ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿದೆ. ನಿನ್ನೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿತ್ತು. ಆದರೆ ಇಂದು ಹೊಸದಾಗಿ 28,723 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿಯದ್ದೇ ಸಿಂಹಪಾಲು:
ಇಂದು ವರದಿಯಾದ 28,723 ಕೇಸ್ಗಳು ಹಾಗೂ 14 ಸಾವಿನ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 20,121 ಮಂದಿಗೆ ವೈರಸ್ ಅಂಟಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 3,105 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, 7 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 16,443ಕ್ಕೆ ಏರಿದೆ. ಸದ್ಯ 1,09,312 ಸಕ್ರಿಯ ಪ್ರಕರಣಗಳಿವೆ.
-
Highest testing since the beginning of pandemic with 2.21 lakh tests today.
— Dr Sudhakar K (@mla_sudhakar) January 14, 2022 " class="align-text-top noRightClick twitterSection" data="
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205
">Highest testing since the beginning of pandemic with 2.21 lakh tests today.
— Dr Sudhakar K (@mla_sudhakar) January 14, 2022
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205Highest testing since the beginning of pandemic with 2.21 lakh tests today.
— Dr Sudhakar K (@mla_sudhakar) January 14, 2022
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205
ಬೆಂಗಳೂರು ವಿಮಾನ ನಿಲ್ದಾಣಕ್ಕೆ 825 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶದಿಂದ 176 ಪ್ರಯಾಣಿಕರು ಬಂದಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್ ಶೇ.12.98ರಷ್ಟಿದೆ. ಇಂದು ಒಂದೇ ದಿನ 2,21,205 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ರೂಪಾಂತರಿ ಮಾಹಿತಿ:
ಅಲ್ಪಾ - 156
ಬೇಟಾ - 08
ಡೆಲ್ಟಾ - 2,937
ಡೆಲ್ಟಾ ಸಬ್ ಲೈನ್ ಏಜ್ - 1,350
ಕಪ್ಪಾ - 160
ಈಟಾ - 01
ಒಮಿಕ್ರಾನ್ - 479
ಇದನ್ನೂ ಓದಿ: ಕೊರೊನಾ ಸ್ಫೋಟ: ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು?