ಬೆಂಗಳೂರು: ಬಾಹ್ಯ ಮಾರಾಟಗಾರರೊಂದಿಗೆ ಸಂಪರ್ಕ ಪಡೆದು ನಕಲಿ ಇನ್ಪುಟ್ ತೆರಿಗೆ ಪಾವತಿಸುವ (ಐಟಿಸಿ) ಆರೋಪಕ್ಕೆ ಸಂಬಂಧಿಸಿದಂತೆ ಇನ್ಸ್ಟಾಕಾರ್ಟ್ (ಫ್ಲಿಪ್ಕಾರ್ಟ್ಗೆ ಸೇರಿದ ಕಂಪನಿ) ಮತ್ತು ಆಹಾರ ವಿತರಿಸುವ ಸ್ವಿಗ್ಗಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿದೆ.
ಸಮೀಕ್ಷೆ ಕುರಿತು ದೃಢಪಡಿಸಿರುವ ಫ್ಲಿಪ್‌ಕಾರ್ಟ್ ವಕ್ತಾರರು, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲು ಮತ್ತು ಸಂಪೂರ್ಣ ಸಹಕಾರ ನೀಡಲು ಸಿದ್ದರಿದ್ದೇವೆ. ಹಾಗೂ ಅನ್ವಯವಾಗುವ ತೆರಿಗೆ ಮತ್ತು ಕಾನೂನು ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2020-21ರ ಆರ್ಥಿಕತೆಯ ಮೇಲೆ ಕೊರೊನಾ ಕರಿನೆರಳು: ಜಿಡಿಪಿ ಶೇ 7.7ಕ್ಕೆ ಕುಗ್ಗುವ ಸಾಧ್ಯತೆ
ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ತೆರಿಗೆ ವಂಚಿಸುತ್ತಿರುವವರ ವಿರುದ್ಧ ರಾಷ್ಟ್ರವ್ಯಾಪಿ ಜಿಎಸ್‌ಟಿ ಗುಪ್ತದಳ ಮಹಾ ನಿರ್ದೇಶಕರ (ಡಿಜಿಜಿಐ) ಕಚೇರಿ ಒದಗಿಸಿರುವ ಇನ್ಪುಟ್ನಲ್ಲಿ ಈ ಸಮೀಕ್ಷೆ ಕುರಿತು ಮಾಹಿತಿ ಇದೆ. ಅದರಲ್ಲಿ ತೆರಿಗೆ ವಂಚಿಸುತ್ತಿರುವ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫ್ಲಿಪ್‌ಕಾರ್ಟ್ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಆರು ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳು ಮತ್ತು ತಂತ್ರಜ್ಞಾನ ಬಳಸಿಕೊಂಡು ಮೂರು ಲಕ್ಷ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು (ಎಂಎಸ್‌ಎಂಇ) ಮಾರುಕಟ್ಟೆಗೆ ಸಜ್ಜಾಗುತ್ತಿದ್ದೇವೆ ಎಂದು ಅವರು ಹೇಳಿದರು.