ETV Bharat / city

ಆರ್‌ಎಸ್‌ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ? : ಜೆಡಿಎಸ್​​ ಪ್ರಶ್ನೆ - ಬೆಂಗಳೂರು

ಆರ್‌ಎಸ್‌ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ?. ಅದು ಎಲ್ಲಿ?, ಯಾವಾಗ ನೋಂದಣಿ ಆಗಿದೆ?, ಅದರ ಅಧಿಕೃತ ಕಚೇರಿ ಎಲ್ಲಿದೆ?. ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಎಂದು ಜೆಡಿಎಸ್​​ ಪ್ರಶ್ನಿಸಿದೆ..

JDS
ಜೆಡಿಎಸ್​​
author img

By

Published : Oct 20, 2021, 5:28 PM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆರ್​​ಎಸ್​​​ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು.

  • ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರ್.ಎಸ್.ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು.
    ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ, ಇರಲಿ. 1/6

    — Janata Dal Secular (@JanataDal_S) October 20, 2021 " class="align-text-top noRightClick twitterSection" data=" ">

ಆರ್‌ಎಸ್‌ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ?

ಈ ಬಗ್ಗೆ ಟ್ವೀಟ್​​ ಮಾಡಿರುವ ಜೆಡಿಎಸ್​​, ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ ಇರಲಿ. ಆರ್‌ಎಸ್‌ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ?. ಅದು ಎಲ್ಲಿ?, ಯಾವಾಗ ನೋಂದಣಿ ಆಗಿದೆ?, ಅದರ ಅಧಿಕೃತ ಕಚೇರಿ ಎಲ್ಲಿದೆ?. ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಎಂದು ಪ್ರಶ್ನಿಸಿದೆ.

ಬಾಲಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ?

ಗುರುದಕ್ಷಣೆ ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ರೂ. ದೇಣಿಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದಿಯಾ?. ತನ್ನ ವಹಿವಾಟಿನ ಬಗ್ಗೆ ಬ್ಯಾಲೆನ್ಸ್‌ ಶೀಟ್ ಇಟ್ಟುಕೊಂಡಿದೆಯಾ?. ಅದನ್ನು ಪರಿಶೀಲನೆ ಮಾಡಿದ ಲೆಕ್ಕ ಪರಿಶೋಧಕರು ಯಾರು?. ಶಾಲೆಗಳಲ್ಲಿ ಬಾಲ ಸ್ವಯಂ ಸೇವಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ? ಎಂದು ಜೆಡಿಎಸ್​ ತೀವ್ರ ವಾಗ್ದಾಳಿ ನಡೆಸಿದೆ.

ಮತಾಂಧತೆಯ ವಿಷ ಪ್ರಾಶನ ಮಾಡುತ್ತಿರುವುದು ಪೊಳ್ಳಾ?

ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷ ಪ್ರಾಶನ ಮಾಡುತ್ತಿರುವುದು ಪೊಳ್ಳಾ?.‌ ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನು ಇಡುವುದು ಅಕ್ರಮ. ಇದಕ್ಕೆ ಪರವಾನಿಗೆ ಪಡೆಯಲಾಗಿದೆಯಾ?. ಇಂಥ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಅವರು ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಎದೆಗಾರಿಕೆಯನ್ನು ಬಿಜೆಪಿ ತೋರಲಿಲ್ಲ, ಯಾಕೆ? ಎಂದು ಕೇಳಿದೆ.

ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಯಾಕೆ ಮೌನ?

ಪಟ್ಟಿ ಮಾಡಿ ಕುಮಾರಸ್ವಾಮಿ ಅವರನ್ನು ಕೆಣಕಿರುವ ಬಿಜೆಪಿ, ಸಂಘದ ಕಾನೂನು-ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಯಾಕೆ ಮೌನ ವಹಿಸಿದೆ?. ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಹಾಗಾದರೆ, ಆರ್​​ಎಸ್​​​ಎಸ್ ಅನ್ನು ಏನೆಂದು ಕರೆಯಬೇಕು?.

  • ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನೆಲ್ಲ, ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ?
    ಆತ್ಮಾವಲೋಕನ ಮಾಡಿಕೊಳ್ಳಿ. 6/6

ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ

ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನಲ್ಲ. ಆದರೆ, ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ?, ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಹೆಚ್​ಡಿಕೆಗೆ 'ಬೈಗಮಿ' ಬಗ್ಗೆ ಪ್ರಶ್ನಿಸಿ ಬಿಜೆಪಿ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.