ETV Bharat / city

Karnataka Covid: ರಾಜ್ಯದಲ್ಲಿ 30 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 8 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ

ಕರ್ನಾಟಕದಲ್ಲಿ ಇಂದು ಕೋವಿಡ್ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಈವರೆಗೆ 8 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.

author img

By

Published : Dec 11, 2021, 8:37 PM IST

Karnataka Covid todays report,Karnataka Crosses 30 Lacs Covid cases, ಕರ್ನಾಟಕದಲ್ಲಿ 30 ಲಕ್ಷ ಕೋವಿಡ್ ಕೇಸ್ ದಾಖಲು
ಕರ್ನಾಟಕ ಕೋವಿಡ್

ಬೆಂಗಳೂರು: ರಾಜ್ಯದಲ್ಲಿಂದು 1,05,978 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 320 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ.

ಇಂದು 317 ಮಂದಿ ಗುಣಮುಖರಾಗಿದ್ದು, ಈವರೆಗೆ 29,54,513 ಜನ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,257 ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,306 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌ 0.30 ರಷ್ಟು ಇದ್ದು, ಸಾವಿನ ಪ್ರಮಾಣ ಶೇ.0.62 ರಷ್ಟು ಇದೆ.

ರಾಜಧಾನಿ ಬೆಂಗಳೂರಲ್ಲಿಂದು 190 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,58,699 ಕ್ಕೆ ಏರಿದೆ. 123 ಜನರು ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 12,36,789 ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,362 ಕ್ಕೆ ಏರಿದೆ. ಸದ್ಯ 5,547 ಸಕ್ರಿಯ ಪ್ರಕರಣಗಳು ಇವೆ. ಕಳೆದ ಎರಡು ದಿನದಿಂದ ರಾಜಧಾನಿಯೊಂದರಲ್ಲಷ್ಟೇ ಸೋಂಕಿತರು ಸಾವನ್ನಪಿರುವ ವರದಿಯಾಗಿದ್ದು, ಉಳಿದಂತೆ ಬೇರೆ ಜಿಲ್ಲೆಗಳಲ್ಲಿ ಶೂನ್ಯ ವರದಿಯಾಗಿದೆ.

ರೂಪಾಂತರಿ ಅಪ್​ಡೇಟ್ಸ್:
ಅಲ್ಪಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02

ಕರ್ನಾಟಕದಲ್ಲಿ 8 ಕೋಟಿ ದಾಟಿದ ಲಸಿಕಾಕರಣ:
ಕರ್ನಾಟಕದಲ್ಲಿ 8 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. 5,845 ಸರ್ಕಾರಿ ಹಾಗೂ 260 ಖಾಸಗಿ ಸೇರಿದಂತೆ ಒಟ್ಟು 6,105 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈವರೆಗೆ ಮೊದಲ ಡೋಸ್ 4,64,66,582 ಮಂದಿ ಪಡೆದಿದ್ದರೆ, ಎರಡನೇ ಡೋಸ್ ಲಸಿಕೆಯನ್ನ 3,36,95,687 ಜನ ಪಡೆದುಕೊಂಡಿದ್ದು ಒಟ್ಟಾರೆ 8,01,62,269 ಮಂದಿ ಲಸಿಕೆ ಪಡೆದಿದ್ದಾರೆ.

(ಇದನ್ನೂ ಓದಿ: ಬಾಂಗ್ಲಾದೇಶದ ಇಬ್ಬರು ಮಹಿಳಾ ಕ್ರಿಕೆಟರ್ಸ್​​​​ಗೆ ಒಮಿಕ್ರಾನ್​​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.