ETV Bharat / city

ಕೋವಿಡ್​ ತಂದಿಟ್ಟ ಸಂಕಷ್ಟ: ಕುವೈತ್​​​ನಲ್ಲಿರುವ ಕನ್ನಡಿಗರ ಸ್ಥಿತಿ ಅತಂತ್ರ

ಕೆಲಸಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಕುವೈತ್​ಗೆ ತೆರಳಿದ ಅನೇಕ ಯುವಕರು ಇದೀಗ ಸಂಕಷ್ಟದಲ್ಲಿದ್ದು, ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಅಂಗಲಾಚುತ್ತಿದ್ದಾರೆ.

kannadigas in Kuwait
ಕುವೈತ್​​​ನಲ್ಲಿರುವ ಕನ್ನಡಿಗರ ಸ್ಥಿತಿ ಅತಂತ್ರ
author img

By

Published : Jul 31, 2020, 3:10 PM IST

ಬೆಂಗಳೂರು: ಕೋವಿಡ್​ ಲಾಕ್​​ಡೌನ್​ನಿಂದಾಗಿ ಕುವೈತ್​​​ನಲ್ಲಿ ಸಿಲುಕಿರುವ ಕನ್ನಡಿಗರು ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ತಮ್ಮನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡುತ್ತಿರುವ ಯುವಕ

ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಯುವಕರು ಕೆಲಸದ ಸಲುವಾಗಿ ಕುವೈತ್‌ಗೆ ಹೋಗಿದ್ದರು. ಈ ರೀತಿ ಹೋದವರು ಈಗ ಸಂಕಷ್ಟದಲ್ಲಿದ್ದಾರೆ. ಪಾಸ್‌ಪೋರ್ಟ್ ಸೇರಿದಂತೆ ಹಲವು ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆದಿರುವ ಅಲ್ಲಿನ ಕಂಪನಿಗಳು ಇವರನ್ನು ದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿಲ್ಲ.

ಈ ಕುರಿತು ವಿಡಿಯೊ ರೆಕಾರ್ಡ್​ ಮಾಡಿರುವ ಯುವಕರು, ಕೊರೊನಾದಿಂದಾಗಿ ಇಲ್ಲಿ ಲಾಕ್​ಡೌನ್​ ಹೇರಲಾಗಿದ್ದು ನಮಗಿಲ್ಲಿ ಉದ್ಯೋಗವೂ ಇಲ್ಲ, ತಿನ್ನಲು ಊಟವೂ ಇಲ್ಲದಂತಾಗಿದೆ. ಸುಮಾರು 200 ಮಂದಿ ಕನ್ನಡಿಗರ ಬದುಕು ಅತಂತ್ರವಾಗಿದೆ‌. ನಮ್ಮನ್ನು ದೇಶಕ್ಕೆ ಕರೆಯಿಸಿಕೊಳ್ಳಿ ಎಂದು ತಮ್ಮ ಅಳಲು ತೋಡಿಕೊಂಡು ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.