ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬೆಳ್ಳಳ್ಳಿ ಕ್ವಾರಿ ಬಳಿ ನಿರ್ಮಾಣ ಮಾಡಿರುವ ಲಿಚೆಡ್ ಸಂಸ್ಕರಣಾ ಮತ್ತು ಶುದ್ದ ನೀರಿನ ಘಟಕಕ್ಕೆ 'Energy and Environment Foundation Innovation in water technology award-2019'ಪ್ರಶಸ್ತಿ ಲಭಿಸಿದೆ.
ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಫೌಂಡೇಶನ್ ವತಿಯಿಂದ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಬೆಳ್ಳಳ್ಳಿ ಶುದ್ಧ ನೀರಿನ ಘಟಕ ತನ್ನ ಮುಡಿಗೇರಿಸಿಕೊಂಡಿದೆ.
ಇನ್ನು ಈ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 23 ರಂದು ನವದೆಹಲಿಯ ಸಿಟಿ ಸೆಂಟರ್ ಪಾರ್ಲಿಮೆಂಟ್ ಸ್ರ್ಟೀಟ್ನ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಎನರ್ಜಿ ಆ್ಯಂಡ್ ಎನ್ವಿರಾನ್ಮೆಂಟ್ ಫೌಂಡೇಶನ್ ಮೂಲಗಳು ತಿಳಿಸಿವೆ.