ETV Bharat / city

ಕಳೆದ 11 ದಿನಗಳಿಂದ ಕೋವಿಡ್ ಸಾವು ಶೂನ್ಯ; ಮತ್ತೆ ಏರಿಕೆಯತ್ತ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮೂರನೇ ಅಲೆ ತಗ್ಗುತ್ತಿರುವ ಬೆನ್ನಲ್ಲೇ, ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ.

Karnataka covid update bulletin
ಮತ್ತೆ ಏರಿಕೆಯತ್ತ ಸೋಂಕಿತರ ಸಂಖ್ಯೆ
author img

By

Published : Apr 19, 2022, 8:19 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆು ತಗ್ಗುತ್ತಿದೆ ಎನ್ನುವಾಗಲೇ ಇದೀಗ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿಂದು 7,913 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 62 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,484 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರೂ 0.78% ರಷ್ಟಿದೆ.

48 ಸೋಂಕಿತರು ಗುಣಮುಖರಾಗಿದ್ದು ಈತನಕ 39,04,898 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ನೆಮ್ಮದಿಯ ವಿಷಯ ಅಂದರೆ ಕಳೆದ 11 ದಿನಗಳಿಂದ ಕೋವಿಡ್​ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಇಂದು ಕೂಡ ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈತನಕ 40,057 ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳು 1487 ರಷ್ಟಿದೆ.

ವಿಮಾನ ನಿಲ್ದಾಣದಿಂದ 6,431 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 57 ಮಂದಿಗೆ ಸೋಂಕು ತಗುಲಿದ್ದು 17,82,516 ಕ್ಕೆ ಏರಿಕೆ ಆಗಿದೆ. 42 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,64,135 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, 1,418 ಸಕ್ರಿಯ ಪ್ರಕರಣಗಳು.

ರೂಪಾಂತರಿ ವೈರಸ್​ಗಳಾದ ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4,620, ಇತರೆ- 311, ಒಮಿಕ್ರಾನ್- 3,775, BAI.1.529- 947, BA1- 99, BA2- 2,729 ಪ್ರಕರಣಗಳು ಈವರೆಗೆ ಪತ್ತೆಯಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆ ಅವಾಂತರ ; ಗಾಳಿಗೆ ಮರಬಿದ್ದು 50 ಬೈಕ್ ಜಖಂ,ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.