ETV Bharat / city

Unlock ನಂತರ ಅಪರಾಧ ಹೆಚ್ಚಳ, ರೌಡಿ ಚಟುವಟಿಕೆ ಮೇಲೆ ಪೊಲೀಸರ ಹದ್ದಿನ ಕಣ್ಣು - ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಹಳೆ ದ್ವೇಷದಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ನಿರಂತರ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ 31 ಆರೋಪಿಗಳ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ. ಪೊಲೀಸ್ ಇತಿಹಾಸದಲ್ಲಿಯೇ ಇದು ಹೆಚ್ಚಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಹೇಳಿದ್ದಾರೆ.

Bangalore
ಅನ್​​ಲಾಕ್ ನಂತರ ಅಪರಾಧ ಹೆಚ್ಚಳ, ರೌಡಿ ಚಟುವಟಿಕೆ ಮೇಲೆ ಹದ್ದಿನ ಕಣ್ಣು: ಕಮಲ್‌ ಪಂತ್
author img

By

Published : Jul 7, 2021, 1:02 PM IST

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದು ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಅನ್​​ಲಾಕ್ 3.0 ಜಾರಿ ಮಾಡಿದೆ. ಅನ್​​ಲಾಕ್ ಜಾರಿಯಾದ ಬಳಿಕ ನಗರದಲ್ಲಿ ಹೆಚ್ಚಾಗಿರುವ ಅಪರಾಧ ಪ್ರಕರಣಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಅನ್​​ಲಾಕ್ ನಂತರ ಅಪರಾಧ ಹೆಚ್ಚಳ, ರೌಡಿ ಚಟುವಟಿಕೆ ಮೇಲೆ ಹದ್ದಿನ ಕಣ್ಣು: ಕಮಲ್‌ ಪಂತ್

ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು, ಹಳೆ ದ್ವೇಷದಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ನಿರಂತರ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ 31 ಆರೋಪಿಗಳ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ. ಪೊಲೀಸ್ ಇತಿಹಾಸದಲ್ಲಿಯೇ ಇದು ಹೆಚ್ಚಾಗಿದೆ. ಸಿಆರ್​ಪಿಸಿ 110ರಲ್ಲಿ ಬಾಂಡ್ ಬರೆಸಿ ಕೇಸ್​ ದಾಖಲಿಸಿ, ಅವರನ್ನ ಬಂಧನ ಮಾಡಿ ಜೈಲಿಗೆ ಕಳುಹಿಸಲಾಗಿದೆ.

ನಗರದಲ್ಲಿ ಯಾವುದೇ ರೌಡಿ ಚಟುವಟಿಕೆ ನಡೆಯುತ್ತಿಲ್ಲ. ಯಾರಾದ್ರೂ ಚೇಷ್ಟೆ ಮಾಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬನಶಂಕರಿ ದೇವಾಲಯದ ಮುಂದೆ ಮದನ್ ಕೊಲೆ ಕೇಸ್​ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಹಜರಿಗೆ ಎಂದು ಸ್ಥಳಕ್ಕೆ ಕರೆದುಕೊಂಡು ಹೋದಾಗ ಆರೋಪಿಗಳು ಚೇಷ್ಟೆ ಮಾಡಿದ ಹಿನ್ನೆಲೆ, ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು.

ಚಾರ್ಜ್ ಶೀಟ್ ಸಲ್ಲಿಕೆ
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಅತಿ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಮಗ್ರವಾಗಿ ತನಿಖೆ ನಡೆಸಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮಾಲೀಕರು ಹೊಣೆ
ಯಾವುದೇ ವಿದೇಶಿಗರಿಗೆ ಮನೆ ಕೊಡುವ ಸಂದರ್ಭದಲ್ಲಿ ಮಾಲೀಕರು ಪೊಲೀಸರಿಗೆ ತಿಳಿಸಬೇಕು. ಆನ್​ಲೈನ್ ಮುಖಾಂತರ ರಿಜಿಸ್ಟ್ರೇಷನ್ ಮಾಡಬೇಕು. ವಿದೇಶಿ ಪ್ರಜೆಗಳು ಡ್ರಗ್ ಕೇಸ್​ನಲ್ಲಿ ಸಿಕ್ಕಿಬಿದ್ದರೆ, ಮಾಲೀಕರು ಕೂಡ ಹೊಣೆಯಾಗುತ್ತಾರೆ. ಅನ್​ಲಾಕ್ ಬಳಿಕ ಸರಗಳ್ಳತನ‌‌ ಪ್ರಕರಣಗಳು ಹೆಚ್ಚು ವರದಿಯಾಗಿದ್ದು, ಅವೆಲ್ಲವೂ ಪತ್ತೆಯಾಗಿವೆ. ಅನ್​ಲಾಕ್ ಆದ ಬಳಿಕ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ, ಬೇರೆ ರಾಜ್ಯದಲ್ಲೂ ಅಪರಾಧಗಳು ನಡೆಯುತ್ತಿವೆ. ಕ್ರೈಂ ಕಂಟ್ರೋಲ್​ಗೆ ಅಗತ್ಯ ಕ್ರಮಗಳನ್ನ ನಾವು ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜಗೋಪಾಲ ನಗರ ಸಬ್ ಇನ್ಸ್​ಪೆಕ್ಟರ್ ಸುಲಿಗೆ ಯತ್ನ ಪ್ರಕರಣ ಸಂಬಂಧ ಪಿಎಸ್ಐ ಚಾಣಾಕ್ಷತನದಿಂದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತರು ವಿವರಿಸಿದರು.

ಇದನ್ನೂ ಓದಿ: ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಪಂತ್ ಖಡಕ್​​​ ಸೂಚನೆ: ಲಾಕ್​​ಡೌನ್ ಟೈಮ್​​ನಲ್ಲಾದ ಮರ್ಡರ್ ಡೀಟೈಲ್ಸ್ ಇಲ್ಲಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.