಗುತ್ತಿದೆ. ಹೀಗಾಗಿ ಸೋಂಕಿತರ ಕೈಗಳಿಗೆ ಸೀಲ್ ಹಾಕಲಾಗುತ್ತದೆ ಎಂದರು.

ಇದನ್ನೂ ಓದಿ: "ಮನೆ ಬಾಗಿಲಿಗೆ ಶಾಲೆ" ಯೋಜನೆಯ ಬಸ್​​ಗಳಿಗೆ ಚಾಲನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.