ಬೆಂಗಳೂರು: ಲಾಕ್ಡೌನ್ನಿಂದ ಸದಾ ಕೆಲಸದಲ್ಲಿ ನಿರತರಾಗಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು, ಸಿಕ್ಕ ಅಲ್ಪಸ್ವಲ್ಪ ಸಮಯದಲ್ಲಿ ಮನೆಯ ಆವರಣವನ್ನು ತರಕಾರಿ ತೋಟವನ್ನಾಗಿಸಿ ಮಾದರಿಯಾಗಿದ್ದಾರೆ.
ತರಕಾರಿ ತೋಟ ಬೆಳೆದಿರುವ ಕುರಿತ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿ ಕೊಂಡಿರುವ ಅವರು, ಒತ್ತಡದ ಬದುಕಿನಿಂದ ಹೊರಬರಲು ಇದು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
- https://m.facebook.com/story.php?story_fbid=576510286597828&id=100027165841650
ಮನೆಗೆ ನಿತ್ಯ ತರಕಾರಿಗಳು ಅವಶ್ಯಕತೆ ಇರುತ್ತದೆ. ನಾವು ಒತ್ತಡದಲ್ಲಿ ಕೆಲಸ ಮಾಡುತ್ತೇವೆ. ಕರ್ತವ್ಯ ಮುಗಿಸಿ ಮನೆಗೆ ಆಗಮಿಸಿ ಏನಾದರೂ ಕೆಲಸ ಮಾಡಿದರೆ ಮನಸ್ಸು ನಿರಾಳವಾಗುತ್ತದೆ ಎಂದು ಹೇಳಿದ ಡಿಸಿಪಿ, ಮನೆಯಲ್ಲಿ ಬೆಳೆದ ಹೂ, ಹಣ್ಣು ತರಕಾರಿಗಳ ಹೆಸರನ್ನು ವಿವರಣೆ ನೀಡಿದ್ದಾರೆ. ಕರ್ತವ್ಯದ ನಡುವೆಯೂ ಬಿಡುವಿನ ಸಮಯದಲ್ಲಿ ಹಣ್ಣು-ತರಕಾರಿ ಬೆಳೆದಿರುವ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.