ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ 'ಇಂದಿರಾ ಕ್ಯಾಂಟೀನ್' ಹೆಸರನ್ನು ನಾಡಪ್ರಭು ಕೆಂಪೇಗೌಡ ಕ್ಯಾಂಟೀನ್ ಎಂದು ಬದಲಿಸಲು ಬಿಬಿಎಂಪಿ ಚಿಂತನೆ ನಡೆಸಿದ ಬೆನ್ನಲ್ಲೇ ಮತ್ತೊಂದು ಹೆಸರು ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಅನ್ನು 'ಕೆಂಪೇಗೌಡ ಕ್ಯಾಂಟೀನ್', 'ಕುಟೀರ' ಎಂಬುದಾಗಿ ನಾಮಕರಣ ಮಾಡುವ ಕುರಿತು ಸರ್ಕಾರಕ್ಕೆ ಉಪಮೇಯರ್ ಪತ್ರ ಬರೆಯುವುದಾಗಿ ಹೇಳಿದ್ದರು. ಈಗ ಕೂಡಲಸಂಗಮದ ಬಸವ ಧರ್ಮ ಪೀಠದ ಸದಸ್ಯರು 'ಬಸವ ಕ್ಯಾಂಟೀನ್' ಎಂದು ಹೆಸರಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ...ಸಿದ್ದು ಇಂದಿರಾ ಕ್ಯಾಂಟೀನ್ಗೆ ಬರುತ್ತಾ ಹೊಸ 'ನಾಮ'..! ಮತ್ತೊಂದು ಹೆಸರು ಯಾವುದು?
ಹಾಗೆಯೇ ಮೇಯರ್ ಗೌತಮ್ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜು ಅವರಿಗೂ ಪತ್ರ ಬರೆದಿದ್ದಾರೆ. ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲೇ ಕಾಯಕ- ದಾಸೋಹ- ಪ್ರಸಾದ ಮಂತ್ರವನ್ನು ಅನುಷ್ಠಾನಕ್ಕೆ ತಂದವರು. ಅಂತಹ ಮಹನೀಯರ ಹೆಸರನ್ನು ಇಂದಿರಾ ಕ್ಯಾಂಟೀನ್ಗೆ ನಾಮಕರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.