ಬೆಂಗಳೂರು: ಇಲ್ಲಿನ ಕೊಡಿಗೇಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ಹಾಗೂ ವೈದ್ಯಕೀಯ ಸಿಬ್ಬಂದಿಯೊಬ್ಬರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊಡಿಗೇಹಳ್ಳಿ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕುಮಾರ್, ಪಿಆರ್‌ಓ ಗೀತಾ ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
ಕೊಡಿಗೇಹಳ್ಳಿಯ ಖಾಸಗಿ ಆಸ್ಪತ್ರೆಗೆ ಸಂಜೆ 7 ಗಂಟೆಗೆ ಕೋವಿಡ್ ಸೋಂಕಿತ ಪರ ಐದಾರು ಮಂದಿ ಸಂಬಂಧಿಕರು ಗುಂಪಿನಲ್ಲಿ ಬರುಲು ಯತ್ನಿಸಿದ್ದರು. ಈ ವೇಳೆ ರೋಗಿ ಸಂಬಂಧಿಕರನ್ನು ತಡೆದು ಒಬ್ಬೊಬ್ಬರಾಗಿ ಬರುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಏಕಾಏಕಿ ಮಾರಕಾಸ್ತ್ರ ಹಿಡಿದು ವೈದ್ಯ ಕುಮಾರ್, ಪಿಆರ್‌ಓ ಗೀತಾ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಕೊರೊನಾ ಪಾಸಿಟಿವ್: ಸೋಂಕಿತನ ಬಿಟ್ಟು ಅದೇ ಹೆಸರಿನ ಬೇರೆ ವ್ಯಕ್ತಿಯ ಹಿಂದೆ ಅಲೆದಾಡಿದ ಸಿಬ್ಬಂದಿ)