ETV Bharat / city

ಪರಿಷತ್ ಚುನಾವಣೆ: ಕೊನೆಗೂ ಕಾಂಗ್ರೆಸ್​ನಿಂದ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನ ಪರಿಷತ್ ಚುನಾವಣೆಯ (Karnataka Legislative council Election) ಅಂತಿಮ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆಗೊಳಿಸಿದೆ.

Congress Candidate List
Congress Candidate List
author img

By

Published : Nov 22, 2021, 7:39 PM IST

Updated : Nov 22, 2021, 10:54 PM IST

ಬೆಂಗಳೂರು: ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆಯುವ ಚುನಾವಣೆಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಬೆಂಗಳೂರು ನಗರ, ಬೀದರ್ ಹಾಗೂ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಮೊದಲ ಪಟ್ಟಿಯಲ್ಲಿ 17 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಇದೀಗ ಎರಡನೇ ಹಾಗೂ ಕೊನೆಯ ಪಟ್ಟಿ ಬಿಡುಗಡೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು ನಗರದಿಂದ ಮೊದಲು ಚೇತನ್ ಗೌಡ ಅಭ್ಯರ್ಥಿ ಎಂದು ಹೇಳಲಾಗಿತ್ತು. ಇನ್ನೇನು ಅಧಿಕೃತ ಘೋಷಣೆ ಆಗಲಿದೆ ಎಂಬ ಹಂತ ತಲುಪಿ ಅವರು ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರಿಗೆ ಬೊಕ್ಕೆ ಕೊಟ್ಟು, ತಾನೇ ಫೈನಲ್ ಅಂತ ಮಾಧ್ಯಮಗಳಿಗೆ ಹೇಳಿಕೆ ನೀಡಿ ತೆರಳಿದ್ದರು. ಆದರೆ ಇಂದು ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಆಗಮಿಸಿದ ಯೂಸುಫ್ ಶರೀಫ್ (ಕೆಜಿಎಫ್ ಬಾಬು) ತಮಗೇ ಬಿ ಫಾರಂ ಎಂದು ಹೇಳಿಕೊಂಡಿದ್ದರು. ಆದರೆ ಸಂಜೆ ಮಾಧ್ಯಮಗಳಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೂರು ಮಂದಿ ಹೆಸರು ಪ್ರಕಟವಾಗಬೇಕಿದೆ. ಇನ್ನು ಕೆಲವೇ ನಿಮಿಷದಲ್ಲಿ ಆಗಲಿದೆ ಎಂದಿದ್ದರು. ಅಂತೆಯೇ ಪಟ್ಟಿ ಪ್ರಕಟವಾಗಿದ್ದು, ಯೂಸುಫ್ ಶರೀಫ್ ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ. ಉಳಿದಂತೆ ಕೋಲಾರದಿಂದ ಎಂ.ಎಲ್. ಅನಿಲ್ ಕುಮಾರ್, ಬೀದರ್ ನಿಂದ ಭೀಮರಾವ್ ಬಿ. ಪಾಟೀಲ್ ಅಭ್ಯರ್ಥಿ ಎಂದು ಘೋಷಿತರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಒಟ್ಟು 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಒಟ್ಟು ಐದು ಸ್ಥಳೀಯ ಸಂಸ್ಥೆಗಳು ದ್ವೀಸದಸ್ಯ ಸಂಸ್ಥೆಗಳಾಗಿವೆ. ಇಲ್ಲಿ ಗೊಂದಲ ನಿರ್ಮಾಣವಾಗುವುದು ಬೇಡ, ಪ್ರಾಶಸ್ತ್ಯದ ಮತ ಪಕ್ಷಕ್ಕೆ ಸಿಗಲಿ ಎಂದು ಕಾಂಗ್ರೆಸ್ ಸಹ ದ್ವಿಸದಸ್ಯ ಕ್ಷೇತ್ರಗಳಲ್ಲಿ ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ.

ತೆರವಾದ 25 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ 13 ಸದಸ್ಯರು ಇದ್ದರು. ಇದರಲ್ಲಿ ಈಗ ಕೆ.ಸಿ. ಕೊಂಡಯ್ಯ (ಬಳ್ಳಾರಿ), ಎಸ್. ರವಿ (ಬೆಂಗಳೂರು ಗ್ರಾಮಾಂತರ), ಆರ್. ಪ್ರಸನ್ನ ಕುಮಾರ್ – (ಶಿವಮೊಗ್ಗ) ಮರು ಆಯ್ಕೆಗೆ ಕಣದಲ್ಲಿದ್ದಾರೆ.

ಉಳಿದಂತೆ ಎಸ್.ಆರ್. ಪಾಟೀಲ್ (ವಿಜಯಪುರ) ಬದಲಿಯಾಗಿ ಸುನೀಲ್ ಗೌಡ ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ (ದಕ್ಷಿಣ ಕನ್ನಡ) ಬದಲಿಯಾಗಿ ಮಂಜುನಾಥ ಭಂಡಾರಿ, ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್ (ಉತ್ತರ ಕನ್ನಡ) ಬದಲಾಗಿ ಭೀಮಣ್ಣ ನಾಯ್ಕ, ಶ್ರೀನಿವಾಸ್ ಮಾನೆ (ಧಾರವಾಡ) ಬದಲಾಗಿ ಸಲೀಂ ಅಹಮದ್, ಆರ್. ಧರ್ಮಸೇನ (ಮೈಸೂರು) ಬದಲಾಗಿ ಡಾ.ಡಿ.ತಿಮ್ಮಯ್ಯ, ವಿಜಯ್ ಸಿಂಗ್ (ಬೀದರ್) ಬದಲಾಗಿ ಭೀಮರಾವ್ ಬಿ. ಪಾಟೀಲ್, ಬಸವರಾಜ್ ಪಾಟೀಲ್ ಇಟಗಿ (ರಾಯಚೂರು) ಬದಲಾಗಿ ಶರಣಗೌಡ ಆನಂದಗೌಡ ಪಾಟೀಲ್, ಎಂ.ಎ. ಗೋಪಾಲಸ್ವಾಮಿ (ಹಾಸನ) ಬದಲಾಗಿ ಎಂ. ಶಂಕರ್, ಎಂ. ನಾರಾಯಣಸ್ವಾಮಿ (ಬೆಂಗಳೂರು ನಗರ) ಬದಲಾಗಿ ಯೂಸುಫ್ ಶರೀಫ್, ರಘು ಆಚಾರ್ (ಚಿತ್ರದುರ್ಗ) ಬದಲಾಗಿ ಬಿ. ಸೋಮಶೇಖರ್ ಅಭ್ಯರ್ಥಿಯಾಗಿದ್ದಾರೆ.

ಕಣಕ್ಕಿಳಿಯುವ ಆಸಕ್ತಿ ಹೊಂದಿದ್ದ ಹಾಗೂ ಭರವಸೆ ಪಡೆದಿದ್ದ ಮಾಜಿ ಸಚಿವರಾದ ಎಚ್. ಆಂಜನೇಯ, ಮನೋಹರ್ ತಹಶೀಲ್ದಾರ್​ಗೆ ಈ ಸಾರಿ ನಿರಾಸೆ ಉಂಟಾಗಿದೆ.

Last Updated : Nov 22, 2021, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.