ಬೆಂಗಳೂರು: ರಾಜ್ಯದಲ್ಲಿಂದು 324 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆ.
ಇಂದು 890 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 9,15,382 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,34,576 ಕ್ಕೆ ಏರಿಕೆಯಾಗಿದ್ದು, 6,985 ಸಕ್ರಿಯ ಪ್ರಕರಣಗಳಿವೆ. 165 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ಅತಿ ಕಡಿಮೆ ಪ್ರಕರಣ ಕಂಡುಬಂದಿದ್ದು, 160 ಜನರಲ್ಲಿ ಪಾಸಿಟಿವ್ ಬಂದಿದೆ. ಇಬ್ಬರು ಮೃತಪಟ್ಟಿದ್ದಾರೆ.
ವ್ಯಾಕ್ಸಿನ್ ವಿತರಣೆ
ರಾಜ್ಯದಲ್ಲಿ ಇಂದಿಗೆ ಶೇ. 52 ರಷ್ಟು ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ. ಇಂದು 1,100 ಮಂದಿಗೆ ವ್ಯಾಕ್ಸಿನ್ ವಿತರಿಸಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಗುಳೂರು ಶ್ರೀನಿವಾಸ್, ಸಿ.ವಿ.ರಾಮನ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡರು.