ETV Bharat / city

ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್: ಕಿಪ್‌ಕೊರಿರ್, ಚೆಪ್ಟೈ ಚಾಂಪಿಯನ್ಸ್

author img

By

Published : May 16, 2022, 9:24 AM IST

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಟಿಸಿಎಸ್ ಬೆಂಗಳೂರು ವಿಶ್ವ 10ಕೆ ಸ್ಪರ್ಧೆ ಭಾನುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು.

TCS World 10K Marathon in Bengaluru
ಚೆಪ್ಟೈ ಮತ್ತು ಕಿಪ್‌ಕೊರಿರ್

ಬೆಂಗಳೂರು: ಕೀನ್ಯಾದ ಓಟಗಾರರಾದ ನಿಕೋಲಸ್ ಕಿಪ್‌ಕೊರಿರ್ ಕಿಮೆಲಿ ಹಾಗೂ ಐರೀನ್ ಚೆಪ್ಟೈ ನಿನ್ನೆ(ಭಾನುವಾರ) ನಗರದಲ್ಲಿ ನಡೆದ 14ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್‌ನ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ನೂತನ ದಾಖಲೆಯೊಂದಿಗೆ ಚಾಂಪಿಯನ್ ಆಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನ 5,000 ಮೀ. ಓಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಕಿಮೆಲಿ ಹಾಗೂ ಚೆಪ್ಟೈ ಅವರು ಕ್ರಮವಾಗಿ 27 ನಿಮಿಷ 28 ಸೆಕೆಂಡ್ ಮತ್ತು 40 ನಿಮಿಷ 35 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಪ್ರಶಸ್ತಿ ಗೆದ್ದರು. ಕಿಮೆಲಿ, 2014ರಲ್ಲಿ ತಮ್ಮದೇ ದೇಶದ ಜೆಫ್ರಿ ಕಾಮ್ವೊರೋರ್ ಸೃಷ್ಟಿಸಿದ್ದ 27 ನಿಮಿಷ 44 ಸೆಕೆಂಡ್‌ಗಳ ದಾಖಲೆ ಮುರಿದರೆ, 27 ನಿಮಿಷ 43 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಇಥಿಯೋಪಿಯಾದ ಟಾಡೆಸೆ ವೊರ್ಕು ಎರಡನೇ ಸ್ಥಾನ ಪಡೆದರು. ಕೀನ್ಯಾದವರೇ ಆದ ಕಿಬಿವೊಟ್ ಕ್ಯಾಂಡಿ 27 ನಿಮಿಷ 57 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ 3ನೇ ಸ್ಥಾನ ಪಡೆದರು.

TCS World 10K Marathon in Bengaluru
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್

ಮಹಿಳೆಯರ ವಿಭಾಗದಲ್ಲಿ ಚೆಪ್ಟೈ 2018ರಲ್ಲಿ ದಿವಂಗತ ಆಗ್ನೆಸ್ ಟಿರೋಪ್ ಸೃಷ್ಟಿಸಿದ್ದ 31 ನಿಮಿಷ 19 ಸೆಕೆಂಡ್‌ಗಳ ದಾಖಲೆ ಮುರಿದರು. ಅವರದ್ದೇ ದೇಶದ ಎಲೆನ್ ಒಬಿರಿ (30 ನಿಮಿಷ 44 ಸೆಕೆಂಡ್) ಹಾಗೂ ಜಾಯ್ಸ್ ಟೆಲಿ (31ನಿಮಿಷ 47 ಸೆಕೆಂಡ್) ಕ್ರಮವಾಗಿ ನಂತರದ 2 ಸ್ಥಾನಗಳನ್ನು ಪಡೆದರು.

ಪಾರುಲ್ ಜೀವನ ಶ್ರೇಷ್ಠ ಸಾಧನೆ: ಭಾರತೀಯ ಮಹಿಳೆಯರ ವಿಭಾಗದಲ್ಲಿ ಜೀವನ ಶ್ರೇಷ್ಠ ಸಾಧನೆ ತೋರಿದ ಪಾರುಲ್ ಚೌಧರಿ 24 ನಿಮಿಷ 38 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಚಾಂಪಿಯನ್ ಆದರು. ಹಿಂದಿನ ಆವೃತ್ತಿಯ ಚಾಂಪಿಯನ್ ಸಂಜೀವಿನಿ ಜಾಧವ್ 34 ನಿಮಿಷ 45 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಎರಡನೇ ಸ್ಥಾನ ಪಡೆದರೆ, ಕೋಮಲಾ ಜಗದಾಳೆ 35 ನಿಮಿಷ 28 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದರು.

TCS World 10K Marathon in Bengaluru
ಪಾರುಲ್ ಚೌಧರಿ

ಭಾರತೀಯ ಪುರುಷರ ವಿಭಾಗ: ಭಾರತೀಯ ಪುರುಷರ ವಿಭಾಗದಲ್ಲಿ ಅಭಿಷೇಕ್ ಪಾಲ್ (39 ನಿಮಿಷ 05 ಸೆಕೆಂಡ್), ಕಾರ್ತಿಕ್ ಕುಮಾರ್ (30 ನಿಮಿಷ 06 ಸೆಕೆಂಡ್), ಗುಲ್ವೀರ್ ಸಿಂಗ್ (30 ನಿಮಿಷ 06 ಸೆಕೆಂಡ್) ಕ್ರಮವಾಗಿ ಪೋಡಿಯಂ ಸ್ಥಾನಗಳನ್ನು ಅಲಂಕರಿಸಿದರು.

TCS World 10K Marathon in Bengaluru
ಅಭಿಷೇಕ್ ಪಾಲ್

ವಿವಿಧ ವಿಭಾಗಗಳಲ್ಲಿ ವಿಜೇತರು: ಈ ನಾಲ್ಕು ಸ್ಪರ್ಧೆಗಳ ಜತೆಗೆ ಹಿರಿಯ ನಾಗರಿಕರ, ವಿಶೇಷ ಚೇತನರ ಹಾಗೂ ಮಜ್ಜಾ ರನ್ ಮ್ಯಾರಥಾನ್ ನಡೆಯಿತು. 10ಕೆ ಓಟದ ಅಂತಾರಾಷ್ಟ್ರೀಯ ಅಂಬಾಸಿಡರ್ ಹಾಗೂ ನಾಲ್ಕು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ಓಟಗಾರ ಜಸ್ಟಿನ್ ಗ್ಲಾಟ್ಲಿನ್ ಗಮನ ಸೆಳೆದರು.

TCS World 10K Marathon in Bengaluru
ಕೀನ್ಯಾದ ಓಟಗಾರ ನಿಕೋಲಸ್ ಕಿಪ್‌ಕೊರಿರ್ ಕಿಮೆಲಿ

ಅಪ್ಪು ಸ್ಮರಣೆ: ಇತ್ತೀಚೆಗೆ ನಿಧನರಾದ ಸ್ಯಾಂಡಲ್‌ವುಡ್ ತಾರೆ ಪವರ್​​ ಸ್ಟಾರ್​​ ಪುನೀತ್ ರಾಜ್‌ಕುಮಾರ್ ಅವರನ್ನು ಮ್ಯಾರಥಾನ್ ವೇಳೆ ಸ್ಮರಿಸಲಾಯಿತು. ಅವರ ದೊಡ್ಡ ಕಟೌಟ್ ಕಂಠೀರವ ಸ್ಟೇಡಿಯಮ್‌ನಲ್ಲಿ ರಾರಾಜಿಸಿತು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್​ ಅವರು ಮಜ್ಜಾ ರನ್‌ಗೆ ಚಾಲನೆ ಕೊಟ್ಟರು. ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ 1 ಗಂಟೆ 8 ನಿಮಿಷ 20 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಗಮನ ಸೆಳೆದರು.

TCS World 10K Marathon in Bengaluru
ಐರೀನ್ ಚೆಪ್ಟೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.