ETV Bharat / city

ಕೆಲಸ ಹುಡುಕುವ ಯುವಕರೇ ಸೈಬರ್ ಖದೀಮರ ಟಾರ್ಗೆಟ್​​​​​.. ತಜ್ಞರು ಹೀಗೆ ಹೇಳ್ತಾರೆ

ಠಾಣೆಗಳಲ್ಲಿ ದಾಖಲಾಗಿರುವ ದೂರುಗಳತ್ತ ಕಣ್ಣಾಡಿಸಿದ್ರೆ ವಿದ್ಯಾವಂತರೇ ಮೋಸಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಕಂಪನಿಗಳು ಕೆಲಸದಿಂದ ತೆಗೆದು ಹಾಕಿದ ನಂತರ ಬೇಕಾದ ಕೆಲಸ ಸಿಗದಿದ್ದಾಗ ವೆಬ್​​​ಸೈಟ್​​ಗಳತ್ತ​ ದೃಷ್ಟಿ ಹಾಯಿಸುತ್ತಾರೆ..

author img

By

Published : Dec 9, 2020, 9:02 PM IST

Updated : Dec 10, 2020, 5:41 PM IST

Cyber crimes
ಸೈಬರ್​ ಅಪರಾಧ

ಬೆಂಗಳೂರು : ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದ್ದು, ಕೊರೊನಾ ಬಳಿಕ ರಾಜ್ಯದಲ್ಲಿ ಸುಮಾರು 2008 ಪ್ರಕರಣ ದಾಖಲಾಗಿವೆ. ಜೊತೆಗೆ ಪ್ರಕರಣಗಳನ್ನು ಬೇಧಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂಕಿ-ಅಂಶಗಳನ್ನು ಆಧರಿಸಿದ್ರೆ ದಿನಕ್ಕೆ 10-15 ಪ್ರಕರಣ ಪ್ರತಿದಿನ ಕಂಡು ಬರುತ್ತಿವೆ ಎನ್ನಲಾಗುತ್ತಿದೆ.

ಕೋವಿಡ್​-19 ಬಳಿಕ ಎಂಎನ್​ಸಿ ಕಂಪನಿಗಳು ನಷ್ಟದ ಕೂಪಕ್ಕೆ ಹೋಗಿವೆ. ಕಾರಣ ಬಹುತೇಕ ಕಂಪನಿಗಳು ಲಕ್ಷಾಂತರ ಮಂದಿಯನ್ನು ನಿರುದ್ಯೋಗಿಗಳಾಗಿ ಮಾಡಿವೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವಂತಹ ವೆಬ್​​ಸೈಟ್ ಹಾಗೂ ಆನ್​​ಲೈನ್ ಆ್ಯಪ್​​​ಗಳ ಮೂಲಕ ತಮಗೆ ಬೇಕಾದಂತಹ ಕೆಲಸದ ಹುಡುಕಾಟಕ್ಕೆ ಕೈ ಹಾಕಿದ್ದಾರೆ.

ವೆಬ್​​ಸೈಟ್ ಹಾಗೂ ಆನ್​​ಲೈನ್ ಆ್ಯಪ್​​​ಗಳನ್ನು ಒತ್ತಿದ ತಕ್ಷಣ ಬರುವ ಅನಾಮಿಕ ಕರೆಗಳಿಂದ ಹತ್ತಿಪ್ಪತ್ತು ರೂಪಾಯಿಗಳ ಫಾರಂ ತುಂಬುವಂತೆ ಹೇಳಿ ಬ್ಯಾಂಕ್ ಖಾತೆಯ ವಿವರ, ನಂತರ ಒಟಿಪಿ ಪಡೆದುಕೊಳ್ಳುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಬ್ಯಾಂಕ್​​ನಲ್ಲಿರುವ ಸಂಪೂರ್ಣ ಹಣವನ್ನು ಎಗರಿಸುತ್ತಿದ್ದಾರೆ. ದಕ್ಷಿಣ ಮತ್ತು ಉತ್ತರ ವಿಭಾಗಗಳ ಠಾಣೆಗಳಲ್ಲಿ ಅಂತಹ ಪ್ರಕರಣ ಅಧಿಕವಾಗಿ ದಾಖಲಾಗಿವೆ.

ಸೈಬರ್​​ ತಜ್ಞ ಅನಂತ್ ಪ್ರಭು

ವಿದ್ಯಾವಂತರೇ ಹೆಚ್ಚು : ಠಾಣೆಗಳಲ್ಲಿ ದಾಖಲಾಗಿರುವ ದೂರುಗಳತ್ತ ಕಣ್ಣಾಡಿಸಿದ್ರೆ ವಿದ್ಯಾವಂತರೇ ಮೋಸಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಕಂಪನಿಗಳು ಕೆಲಸದಿಂದ ತೆಗೆದು ಹಾಕಿದ ನಂತರ ಬೇಕಾದ ಕೆಲಸ ಸಿಗದಿದ್ದಾಗ ವೆಬ್​​​ಸೈಟ್​​ಗಳತ್ತ​ ದೃಷ್ಟಿ ಹಾಯಿಸುತ್ತಾರೆ. ಅದರಲ್ಲಿ ಮೋಸದ ಬಲೆಗೆ ಒಳಗಾದವರ ಪ್ರಕರಣಗಳಲ್ಲಿ ಶೇ.2ರಷ್ಟು ಅಪರಾಧ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ತಜ್ಞರು ಹಂಚಿಕೊಂಡ ಮಾಹಿತಿ

  • ಯಾವುದೇ ಕೆಲಸಕ್ಕೆ ಅರ್ಜಿ ಹಾಕದಿದ್ದಾಗ ಬರುವ ಅನಾಮಿಕ ಕರೆಗಳಿಗೆ ಹೆಚ್ಚು ಜಾಗ್ರತೆಯಿಂದ ಉತ್ತರಿಸಬೇಕು
  • ಸಂದರ್ಶನದ ಶುಲ್ಕ ಎಂದು ಕೇಳಿದಾಗ ಕೊಡಬೇಡಿ
  • ಆಧಾರ್, ಪಾಸ್​​ಪೋರ್ಟ್​, ಕ್ರೆಡಿಟ್ ಕಾರ್ಡ್, ಒಟಿಪಿ, ಬ್ಯಾಂಕ್ ಖಾತೆ ವಿವರ ನೀಡಬಾರದು
  • ಕೆಲಸದ ಅನಿವಾರ್ಯತೆ ಸಂದರ್ಭದಲ್ಲಿ ಇ-ಮೇಲ್​ ಮೂಲಕ ಬಂದ ಕೆಲಸಗಳಿಗೆ ಸಂಬಂಧಿಸಿದಂತೆ ವೆಬ್​​ಸೈಟ್, ಕಂಪನಿ ಸಂಪೂರ್ಣ ವಿವರ ಕಲೆಹಾಕಿ
  • ಕೆಲ ಕಂಪನಿ ಸ್ಯಾಲರಿ ಪ್ಯಾಕೆಜ್ ಜಾಸ್ತಿ ಇದೆ ಎಂದು ನಂಬಿಸುತ್ತಾರೆ. ಅದನ್ನು ನಂಬಿ ವೈಯಕ್ತಿಕ ವಿಚಾರ ಹಂಚಿಕೊಳ್ಳಬಾರದು
  • ಕೆಲಸದ ಹುಡುಕಾಟ ಮಾಡುವಾಗ ಕಂಪನಿಯ ಇ-ಮೇಲ್, ಕಂಪನಿ ಫೀಡ್​ಬ್ಯಾಕ್ ಗಮನಿಸಬೇಕು
  • ಟೆಲಿಪೋನ್ ಸಂದರ್ಶನ ಬಂದಾಗ ನಾವೇ ಕರೆ ಮಾಡಲು ಹೊಗಬಾರದು. ಅವರಾಗಿಯೇ ಕರೆ ಮಾಡಿದಾಗ ಸ್ವೀಕರಿಸಬೇಕು
  • ಕೆಲಸಕ್ಕಾಗಿ ₹10 ಅಪ್ಲಿಕೇಷನ್ ತುಂಬಲು ಹೇಳಿದಾಗ ತಕ್ಷಣ ಅದರಲ್ಲಿ ಮಾಹಿತಿ ತುಂಬಬೇಡಿ. ಎಚ್ಚರವಹಿಸಿ...
  • ಏನೇ ಆಗಲಿ ಪ್ರತಿಯೊಂದು ವಿಚಾರ ತಿಳಿದ ಬಳಿಕವೇ ಮಾಹಿತಿ ಹಂಚಿಕೊಳ್ಳಬೇಕು

Last Updated : Dec 10, 2020, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.