ETV Bharat / city

SSLC ಪಠ್ಯಕ್ರಮದಲ್ಲಿ ಶೇ.20 ರಷ್ಟು ಕಡಿತ - ವೆಬ್​​ಸೈ​ಟ್​ನಲ್ಲಿ ಮಾಹಿತಿ ಪ್ರಕಟಿಸಿದ ಶಿಕ್ಷಣ ಇಲಾಖೆ - karnataka SSLC syllabus

SSLC Exam: ಪರೀಕ್ಷೆಗೆ ಪರಿಗಣಿಸುವ ಮತ್ತು ಪರಿಗಣಿಸದ ಪಠ್ಯದ ಅಂಶಗಳನ್ನು http://desert.kar.nic.in ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ..

Karnataka govt announces 20% reduction in SSLC syllabus
SSLC ಪಠ್ಯಕ್ರಮದಲ್ಲಿ ಶೇ.20 ರಷ್ಟು ಕಡಿತ
author img

By

Published : Dec 3, 2021, 5:33 PM IST

ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ SSLC ಪಠ್ಯಕ್ರಮದಲ್ಲಿ ಶೇ.20 ರಷ್ಟು ಕಡಿತಗೊಳಿಸಿರುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಿಸಿದೆ.

Karnataka govt announces 20% reduction in SSLC syllabus
SSLC ಪಠ್ಯಕ್ರಮದಲ್ಲಿ ಶೇ.20 ರಷ್ಟು ಕಡಿತ - ಸುತ್ತೋಲೆ

ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ಪರಿಗಣಿಸುವ ಮತ್ತು ಪರಿಗಣಿಸದ ಪಠ್ಯದ ಅಂಶಗಳನ್ನು http://desert.kar.nic.in ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ನಿಂದ ಶಾಲೆಗಳು ತಡವಾಗಿ ಆರಂಭವಾಗಿರುವುದನ್ನು ಪರಿಗಣಿಸಿ ಶೇ.20 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇತಿಹಾಸ ವಿಷಯದಲ್ಲಿ 20ನೇ ಶತಮಾನದ ರಾಜಕೀಯ ಆಯಾಮಗಳು ಅಧ್ಯಾಯ, ರಾಜ್ಯಶಾಸ್ತ್ರ ವಿಷಯದಲ್ಲಿ ಜಾಗತಿಕ ಸಂಸ್ಥೆಗಳು, ಸಮಾಜ ವಿಜ್ಞಾನದಲ್ಲಿ 'ಸಾಮಾಜಿಕ ಸಮಸ್ಯೆಗಳು' ಮತ್ತು ಭೂಗೋಳ ವಿಷಯದಲ್ಲಿ ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು ಹಾಗೂ ಭಾರತದ ಜನಸಂಖ್ಯೆ ಅಧ್ಯಾಯಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಟ್ರಿನಿಟಿ-ಹಲಸೂರು ನಿಲ್ದಾಣದ ನಡುವೆ ದುರಸ್ಥಿ ಕಾಮಗಾರಿ : ಮೆಟ್ರೋ ಓಡಾಟದಲ್ಲಿ ಬದಲಾವಣೆ

ಅರ್ಥಶಾಸ್ತ್ರ ವಿಷಯದಲ್ಲಿ ಹಣ ಮತ್ತು ಸಾಲ ಹಾಗೂ ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ ಅಧ್ಯಾಯಗಳು ಹಾಗೂ ವ್ಯವಹಾರ ಅಧ್ಯಯನದಲ್ಲಿ ವ್ಯವಹಾರ ಜಾಗತೀಕರಣ ಅಧ್ಯಾಯಗಳನ್ನು ಕೈಬಿಡಲಾಗಿದೆ. ಪ್ರಥಮ ಭಾಷೆ ಕನ್ನಡದ ಗದ್ಯ ಭಾಗದಲ್ಲಿ 'ಸುಕುಮಾರ ಸ್ವಾಮಿಯ ಕಥೆ' ಮತ್ತು ಪದ್ಯ ಭಾಗದಲ್ಲಿ ಕೆಮ್ಮನೆ ಮೀಸೆವೊತ್ತನೇ ಅಧ್ಯಾಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.