ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು ಸಮಾಲೋಚನೆ ನಡೆಸಲಾಗುತ್ತಿದೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಸಂಪುಟ ರಚನೆ ಬಗ್ಗೆ ಸಮಗ್ರ ಮಾಹಿತಿ ನೀಡಿದ ಬಸವರಾಜ ಬೊಮ್ಮಾಯಿ, ನೇರವಾಗಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಕಾವೇರಿಗೆ ಆಗಮಿಸಿದರು. ಪಟ್ಟಿಯಲ್ಲಿನ ಹೆಸರುಗಳ ಮಾಹಿತಿ ನೀಡಿ ಚರ್ಚಿಸಿದರು. ಎಲ್ಲರಿಗೂ ಕರೆ ಮಾಡಿ ಮಾಹಿತಿ ನೀಡಿರುವ ಸುದ್ದಿ ತಿಳಿಸಿದರು. ಅಷ್ಟರಲ್ಲಿ ನೂತನ ಸಚಿವರಾಗಲಿರುವ ಶಾಸಕರು ಒಬ್ಬೊಬ್ಬರಾಗಿ ಬಿಎಸ್ವೈ ನಿವಾಸಕ್ಕೆ ಆಗಮಿಸಿದರು.
ನೂತನ ಸಚಿವರಾಗಲಿರುವ ಶಾಸಕರಿಗೆ ಶುಭ ಕೋರಿದ ಯಡಿಯೂರಪ್ಪ, ಕಡಿಮೆ ಸಮಯವಿದ್ದು ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಸಲಹೆ ನೀಡಿದರು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಹೋಗಬೇಕು, ಶಾಸಕರನ್ನು ನಿರ್ಲಕ್ಷಿಸಬೇಡಿ ಎಂದು ಕಿವಿಮಾತು ಹೇಳಿದರು. ಸಿಎಂ ಬೊಮ್ಮಾಯಿಗೂ ಇದೇ ಸಲಹೆ ನೀಡಿದ ಯಡಿಯೂರಪ್ಪ ಉತ್ತಮ ಸಂಪುಟ ರಚನೆಯಾಗುತ್ತಿದ್ದು ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂದು ಶುಭ ಕೋರಿದರು.
ಸಿಎಂ ಬಸವರಾಜ ಬೊಮ್ಮಾಯಿ ನೇರವಾಗಿ ಕರೆ ಮಾಡಿ ಪ್ರಮಾಣವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ ಇಲ್ಲಿದೆ.
1.ಕೆ.ಎಸ್. ಈಶ್ವರಪ್ಪ -ಶಿವಮೊಗ್ಗ
2.ಆರ್.ಅಶೋಕ್- ಪದ್ಮನಾಭ ನಗರ
3.ಬಿ.ಸಿ. ಪಾಟೀಲ್ - ಹಿರೇಕೆರೂರು
4.ಡಾ.ಸಿ.ಎನ್.ಅಶ್ವತ್ಥ ನಾರಾಯಣ-ಮಲ್ಲೇಶ್ವರ
5.ಉಮೇಶ್ ಕತ್ತಿ- ಹುಕ್ಕೇರಿ
6.ಎಸ್.ಟಿ.ಸೋಮಶೇಖರ್- ಯಶವಂತಪುರ
7.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
8.ಬೈರತಿ ಬಸವರಾಜ - ಕೆ ಆರ್ ಪುರಂ
9.ಮುರುಗೇಶ್ ನಿರಾಣಿ - ಬೀಳಗಿ
10.ಶಿವರಾಂ ಹೆಬ್ಬಾರ- ಯಲ್ಲಾಪುರ
11.ಶಶಿಕಲಾ ಜೊಲ್ಲೆ- ನಿಪ್ಪಾಣಿ
12.ಕೆ ಸಿ ನಾರಾಯಣ್ ಗೌಡ - ಕೆಆರ್ ಪೇಟೆ
13.ಸುನೀಲ್ ಕುಮಾರ್ - ಕಾರ್ಕಳ
14.ಆರಗ ಜ್ಞಾನೇಂದ್ರ - ತೀರ್ಥಹಳ್ಳಿ
15.ಗೋವಿಂದ ಕಾರಜೋಳ-ಮುಧೋಳ
16.ಮುನಿರತ್ನ- ಆರ್ ಆರ್ ನಗರ
17.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ
18.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
19.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
20.ಹಾಲಪ್ಪ ಆಚಾರ್ - ಯಲ್ಬುರ್ಗ
21.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲಗುಂದ
22.ಕೋಟಾ ಶ್ರೀನಿವಾಸ ಪೂಜಾರಿ - ಎಂಎಲ್ ಸಿ
23.ಪ್ರಭು ಚೌವ್ಹಾಣ್ - ಔರಾದ್
24.ವಿ ಸೋಮಣ್ಣ - ಗೋವಿಂದ್ ರಾಜನಗರ
25.ಎಸ್ ಅಂಗಾರ-ಸುಳ್ಯ
26.ಆನಂದ್ ಸಿಂಗ್ - ಹೊಸಪೇಟೆ
27.ಸಿ ಸಿ ಪಾಟೀಲ್ - ನರಗುಂದ
28.ಬಿ ಸಿ ನಾಗೇಶ್ - ತಿಪಟೂರು
29.ಬಿ.ಶ್ರೀರಾಮುಲು- ಮೊಳಕಾಲ್ಮೂರು