ETV Bharat / city

ಹೆಚ್ಚು HIV ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 16ನೇ ಸ್ಥಾನ!

author img

By

Published : Dec 1, 2021, 3:26 PM IST

ದೇಶದಲ್ಲಿ ಹೆಚ್ಚು ಏಡ್ಸ್ ಸೋಂಕಿರುವ ರಾಜ್ಯಗಳ ಪೈಕಿ ಕರ್ನಾಟಕ 16ನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ ಮತ್ತು ಮೇಘಾಲಯ ರಾಜ್ಯಗಳು ಹೆಚ್ಚು ಹೆಚ್​ಐವಿ ಹರಡಿರುವ ರಾಜ್ಯಗಳಾಗಿವೆ.

HIV infection in Karnataka
ಕರ್ನಾಟಕದಲ್ಲಿ ಹೆಚ್​ಐವಿ ಸೋಂಕು ಹೆಚ್ಚಳ

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು 1998 ರಿಂದ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸುತ್ತಾ ಬಂದಿದೆ. 2011 ರಿಂದ 2015ರ ವರೆಗೆ HIV (ಏಡ್ಸ್) ಸೋಂಕು, ಸಾವನ್ನು ಸೊನ್ನೆಗೆ ತರಲು ಹಾಗೂ ಅದರಿಂದ ಉಂಟಾಗುತ್ತಿರುವ ತಾರತಮ್ಯಗಳನ್ನು ಹೋಗಲಾಡಿಸುವ ಕೆಲಸ ಮಾಡಲಾಗುತ್ತಿದೆ. ಈ ವರ್ಷವೂ ಹೆಚ್​ಐವಿ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷ ವಾಕ್ಯವನ್ನಿಟ್ಟುಕೊಂಡು ಹಲವಾರು ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳುತ್ತಿದೆ. ಅವಮಾನ ಕೊನೆಗೊಳಿಸಿ, ಏಡ್ಸ್‌ ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಹೆಚ್ಚು ಹೆಚ್​ಐವಿ ಹರಡಿರುವ ರಾಜ್ಯಗಳು?

ಹೆಚ್‌ಐವಿ ಸೋಂಕು ತಡೆಗಟ್ಟಲು ಜನ ಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸಲಿರುವ ದಿನ ಇದಾಗಿದೆ. ಪ್ರತಿ ವರ್ಷ ಈ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾಗುತ್ತದೆ. ನ್ಯಾಕೋ ಎನ್.ಎ.ಸಿ.ಪಿ ಪ್ರಕಾರ ಭಾರತದ ನಾಗಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ ಮತ್ತು ಮೇಗಾಲಯ ರಾಜ್ಯಗಳು ಹೆಚ್ಚು ಹೆಚ್​ಐವಿ ಹರಡಿರುವ ರಾಜ್ಯಗಳಾಗಿವೆ.

HIV infection in Karnataka
ವರ್ಷವಾರು ಹೆಚ್​ಐವಿ ಪರೀಕ್ಷಾ ಮಾಹಿತಿ

ಕರ್ನಾಟಕ ರಾಜ್ಯದಲ್ಲೂ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಮೂಲಕ ಹೆಚ್‌ಐವಿ ಸೋಂಕು ನಿಯಂತ್ರಣದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಹೆಚ್​ಐವಿ ನಿಯಂತ್ರಣ, ಸೇವಾ ಸೌಲಭ್ಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಎಲ್ಲ ಇಲಾಖೆಗಳಿಂದ ಸಿಗುವ ಸಾಮಾಜಿಕ ಸೌಲಭ್ಯಗಳು ಸೋಂಕಿತ ಸಮುದಾಯಕ್ಕೆ ಲಭ್ಯವಾಗುವಂತೆ ಸಮಾಲೋಚನೆ ಮಾಡಿ ಸರ್ಕಾರದ ಸೇವೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಪ್ರೇರೇಪಿಸಲಾಗುತ್ತಿದೆ.

ಕರ್ನಾಟಕ 16ನೇ ಸ್ಥಾನದಲ್ಲಿದೆ:

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಒಂದು ಭಾಗವಾಗಿ 1998 ರಿಂದ ಹೆಚ್​ಐವಿ ಸಮೀಕ್ಷೆ ನಡೆಸಲಾಗುತ್ತಿದೆ. ವರ್ಷಕ್ಕೊಮ್ಮೆ ಹೆಚ್​ಐವಿ ಸಮೀಕ್ಷೆ ನಿಯೋಜಿಸಲ್ಪಟ್ಟ ಸಮೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿತ್ತು. ಈ ಸಮೀಕ್ಷೆಯನ್ನು ಈಗ ದೈವಾರ್ಷಿಕ (ಎರಡು ವರ್ಷಗಳಿಗೆ)ಕ್ಕೆ ವರ್ಗಾಯಿಸಲಾಗಿದೆ. ಪ್ರಸವ ಪೂರ್ವ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುವ ಸ್ತ್ರೀಯರಲ್ಲಿ 2004ರಲ್ಲಿ ಹೆಚ್​​ಐವಿ ಸೋಂಕು ಶೇ.1.5ರಷ್ಟಿದ್ದು, 2018-19ರಲ್ಲಿ ಶೇ.1.22ಗೆ ತಲುಪಿದೆ. ದೇಶದಲ್ಲಿ ಹೆಚ್ಚು ಸೋಂಕಿರುವ ರಾಜ್ಯಗಳ ಪೈಕಿ ಕರ್ನಾಟಕ 16ನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಒಟ್ಟು 173 Stand alone ICTCS ಕೇಂದ್ರಗಳು ಮತ್ತು 2901 FICTCs (Facility Integrated Counselling and Testing Centre) ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಹೆಚ್​ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ವರ್ಷವಾರು ಪರೀಕ್ಷಾ ಮಾಹಿತಿ:

  • 2014-15 ರಲ್ಲಿ 19,06,237 ಜನರನ್ನು ಪರೀಕ್ಷಿಸಿದ್ದು ಶೇ.1.39 ಹೆಚ್​ಐವಿ ಸೋಂಕಿತರು ಪತ್ತೆಯಾಗಿದ್ದರು. 12,53,212 ಗರ್ಭಿಣಿಯರನ್ನು ಪರೀಕ್ಷಿಸಿದಾಗ ಶೇ.0.11ರಷ್ಟು ಸೋಂಕಿತರು ಪತ್ತೆಯಾಗಿದ್ದರು.
  • 20015-16 ರಲ್ಲಿ 19,45,292 ಜನರನ್ನು ಪರೀಕ್ಷಿಸಲಾಗಿದ್ದು ಶೇ.1.13 ಸೋಂಕಿತರು ಪತ್ತೆಯಾಗಿದ್ದರು. 12,85,967 ಗರ್ಭಿಣಿಯರನ್ನು ಪರೀಕ್ಷಿಸಲಾಗಿದ್ದು ಶೇ.0.08 ಸೋಂಕಿತರು ಪತ್ತೆಯಾಗಿದ್ದರು.
  • 2016-17 ರಲ್ಲಿ 19,40,589 ಜನರನ್ನು ಪರೀಕ್ಷಿಸಿದ್ದು ಶೇ.1.03 ಸೋಂಕಿತರು ಪತ್ತೆಯಾಗಿದ್ದರು.13,19,979 ಸ್ತ್ರೀಯರನ್ನು ಪರೀಕ್ಷಿಸಿದಾಗ ಶೇ.0.03 ಸೋಂಕಿತರು ಪತ್ತೆಯಾಗಿದ್ದರು.
  • 2017-18 ರಲ್ಲಿ 22,20,292 ಜನರನ್ನು ಪರೀಕ್ಷಿಸಲಾಗಿದ್ದು ಶೇ.0.85 ಸೋಂಕಿತರು ಪತ್ತೆಯಾಗಿದ್ದರು. 14,14,682 ಗರ್ಭಿಣಿಯರನ್ನು ಪರೀಕ್ಷಿಸಿ ಶೇ.0.06 ಸೋಂಕಿತರು ಪತ್ತೆಯಾಗಿದ್ದರು.
  • 2018-19 ರಲ್ಲಿ 24,73,845 ಜನರನ್ನು ಪರೀಕ್ಷಿಸಲಾಗಿದ್ದು ಶೇ.0.73 ಸೋಂಕಿತರು ಪತ್ತೆಯಾಗಿದ್ದರು. 14,23,045 ಗರ್ಭಿಣಿಯರನ್ನು ಪರೀಕ್ಷಿಸಿದಾಗ ಶೇ0.040 ಸೋಂಕಿತರು ಪತ್ತೆಯಾಗಿದ್ದರು.
  • 2019-20 ರಲ್ಲಿ 25,78,254 ಜನರನ್ನು ಪರೀಕ್ಷಿಸಿದಾಗ ಶೇ.0.60 ಸೋಂಕಿತರು ಪತ್ತೆಯಾಗಿದ್ದರು. 14,47,231 ಗರ್ಭಿಣಿಪಯರಲ್ಲಿ ಶೇ.0.04 ಸೋಂಕಿತರು ಪತ್ತೆಯಾಗಿದ್ದರು.
  • 2020-21 ರಲ್ಲಿ (2021ರ ಮಾರ್ಚ್ ಅಂತ್ಯದವರೆಗೆ) 16,34,419 ಜನರನ್ನ ಪರೀಕ್ಷಿಸಿದಾಗ ಶೇ0.59 ಸೋಂಕಿತರು ಪತ್ತೆಯಾಗಿದ್ದರು. 12,13,520 ಗರ್ಭಿಣಿಯರಲ್ಲಿ ಶೇ.0.05 ಸೋಂಕಿತರು ಪತ್ತೆಯಾಗಿದ್ದರು.

2021-22ರ ಸಾಲಿನಲ್ಲಿ ಅಂದರೆ ಪ್ರಸುತ್ತ ರಾಜ್ಯದಲ್ಲಿ ಅನೇಕ ಆ್ಯಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳು ಸೇರದಂತೆ 306 ಲಿಂಕ್ ಆ್ಯಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 3,60,763 ಹೆಚ್​ಐವಿ ಸೋಂಕಿತರು ಈವರೆಗೆ ನೋಂದಣಿಯಾಗಿದ್ದು, ಇದರಲ್ಲಿ 1,69,297 ಮಂದಿ ಔಷಧಿಯನ್ನ ಪಡೆದುಕೊಂಡಿದ್ದಾರೆ.

ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಮಹಿಳಾ ಲೈಂಗಿಕ ವೃತ್ತಿ ನಿರತರನ್ನು ಗುರುತಿಸಿ ಅವರಿಗೆ ಹೆಚ್‌ಐವಿ ಸೋಂಕಿನ ಬಗ್ಗೆ ತಿಳಿವಳಿಕೆಯನ್ನು ಮೂಡಿಸಲಾಗುತ್ತಿದೆ. ಹೆಚ್‌ಐವಿ ತಡೆ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಸಮುದಾಯದಲ್ಲಿರುವ ಇತರ ಮಹಿಳೆಯರನ್ನು ಹೆಚ್‌ಐವಿ ಸೋಂಕಿನಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮವು ರೂಪಿತವಾಗಿದೆ.

ಪ್ರಿವೆನ್‌ಷನ್ ಸೊಸೈಟಿಯಿಂದ ನಡೆಸಲ್ಪಡುವ ಹೆಚ್‌ಐವಿ ಸೋಂಕಿಗೆ ಅಪಾಯದಂಚಿನಲ್ಲಿರುವ ಸಮುದಾಯಗಳಿಗೆ ಹೆಚ್​ಐವಿ ತಡೆಗಟ್ಟುವ ಕಾರ್ಯಕ್ರಮವನ್ನು ನ್ಯಾಕೋ ಸಂಸ್ಥೆಯ ಅನುದಾನದೊಂದಿಗೆ 1992ರಿಂದ ರಾಜ್ಯದಲ್ಲಿ ಅನುಷ್ಟಾನಗೊಳಿಸುತ್ತಿದೆ.

ಇದನ್ನೂ ಓದಿ: World AIDS Day: ಹೆಚ್ಐವಿ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳು..

ಈ ಎಲ್ಲ ಕಾರ್ಯಕ್ರಮಗಳು ಸಂಪೂರ್ಣವಾಗಿ ನ್ಯಾಕೋ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಕಾರ್ಯಸೂಚಿ ಅನುಸಾರವಾಗಿ (ಮಾರ್ಗಸೂಚಿಯಂತೆ) ಅನುಷ್ಟಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ 89,458 ಲೈಂಗಿಕ ವೃತ್ತಿನಿರತ ಮಹಿಳೆಯರು, 28,700 ಪುರುಷ ಲೈಂಗಿಕ ಸಂಪರ್ಕ ಹೊಂದಿದವರಿಗೆ ಮತ್ತು 2,636 ಮಂಗಳಮುಖಿಯರು, 557 ಮಾದಕ ವ್ಯಸನಿಗಳು, 14,2000 ವಲಸಿಗರು ಮತ್ತು 80,000 ಲಾರಿ ಚಾಲಕರನ್ನು ಫಲಾನುಭವಿಗಳಾಗಿ ಗುರುತಿಸಲಾಗಿದೆ.

ಗುರಿ ನಿರ್ಧಾರಿತ ಕಾರ್ಯಕ್ರಮಗಳಡಿಯಲ್ಲಿ ನೋಂದಾಯಿತರಾದ ಸಮುದಾಯಗಳಿಗೆ ಹೆಚ್ಐವಿ ಸೋಂಕಿನ ಬಗ್ಗೆ ತಿಳುವಳಿಕೆ, ನಿಯಮಿತವಾದ ಭೇಟಿ, 3 ತಿಂಗಳಿಗೊಮ್ಮೆ ವೈದ್ಯಕೀಯತಪಾಸಣೆ, 6 ತಿಂಗಳಿಗೊಮ್ಮೆ ಹೆಚ್​​ಐವಿ ಸೋಂಕು ಪತ್ತೆ ಪರೀಕ್ಷೆ ಸೇರಿದಂತೆ ಉಚಿತವಾಗಿ ಕಾಂಡೋಮ್ ವಿತರಿಸಲಾಗುತ್ತಿದೆ. ಹೆಚ್ಐವಿ ಸೋಂಕು ಪತ್ತೆಯಾದ ವ್ಯಕ್ತಿಗಳನ್ನು ಉಚಿತ ಎಆರ್​ಟಿ ಚಿಕಿತ್ಸಾ ಕೇಂದ್ರಗಳಿಗೆ ನೋಂದಾಯಿಸುವ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.