ETV Bharat / city

ಗೌರಿ ಲಂಕೇಶ್ ಹತ್ಯೆ ವಿಚಾರಣೆ: ಪಾಟೀ ಸವಾಲ್​ಗೆ ಮೊದಲ ಸಾಕ್ಷಿಯಾಗಿ ಕವಿತಾ ಲಂಕೇಶ್ ಉತ್ತರ - ಕವಿತಾ ಲಂಕೇಶ್

ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸರಿಸುಮಾರು ಐದು ವರ್ಷಗಳ ಬಳಿಕ ಸೋಮವಾರ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂಡಿದೆ.

ಕವಿತಾ ಲಂಕೇಶ್
ಕವಿತಾ ಲಂಕೇಶ್
author img

By

Published : Jul 6, 2022, 6:58 AM IST

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ವಿಚಾರಣೆ ಸೋಮವಾರದಿಂದ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಾರಂಭವಾಗಿದೆ. ನ್ಯಾಯಾಧೀಶರಾದ ಚಂದ್ರಶೇಖರ ಮೃತ್ಯುಂಜಯ ಜೋಷಿ ಮುಂದೆ ಹಾಜರಾದ ಗೌರಿ ಲಂಕೇಶ್​ ಸಹೋದರಿ ಕವಿತಾ, ತಮ್ಮ ಸಹೋದರಿಯ ಕೊಲೆಯಾದ ನಂತರದ ಬೆಳವಣಿಗೆಗಳ ಕುರಿತು ಪಾಟೀ ಸವಾಲಿನಲ್ಲಿ ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಆರೋಪಿಗಳ ಪರವಾಗಿ ಹಾಜರಾಗಿದ್ದ ವಕೀಲರಾದ ಕೃಷ್ಣಮೂರ್ತಿ, ಉಮಾಶಂಕರ್‌, ಗಂಗಾಧರ ಶೆಟ್ಟಿ ಮತ್ತು ರಾಜೇಶ್‌ ಶ್ಯಾಮ್‌ ಅವರ ಪಾಟೀ ಸವಾಲಿನಲ್ಲಿ ಮೊದಲ ಸಾಕ್ಷಿಯಾಗಿರುವ ಕವಿತಾ ಲಂಕೇಶ್, ತಮ್ಮ ಸಹೋದರಿ ಗೌರಿಯ ಬಗ್ಗೆ ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹಿಂದುತ್ವವಾದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌), ಪುರೋಹಿತಶಾಹಿ ವಿಚಾರಗಳನ್ನು ಗೌರಿ ಲಂಕೇಶ್ ಪ್ರಬಲವಾಗಿ ವಿರೋಧಿಸಿದ್ದು, ಅವರ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಲಾಗಿದೆ. ಹಿಂದುತ್ವವಾದಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಗೌರಿ ಹತ್ಯೆಯ ನೈಜ ಆರೋಪಿಗಳನ್ನು ಬಚಾವು ಮಾಡಲು ಮತ್ತು ಹಿಂದೂಪರ ಸಂಘಟನೆಗಳತ್ತ ಇಡೀ ಪ್ರಕರಣವನ್ನು ತಿರುಗಿಸುವ ಉದ್ದೇಶ ಹೊಂದಿದ್ದೇನೆ ಎಂಬುದು ಸರಿಯಲ್ಲ ಎಂದು ವಕೀಲರ ಪ್ರಶ್ನೆಯನ್ನು ತಳ್ಳಿ ಹಾಕಿದರು.

ಕೆಲವು ನಕ್ಸಲೀಯ ಮುಖಂಡರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರಿಂದ ಇತರೆ ನಕ್ಸಲೀಯ ಮುಖಂಡರು ಗೌರಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದರು ಎಂಬುದು ಸರಿಯಲ್ಲ. ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ಜೊತೆ ವೈಮನಸ್ಸು ಇತ್ತು ಎಂಬುದನ್ನೂ ಒಪ್ಪುವುದಿಲ್ಲ. ಕೊಲೆಯಾಗುವುದಕ್ಕೂ ಎರಡು ದಿನಗಳ ಮುಂದೆ ನನ್ನ ಮನೆಗೆ ಗೌರಿ ಬಂದಿದ್ದಳು. ಅಲ್ಲದೇ, ಕೋಮು ಸೌಹಾರ್ದಕ್ಕೆ ಸಂಬಂಧಿಸಿದ ಸಭೆಗಳನ್ನು ಮನೆಯಲ್ಲಿ ನಡೆಸುತ್ತಿದ್ದರು ಎಂಬುದೂ ಸರಿಯಲ್ಲ ಎಂದು ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಹೋದರಿ ಗೌರಿಯ ಕಾರಿನಲ್ಲಿ ನಕ್ಸಲ್‌ ಸಾಹಿತ್ಯ ಇದ್ದ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೇ, ಸಾಕೇತ್‌ ರಾಜನ್‌ (ನಕ್ಸಲ್‌ ಮುಖಂಡ) ಯಾರೂ ಎಂಬುದೂ ನನಗೆ ಗೊತ್ತಿಲ್ಲ. ಆದ್ರೆ, ಕೆಲವು ನಕ್ಸಲ್‌ ನಾಯಕರು ಆಕೆಯ ಒಡನಾಟದಲ್ಲಿದ್ದರು. ಯುವ ದಲಿತ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಮತ್ತು ಈಗ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ ಅವರು ಗೌರಿಯ ಮಾನಸ ಪುತ್ರರು ಎಂದು ಹೇಳಿದ್ದೇನೆ ಎಂದರು.

ಗೌರಿ ಕೊಲೆಯಾಗುವುದಕ್ಕೂ ಮುನ್ನ ಮನೆಯ ಮುಂದೆ ಯಾರೋ ಸಂಶಯಾಸ್ಪದವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದ್ದರು. ನಾನು ದೂರು ನೀಡುವಂತೆ ಸೂಚಿಸಿದ್ದಕ್ಕೆ ಸ್ವಲ್ಪ ದಿನ ನೋಡೋಣ ಎಂದು ಹೇಳಿದ್ದರು. ಗೌರಿ ಲಂಕೇಶ್‌ ಹತ್ಯೆ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ತಾವು ಸರ್ಕಾರವನ್ನು ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕೊಲೆಯಾದ ದಿನದ ಘಟನೆ ಹಾಗೂ ದೂರು ನೀಡಿದ್ದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜುಲೈ 4 ರಿಂದ ಆರೋಪಿಗಳ ನಿರಂತರ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.