ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ ಜೊತೆಗೆ ನಿರ್ಮಾಪಕರ, ವಿತರಕರ ವಲಯ ಹಾಗೂ ಪ್ರದರ್ಶಕರ ವಲಯಕ್ಕೆ ಚುನಾವಣೆ ನಡೆದು ಬರೋಬ್ಬರಿ 2 ಸಂದಿವೆ. ಅವಧಿ ಮುಗಿದರೂ ಚುನಾವಣೆ ನಡೆಸುತ್ತಿಲ್ಲವೆಂಬ ಆರೋಪವಿದೆ. ಈಗ ಕೊನೆಗೂ ಮಂಡಳಿಗೆ ಚುನಾವಣೆ ನಡೆಸಲು ಮುಹೂರ್ತ ಫಿಕ್ಸ್ ಆಗಿದೆ.
ಸರ್ಕಾರದ ಆದೇಶದ ಮೇರೆಗೆ ಇದೇ 28 ರಂದು ಮಂಡಳಿಗೆ ಚುನಾವಣೆ ಮಾಡಬೇಕೆಂದು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಕೆಲಸಗಳು ಗರಿಗೆದೆರಿವೆ. ಸದ್ಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಿದೆ. ನಿರ್ಮಾಪಕ ಭಾ.ಮಾ ಹರೀಶ್ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ. ಭಾ.ಮಾ ಹರೀಶ್ ಅವರು ಇಂದು ಉಮೇದುವಾರಿಕೆ ಸಲ್ಲಿಸಿದರು.
ಇದಕ್ಕೂ ಮುಂಚೆ ನಿರ್ಮಾಪಕ ಭಾ.ಮಾ ಹರೀಶ್ ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಡಾ.ರಾಜ್ ಕುಮಾರ್ ಪುತ್ಥಳಿಗೆ ಹೂವಿನ ಹಾರ ಹಾಕಿ, ಬಳಿಕ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆ ನಡೆದಿರಲಿಲ್ಲ.
ಓದಿ: ಅಥಿಯಾ-ರಾಹುಲ್ ಮದುವೆ ವದಂತಿ.. ನಿರ್ಧಾರಕ್ಕೆ ನನ್ನ ಆಶೀರ್ವಾದವಿದೆ ಎಂದ ಸುನೀಲ್ ಶೆಟ್ಟಿ