ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೆ ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅಂದೇ ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳಿಗೂ ಉಪ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಮುನಿರತ್ನ ಕ್ಷೇತ್ರವಾದ ಆರ್.ಆರ್ ನಗರ ಮತ್ತು ಪ್ರತಾಪ್ಗೌಡ ಪಾಟೀಲ್ ಕ್ಷೇತ್ರವಾದ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿಲ್ಲ. ಇಂದಿನಿಂದಲೇ ಮಾದರಿ ಚುನಾವಣಾ ಸಂಹಿತೆ ಜಾರಿಯಾಗಲಿದೆ.
![karnataka By-elections](https://etvbharatimages.akamaized.net/etvbharat/prod-images/4507854_ec.jpg)
ಯಲ್ಲಾಪುರ, ಯಶವಂತಪುರ, ಹೊಸೂರು, ಕೆ.ಆರ್ ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಮಹಾಲಕ್ಷ್ಮಿ ಲೇಔಟ್, ಗೋಕಾಕ್, ಕೆ.ಆರ್ ಪುರ, ಕಾಗವಾಡ, ಹಿರೇಕೆರೂರು, ವಿಜಯನಗರ, ಶಿವಾಜಿನಗರ, ಹುಣಸೂರು, ಅಥಣಿ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ.
![karnataka By-elections Date Announced](https://etvbharatimages.akamaized.net/etvbharat/prod-images/4507854_ecc.jpg)
ಸೆ.23 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಸೆ.30 ಕಡೆಯ ದಿನಾಂಕವಾಗಿರುತ್ತದೆ. ನಾಮಪತ್ರ ಪರಿಶೀಲನೆ ಕಡೆಯ ದಿನಾಂಕ ಅ.1, ಇನ್ನು ಅ.3 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ.
ಹರಿಯಾಣದ 90 ಕ್ಷೇತ್ರ ಮತ್ತು ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.