ಬೆಂಗಳೂರು: ರಾಜ್ಯದಲ್ಲಿಂದು 998 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,94,004ಕ್ಕೆ ಏರಿಕೆಯಾಗಿದೆ. ಕೊರೊನಾಗೆ 11 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,867ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇಕಡಾ 1.30ರಷ್ಟಿದ್ದು, ಸಾವಿನ ಪ್ರಮಾಣ ಶೇಕಡಾ 1.10ರಷ್ಟಿದೆ.
ಇಂದು 1,601 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,57,351 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 279 ಸೋಂಕಿತರು ತೀವ್ರ ನಿಗಾಘಟಕದಲ್ಲಿದ್ದು, ರಾಜ್ಯದಲ್ಲಿ ಸದ್ಯ 24,767 ಸಕ್ರಿಯ ಪ್ರಕರಣಗಳು ಇವೆ.
ಇದನ್ನೂ ಓದಿ: ವಿದೇಶದಿಂದ ವುಹಾನ್ಗೆ ಬಂದ ಆಹಾರ ಪೊಟ್ಟಣಗಳಲ್ಲಿ ಕೊರೊನಾ ವೈರಸ್ ಪತ್ತೆ!
ಕಳೆದ 7 ದಿನಗಳಲ್ಲಿ 24,667 ಜನರು ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ. 1,09,662 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ, ದ್ವಿತೀಯ ಸಂಪರ್ಕದಲ್ಲಿ 1,22,680 ಜನರು ಇದ್ದಾರೆ. ವಿಮಾನ ನಿಲ್ದಾಣದಿಂದ 1,412 ಪ್ರಯಾಣಿಕರು ಬಂದಿದ್ದು ಕೋವಿಡ್ ತಪಾಸಣೆಗೊಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು 501 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,74,525ಕ್ಕೆ ಏರಿಕೆ ಆಗಿದೆ. 861 ಸೋಂಕಿತರು ಗುಣಮುಖರಾಗಿದ್ದು 3,51,065 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 7 ಮಂದಿ ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,190ಕ್ಕೆ ಏರಿಕೆ ಆಗಿದೆ. ಸದ್ಯ 19,269 ಮಂದಿಗೆ ಚಿಕಿತ್ಸೆ ನೀಡಲಾಗಿದೆ.