ETV Bharat / city

ರಾಜ್ಯಸಭೆ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಕೆ : ನಟ ಜಗ್ಗೇಶ್ - Jaggesh will submit nomination papers Tomorrow

ನನಗೆ ಹಿರಿಯ ನಾಯಕರು ಫೋನ್ ಮಾಡಿ ದಾಖಲೆ ರೆಡಿ‌ಮಾಡಿಕೊಳ್ಳಲು ಹೇಳಿದ್ದರು. ಆಗಲು ನನಗೆ ನಂಬಿಕೆ ಇರಲಿಲ್ಲ, ಪಟ್ಟಿ ಪ್ರಕಟವಾದಾಗ ಹೆಸರಿತ್ತು. ಹೀಗಾಗಿ, ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎನ್ನುವುದೇ ನನ್ನ ಭಾವನೆ ಎಂದರು..

ನಟ ಜಗ್ಗೇಶ್
ನಟ ಜಗ್ಗೇಶ್
author img

By

Published : May 30, 2022, 11:56 AM IST

ಬೆಂಗಳೂರು : ರಾಜ್ಯಸಭೆ ಟಿಕೆಟ್ ನಿರೀಕ್ಷೆ ಮಾಡಿರಲಿಲ್ಲ. ಪಕ್ಷದ ಹಿರಿಯರು ದೂರವಾಣಿ ಕರೆ ಮಾಡಿದರೂ ನಾನು ನಂಬಿರಲಿಲ್ಲ. ನನಗೆ ಇದು ಅನಿರೀಕ್ಷಿತ ಅವಕಾಶವಾಗಿದೆ. ದಾಖಲೆ ಸಿದ್ಧಪಡಿಸಿಕೊಳ್ಳಬೇಕಿರುವ ಕಾರಣ ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ನಟ ಜಗ್ಗೇಶ್ ತಿಳಿಸಿದರು.

ರಾಜ್ಯಸಭೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಪತ್ನಿಯೊಂದಿಗೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದರು. ಪಕ್ಷದ ನಾಯಕರನ್ನ ಭೇಟಿ ಮಾಡಿ, ಮಾತುಕತೆ ನಡೆಸಿದರು. ಜೊತೆಗೆ ಸಿದ್ಧತೆ ಮಾಡಿಕೊಳ್ಳಬೇಕಿರುವ ದಾಖಲಾತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಾಳೆ ನಾಮಪತ್ರ ಸಲ್ಲಿಕೆ‌ ಮಾಡಲಿರುವ ನಟ ಜಗ್ಗೇಶ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಜಗ್ಗೇಶ್, ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ. ಸಿಎಂ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ರಾಜ್ಯಸಭೆ ಟಿಕೆಟ್ ನಾನು ನಿರೀಕ್ಷೆ ಮಾಡಿರಲಿಲ್ಲ. ಇದರ ಕಲ್ಪನೆಯೂ ಇರಲಿಲ್ಲ. ಈ ಅವಕಾಶ ನೀಡಿದ್ದಕ್ಕಾಗಿ ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ನನಗೆ ಹಿರಿಯ ನಾಯಕರು ಫೋನ್ ಮಾಡಿ ದಾಖಲೆ ರೆಡಿ‌ಮಾಡಿಕೊಳ್ಳಲು ಹೇಳಿದ್ದರು. ಆಗಲು ನನಗೆ ನಂಬಿಕೆ ಇರಲಿಲ್ಲ, ಪಟ್ಟಿ ಪ್ರಕಟವಾದಾಗ ಹೆಸರಿತ್ತು. ಹೀಗಾಗಿ, ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎನ್ನುವುದೇ ನನ್ನ ಭಾವನೆ ಎಂದರು.

ನನಗೆ ಹಿರಿಯ ನಾಯಕರು ಫೋನ್ ಮಾಡಿ ದಾಖಲೆ ರೆಡಿ‌ಮಾಡಿಕೊಳ್ಳಲು ಹೇಳಿದ್ದರು. ಆಗಲು ನನಗೆ ನಂಬಿಕೆ ಇರಲಿಲ್ಲ, ಪಟ್ಟಿ ಪ್ರಕಟವಾದಾಗ ಹೆಸರಿತ್ತು. ಹೀಗಾಗಿ, ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎನ್ನುವುದೇ ನನ್ನ ಭಾವನೆ. ನನಗೆ ಟಿಕೆಟ್ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ. ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ‌ ಮಾಡುತ್ತೇನೆ ಎಂದರು.

ನಾನು ಯಾವುದೇ ಪ್ರಯತ್ನ ಮಾಡಿಲ್ಲ, ನಾನು ಯಾವ ಹುದ್ದೆಯನ್ನೂ ಕೇಳಿಲ್ಲ. ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದ್ದರು. ಆಗ ನಾನು ಬೇಡ ಅಂದಿದ್ದೆ. ಕಾರಣ ಏನಂದರೆ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ಆ ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆದರೂ, ಆವತ್ತು ನನ್ನ ಮೇಲೆ ವಿಶ್ವಾಸ ಇತ್ತು ಸ್ಪರ್ಧೆ ಮಾಡಿದೆ,12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ, ನನಗೂ ಆಶ್ಚರ್ಯ ಆಯ್ತು. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ, ನನ್ನ ವೃತ್ತಿಯಲ್ಲಿ ಮುಂದುವರೆಯುತ್ತಿದ್ದೆ. ಈಗ ರಾಜ್ಯಸಭೆಗೆ ಹೋಗುವ ಅವಕಾಶ ಸಿಕ್ಕಿದೆ ಎಂದರು‌.

ನನಗೆ ಭಾಷೆ ಸಮಸ್ಯೆ ಇಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು ಎಲ್ಲಾ ಭಾಷೆ ಮಾತನಾಡುತ್ತೇನೆ‌. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ. ಕಾಯಾ ವಾಚಾ ಮನಸಾ ಕನ್ನಡದ ಡಿಂಡಿಮವನ್ನ ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು.

ಕೇಂದ್ರದಿಂದ ಹಿಂದಿ ಹೆರಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಗ್ಗೇಶ್, ಒಳ್ಳೆಯ ಕೆಲಸಕ್ಕೆ ಹೋಗುತ್ತೇನೆ. ಎಲ್ಲರೂ ಹಾರೈಸಿ, ನನ್ನ ಹೆಂಡತಿ ಕೂಡ ಬಹಳ ಸಹಾಯ ಮಾಡ್ತಿದ್ದಾಳೆ, ಅವಳಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ : ರಾಯರ ಪವಾಡ... ರಾಜ್ಯಸಭೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.