ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಮಂತ್ರಿ ದಿ. ಜವಾಹರ್ ಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತಿತರರು ಭಾಗವಹಿಸಿದ್ದರು. ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಖರ್ಗೆ, ನೆಹರು ತತ್ವ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಕಟ್ಟುವ ಕಾರ್ಯ ಆದರೆ ಅದಕ್ಕೆ ಶಕ್ತಿ ಬರಲಿದೆ. ದೇಶದ ಎಲ್ಲಾ ಕ್ಷೇತ್ರಗಳ ಪ್ರಗತಿಗೆ ನೆಹರು ಕಾರಣ. ವೈಜ್ಞಾನಿಕವಾಗಿ ದೇಶ ಬೆಳೆದಿದ್ದರೆ ಅದಕ್ಕೆ ಮೂಲ ಕಾರಣ ನೆಹರು ಅವರ ವೈಜ್ಞಾನಿಕ ದೃಷ್ಟಿಕೋನ. ಶೇ. 2-3ರಷ್ಟು ಮೊತ್ತವನ್ನು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಮೀಸಲಿಟ್ಟಿದ್ದರು ಎಂದರು.
- " class="align-text-top noRightClick twitterSection" data="">
ಆದರೆ ಇಂದು ಮೋದಿ ಜನಪ್ರಿಯತೆಗೆ ಹಣ ಮೀಸಲಿಡುತ್ತಿದ್ದಾರೆ. ಅನಗತ್ಯ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೋವಿಡ್ ಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಮಾಡಿಲ್ಲ. ಮಾಡಿದ್ದರೂ ಅದು ತೋರಿಕೆಗೆ ಮಾತ್ರ. ಕೋವಿಡ್ನಂತಹ ಸಮಸ್ಯೆ ಈಗಿದೆ. ಈ ಸಂದರ್ಭ ನೆಹರು ಇದ್ದಿದ್ದರೆ ನಿಜವಾಗಿಯೂ ಯಶಸ್ವಿಯಾಗಿ ತಂತ್ರಜ್ಞಾನ ಬಳಸಿ ನಿವಾರಣೆ ಮಾಡುತ್ತಿದ್ದರು. ದೇಶಕ್ಕೆ ಐಡಿಯಾಜಿಕಲ್ ಹಿನ್ನೆಲೆಯನ್ನು ರಾಜಕೀಯಕ್ಕೆ ನೀಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ನೆಹರು ತತ್ವಕ್ಕೆ ನಮ್ಮ ಕಾರ್ಯಕರ್ತರು ಬದ್ಧವಾಗಿರಬೇಕು ಎಂದರು.
ಪ್ರಜಾಪ್ರಭುತ್ವ ದೇಶದಲ್ಲಿ ಬೇರೂರಬೇಕಾದ್ರೆ ನೆಹರು ಅವರ ಹೆಚ್ಚು ಕಾಳಜಿ ಕಾರಣ. ವಿರೋಧಿಗಳು ಸಹ ಅವಕಾಶ ನೀಡುತ್ತಿದ್ದರು. ಪಾರ್ಲಿಮೆಂಟ್ನಲ್ಲಿ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದರು. ಪಾರ್ಲಿಮೆಂಟ್ನಲ್ಲಿ ಕುಳಿತು ಎಲ್ಲರ ಮಾತು ಕೇಳುತ್ತಿದ್ದರು. ಚರ್ಚೆಯ ಭಾಗಿಯಾಗುತ್ತಿದ್ದರು. ಇಂದಿನ ಪ್ರಧಾನಮಂತ್ರಿಗಳು ಪಾರ್ಲಿಮೆಂಟ್ಗೆ ಬರಲ್ಲ. ಚರ್ಚೆಯಲ್ಲಿ ಭಾಗಿಯಾಗಲ್ಲ ಎಂದು ನರೇಂದ್ರ ಮೋದಿ ವಿರುದ್ಧ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಯುವಕರಿಗೆ ನೆಹರು ಮಾರ್ಗದರ್ಶಿ ಆಗಿದ್ದರು. ಯುವಕರು ಇವರ ಮಾರ್ಗ ಅನುಸರಿಸಬೇಕು ಎಂದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ರಾಜ್ಯಸಭಾ ಸದಸ್ಯ ರಾಜಿವ್ ಸತಾವ್, ಮಾಜಿ ಸಂಸದ ರಾಜಗೋಪಾಲ್, ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ, ಶರಣಪ್ಪ ಮುಂತಾದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.