ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಆಗಬೇಕು ಅಂದರೆ ಪಾಸಿಟಿವಿಟಿ ದರ ಶೇ.5ಕ್ಕೆ ಇಳಿಯಬೇಕು ಅಂತ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಇತ್ತ ಸಿಎಂ ಯಡಿಯೂರಪ್ಪ ಅವರು ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಇರುತ್ತೋ ಆ ಜಿಲ್ಲೆಗಳಲ್ಲಿ ವಿನಾಯಿತಿ ಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ಹಾಗಾದರೆ, ವಿನಾಯಿತಿ ಪಟ್ಟಿಯಲ್ಲಿ ಯಾವ ಜಿಲ್ಲೆಗಳು ಇವೆ. ಕಡಿಮೆ ಪಾಸಿಟಿವ್ ದರ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಬಹುದಾ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪಾಸಿಟಿವಿಟಿ ರೇಟು ಇದೆ ಅನ್ನೋದನ್ನ ನೋಡಿದರೆ, 20 ಜಿಲ್ಲೆಗಳಲ್ಲಿ ಶೆ.10 ರಿಂದ 30ರೊಳಗೆ ಇದೆ. 6 ಜಿಲ್ಲೆಗಳು ಶೇ.6 ರಿಂದ 10ರೊಳಗೆ ಇದೆ. ಕೇವಲ ನಾಲ್ಕೇ ನಾಲ್ಕು ಜಿಲ್ಲೆಗಳು ಶೇ.5ರ ಒಳಗೆ ಪಾಸಿಟಿವಿಟಿ ದರ ಹೊಂದಿವೆ.
ಅಂಕಿಅಂಶ (28-5-2021 ರಿಂದ 03-6-2021) ಪಾಸಿಟಿವಿಟಿ ದರ ಹೀಗಿದೆ:
ಶೇ.10 ರಿಂದ ಶೇ.30 ರೊಳಗೆ ಇರುವ ಜಿಲ್ಲೆಗಳು :
1. ಮೈಸೂರು - ಶೇ.27.74
2. ಚಿಕ್ಕಮಗಳೂರು - ಶೇ.23.44
3. ದಾವಣಗೆರೆ - ಶೇ. 20.19
4. ಚಿತ್ರದುರ್ಗ - ಶೇ.18.22
5. ಹಾಸನ - ಶೇ.18.04
6. ಉತ್ತರ ಕನ್ನಡ -ಶೇ.18
7. ದಕ್ಷಿಣ ಕನ್ನಡ - ಶೇ.17.92
8. ಚಾಮರಾಜನಗರ - ಶೇ. 17.88
9. ಉಡುಪಿ - ಶೇ.16.25
10. ಕೋಲಾರ - ಶೇ.15.78
11. ಬೆಂಗಳೂರು ಗ್ರಾಮಾಂತರ - ಶೇ.15.61
12. ಮಂಡ್ಯ- ಶೇ.15.61
13. ಕೊಪ್ಪಳ - ಶೇ.15.13
14. ಕೊಡಗು - ಶೇ.15.12
15. ಬಳ್ಳಾರಿ - ಶೇ.14.92
16. ತುಮಕೂರು - ಶೇ.14.32
17. ಬೆಳಗಾವಿ - ಶೇ.11.37
18. ಚಿಕ್ಕಬಳ್ಳಾಪುರ - ಶೇ.11.05
19. ಶಿವಮೊಗ್ಗ - ಶೇ.10.60
20. ವಿಜಯಪುರ - ಶೇ.10.40
*ಶೇ. 6 ರಿಂದ 10ರೊಳಗೆ ಇರುವ ಜಿಲ್ಲೆಗಳು
21. ಗದಗ- ಶೇ.10.41
22. ಧಾರವಾಡ - ಶೇ.8.83
23. ರಾಯಚೂರು - ಶೇ.8.72
24. ಬಾಗಲಕೋಟೆ - ಶೇ.8.01
25. ರಾಮನಗರ - ಶೇ.7
26. ಯಾದಗಿರಿ - ಶೇ.6.03
*ಶೇ.5ರೊಳಗೆ ಪಾಸಿಟಿವಿಟಿ ದರ
27. ಬೆಂಗಳೂರು ನಗರ - ಶೇ.5.76
28. ಹಾವೇರಿ - ಶೇ.4.40
29. ಕಲಬುರಗಿ - ಶೇ.3.18
30. ಬೀದರ್ - ಶೇ.0.74