ETV Bharat / city

ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆಯಲ್ಲಿ ಕೆಜಿಎಫ್ ಚಾಪ್ಟರ್ 2 - kgf chapter 2 box office collection in two days

ವಿಶ್ವಾದಾದ್ಯಂತ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೊಂಡು ಎಲ್ಲಡೆ ಉತ್ತಮ ಪ್ರದರ್ಶನಗೊಳ್ಳುತ್ತಿದೆ.ಈ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡನೇ ದಿನಕ್ಕೆ ಒಟ್ಟು 255 ಕೋಟಿ ಕ್ಲಬ್ ಸೇರುವ‌‌‌‌ ಮೂಲಕ, ಬಾಕ್ಸ್ ಆಫೀಸ್‌ನಲ್ಲಿ ಹೊಸ‌ ದಾಖಲೆ ಬರೆದಿದೆ.

kgf-chapter-2-box-office-collection-in-two-days
ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆಯಲ್ಲಿ ಕೆಜಿಎಫ್ ಚಾಪ್ಟರ್ 2
author img

By

Published : Apr 16, 2022, 1:41 PM IST

ವಿಶ್ವದಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾದ‌ ಹವಾ ಜೋರಾಗಿದ್ದು, ಬಿಡುಗಡೆ ಆದ ಎರಡನೇ ದಿನ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ನಿರ್ಮಾಪಕ ವಿಜಯ್ ಕಿರಂಗದೂರ್ ಬಹುಕೋಟಿ ವೆಚ್ಚದ, ಕೆಜಿಎಫ್ ಚಾಪ್ಟರ್ 2 ಸಿನಿಮಾ‌ ಅಂದುಕೊಂಡಂತೆ ಸಿನಿಮಾ ಪ್ರೇಕ್ಷಕರನ್ನ ರಂಜಿಸುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೂ ದಾಖಲೆ ಬರೆದಿದೆ.

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು, ಎರಡನೇ ದಿನವೂ ವಿಶ್ವದಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಮೊದಲನೇ ದಿನ‌ ವಿಶ್ವಾದಾದ್ಯಂತ 185 ಕೋಟಿ ರೂ. ಗಳಿಸುವ ಮೂಲಕ ಕೆಜಿಎಫ್ ಚಾಪ್ಟರ್ 2 ದಾಖಲೆ ಸೃಷ್ಟಿಸಿತ್ತು. ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಿರ್ಮಾಣದ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತದಲ್ಲಿ ಒಟ್ಟು 135 ಕೋಟಿ ಗಳಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಎರಡನೇ ದಿನವು ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರೆಸಿದೆ.

ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಹಾಗೆ, ಎರಡನೇ ದಿನವು ಭಾರತದಲ್ಲಿ ಬರೋಬ್ಬರಿ 70 ಕೋಟಿ ರೂ. ಗಳಿಸಿರುವುದಾಗಿ ಅಂದಾಜಿಸಲಾಗಿದೆ. ಯಾಕೆಂದರೆ ಶುಕ್ರವಾರ ಕೂಡ ಸರ್ಕಾರಿ ರಜೆ ಇದ್ದ ಕಾರಣ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡಿದೆ. ಈ ಲೆಕ್ಕಾಚಾರದ ಮೇಲೆ ಎರಡನೇ ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ 70 ಕೋಟಿ ಗಳಿಸುವ ಮೂಲಕ, ಎರಡನೇ ‌ದಿನವು ದಾಖಲೆ ಬರೆದಿದೆ ಎಂದು ಹೇಳಲಾಗಿದೆ.

kgf-chapter-2-box-office-collection-in-two-days
ಭಾರತದಲ್ಲಿ ಮೊದಲ ದಿನದ ಗಳಿಕೆ

ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಫಸ್ಟ್ ಡೇ ಬರೋಬ್ಬರಿ 35 ಕೋಟಿ ಗಳಿಸಿದ್ದು, ಎರಡನೇ ದಿನ ಕರ್ನಾಟಕದಲ್ಲಿ ಭರ್ಜರಿ 20 ಕೋಟಿ ಗಳಿಸಿರುವುದಾಗಿ ಹೇಳಲಾಗಿದೆ.

ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ‌ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 45‌‌ ಕೋಟಿ ಗಳಿಸಿರುವುದಾಗಿ ಹೇಳಲಾಗಿದೆ. ಯಾಕೆಂದರೆ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ದೆಹಲಿ ಸೇರಿದಂತೆ ಹಲವು ಕಡೆ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇದರ ಜೊತೆಗೆ ತೆಲುಗು, ತಮಿಳು ಹಾಗೂ ಮಲೆಯಾಳಂ ಈ ಭಾಷೆಗಳಲ್ಲಿ 5 ಕೋಟಿ ಗಳಿಸಿರುವುದಾಗಿ ಅಂದಾಜಿಸಲಾಗುತ್ತಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡನೇ ದಿನಕ್ಕೆ ಒಟ್ಟು 255 ಕೋಟಿ ಕ್ಲಬ್ ಸೇರುವ‌‌‌‌ ಮೂಲಕ, ಬಾಕ್ಸ್ ಆಫೀಸ್‌ನಲ್ಲಿ ಹೊಸ‌ ದಾಖಲೆ ಬರೆದಿದೆ. ವಾರಾಂತ್ಯದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ‌ ಇನ್ನು ಹೆಚ್ಚು ಗಳಿಸುವ ಬಗ್ಗೆ ಅಂದಾಜಿಸಲಾಗಿದೆ. ಆದರೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ಎರಡನೇ ದಿನ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕಲೆಕ್ಷನ್‌ ಎಷ್ಟು ಅನ್ನೋದನ್ನ ಅಧಿಕೃತವಾಗಿ ಇನ್ನೂ ತಿಳಿಸಬೇಕಿದೆ.

ಓದಿ : KGF Chapter 2 ಸಿನಿಮಾದ ಎಡಿಟರ್​​ಗೆ ಜಸ್ಟ್​ 20 ವರ್ಷ : ಯಶ್​​ ಅಭಿಮಾನಿಯ ಸಂಕಲನಕ್ಕೆ ಎಲ್ಲರೂ ಫಿದಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.