ಬೆಂಗಳೂರು: ದೆಹಲಿಯಲ್ಲಿ ಬಂಧಿತನಾಗಿರುವ ಡ್ರಗ್ ಪೆಡ್ಲರ್ ವಿರೇನ್ ಖನ್ನಾ ಹಿನ್ನೆಲೆಯನ್ನ ಕಲೆಹಾಕಿರುವ ಸಿಸಿಬಿ ಪೊಲೀಸರು, ಸದ್ಯ ಆತನ ಮಾಹಿತಿ ಮೇರೆಗೆ ಮನೆ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪಾರ್ಟಿ ಆಯೋಜಕನಾಗಿರುವ ಖನ್ನಾ, ರಾಗಿಣಿ ಆಪ್ತನಾಗಿ ಗುರುತಿಸಿಕೊಂಡಿದ್ದ. ಹಾಗೆ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಗಾಂಜಾ ಪೂರೈಕೆ ಮಾಡುವ ಕೆಲಸಗಳನ್ನ ಈತ ಮಾಡ್ತಿದ್ದ ಎನ್ನಲಾಗ್ತಿದೆ. ಸದ್ಯ ಸಿಸಿಬಿ ವಶದಲ್ಲಿರುವ ಖನ್ನಾನಿಂದ ಮಾಹಿತಿ ಪಡೆದು ಬೆಂಗಳೂರಿನ ಶಾಂತಿನಗರ ಬಳಿ ಇರುವ ರಿಚ್ಮಂಡ್ ಸರ್ಕಲ್ ಮತ್ತು ದೆಹಲಿಯ ನಿವಾಸದ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ಆತನ ಮನೆಯಲ್ಲಿ ಗಾಂಜಾ ಏನಾದರು ಇರಬಹುದು ಅನ್ನೋ ಶಂಕೆ ಮೇರೆಗೆ ಶೋಧ ಮುಂದುವರೆಸಿದ್ದು, ಸದ್ಯ ದಾಳಿಯನ್ನ ಇನ್ಸ್ ಪೆಕ್ಟರ್ ಮಹಮದ್ ಸಿರಾಜ್, ಶ್ರೀಧರ್, ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ಮುಂದುವರೆಸಲಾಗಿದೆ. 'ಟೇಕ್ ಯೂ ಆರ್ ಓನ್ ಕಾರ್- ಟೇಕ್ ಯೂ ಆರ್ ಓನ್ ಡ್ರಿಂಕ್ ಕಾನ್ಸೆಪ್ಟ್' ಅಡಿ ಓಪನ್ ಏರ್ ಥಿಯೇಟರ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಕಾರಿನಲ್ಲಿಯೇ ಕುಳಿತು ಬಾಲಿವುಡ್, ಹಾಲಿವುಡ್ ಚಿತ್ರಗಳನ್ನ ನೋಡಿ ಮೋಜು-ಮಸ್ತಿ ಮಾಡ್ತಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ಈ ಪಾರ್ಟಿಯಲ್ಲಿ ಭಾಗಿಯಾಗಬೇಕಾದರೆ ವೆಬ್ಸೈಟ್ವೊಂದರಲ್ಲಿ ಬುಕ್ಕಿಂಗ್ ಮಾಡಿಸಿ ಆಹ್ವಾನ ಮಾಡಿ, ನಂತರ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ ಸೇವನೆ ಮಾಡ್ತಿದ್ದರು. ಹಾಗೆ ಡ್ರಗ್ ಪೂರೈಕೆ ಕೂಡ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ಮಾಡಲಾಗಿದೆ.
ಸದ್ಯ ಈತ ಎಲ್ಲಿ ಪಾರ್ಟಿ ಮಾಡುತ್ತಿದ್ದ, ಹಾಗೆ ಈತನಿಗೆ ಸೇರಿದ ಅಪಾರ್ಟ್ಮೆಂಟ್, ಮನೆ, ಪಬ್ ಪಾರ್ಟಿ ನಡೆಸುವ ಸ್ಥಳಗಳಲ್ಲಿ ದಾಳಿ ಮುಂದುವರೆದಿದೆ.