ಬೆಂಗಳೂರು: ನಗರದ ನಾಲ್ಕು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಇಂದೋರ್ ಮಾದರಿಯ ಕಸ ವಿಲೇವಾರಿ ಯೋಜನೆಗೆ ನಾಳೆಯಿಂದ ಡಿಸಿಎಂ ಅಶ್ವಥ್ ನಾರಾಯಣ್ ಇರುವ ವಾರ್ಡ್ ನಂ.36 ರಲ್ಲೂ ಚಾಲನೆ ಸಿಗಲಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಹಗಲು ಹಾಗೂ ರಾತ್ರಿ ಪಾಳೆಯದಲ್ಲೂ ಕಸ ಸಂಗ್ರಹಣೆ, ಮಿಶ್ರ ತ್ಯಾಜ್ಯ ಆಗದಂತೆ ಎಚ್ಚರಿಕೆ ವಹಿಸಿ, ಬ್ಲಾಕ್ ಸ್ಪಾಟ್ ಕಡಿಮೆ ಮಾಡೋದು ಇಂದೋರ್ ಮಾದರಿಯ ಕಸ ನಿರ್ವಹಣೆಯ ಪ್ರಮುಖ ಉದ್ದೇಶವಾಗಿದೆ. ನಾಗರಿಕರೇ ಕಸ ವಿಂಗಡಿಸಿ ಕೊಡುವಂತೆ ನಿಯಮ ಜಾರಿ ಮಾಡಲಾಗಿದೆ. ಅಲ್ಲದೆ ಸಂಜೆ 6 ರಿಂದ ರಾತ್ರಿ 10 ರ ವರೆಗೂ ರಾತ್ರಿ ಪಾಳೆಯದಲ್ಲೂ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಸಂಗ್ರಹಿಸಿದ ಕಸವನ್ನು ಸಂಸ್ಕರಣೆ ಮಾಡೋದೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.