ETV Bharat / city

ಮಹಾಲಕ್ಷ್ಮಿ ಲೇಔಟ್​​​ನಲ್ಲಿ ಕೊರೊನಾ ನಿಯಂತ್ರಣ ಕೇಂದ್ರ ಉದ್ಘಾಟಿಸಿದ ಸಚಿವ ಗೋಪಾಲಯ್ಯ - Minister K.Gopalaiah

ಬೆಂಗಳೂರು ನಗರದಲ್ಲಿ ಕೋವಿಡ್​-19 ಸೋಂಕು ನಿಯಂತ್ರಿಸುವ ಸಲುವಾಗಿ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಆರಂಭಿಸಿರುವ ಕೊರೊನಾ ನಿಯಂತ್ರಣ ಕೇಂದ್ರವನ್ನು ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.

Inauguration of the Corona Control Office
ಕೊರೊನಾ ನಿಯಂತ್ರಣ ಕಚೇರಿ ಉದ್ಘಾಟನೆ
author img

By

Published : Jul 30, 2020, 2:51 PM IST

ಬೆಂಗಳೂರು: ವೇಗವಾಗಿ ಹರಡುತ್ತಿರುವ ಕೋವಿಡ್​-19 ಸೋಂಕು ನಿಯಂತ್ರಿಸುವ ಸಲುವಾಗಿ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಆರಂಭಿಸಿರುವ ಕೊರೊನಾ ನಿಯಂತ್ರಣ ಕೇಂದ್ರವನ್ನು ಇಂದು ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.

ಅಲ್ಲದೆ ಕ್ಷೇತ್ರದ ಎಲ್ಲಾ ವಾರ್ಡ್​​​​ಗಳ ಮುಖಂಡರ ಜೊತೆ ಸಭೆ ನಡೆಸಿದ ಅವರು, ಕೊರೊನಾ ಸೋಂಕಿತರಿಗೆ ತಕ್ಷಣವೇ ಸ್ಪಂದಿಸಬೇಕು. ಅವರಿಗೆ ಬೇಕಾದ ಸವಲತ್ತುಗಳನ್ನು ತಕ್ಷಣವೇ ಒದಗಿಸಿಕೊಡಬೇಕು ಎಂದು ಸೂಚಿಸಿದರು. ಸ್ಯಾನಿಟೈಸರ್, ಉಷ್ಣಾಂಶ ತಪಾಸಣೆ ಯಂತ್ರ, ಮಾಸ್ಕ್, ಗ್ಲೌಸ್, ಔಷಧ ಹೊಂದಿರುವ ಕಿಟ್​​​​ಗಳನ್ನೂ ಕೊರೊನಾ ರೋಗಿಗಳಿಗೆ ನೀಡುವಂತೆ ತಿಳಿಸಿದರು.

ಕೊರೊನಾ ನಿಯಂತ್ರಣ ಕಚೇರಿ ಉದ್ಘಾಟನೆ

ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕೊರೊನಾ ನಿಯಂತ್ರಣ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಸಾರ್ವಜನಿಕರಲ್ಲಿ ಕೊರೊನಾ ಭಯ ಹೋಗಲಾಡಿಸಲು ಇರುವ ಕರಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಿಸಬೇಕು. ಅಗತ್ಯ ಇರುವವರಿಗೆ ರೇಷನ್ ಕಿಟ್ ನೀಡಬೇಕು ಎಂದು ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.