ETV Bharat / city

ನಾನು ಉಪ ಚುನಾವಣೆಯ ಮಾಸ್ಟರ್, 12-13ರಲ್ಲಿ ಬಿಜೆಪಿ ಗೆಲುವು ಖಚಿತ: ಸೋಮಣ್ಣ ವಿಶ್ವಾಸ

author img

By

Published : Dec 7, 2019, 11:18 AM IST

Updated : Dec 7, 2019, 11:41 AM IST

ನಾನು ಉಪ ಚುನಾವಣೆಗಳಲ್ಲಿ ಮಾಸ್ಟರ್. ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ... ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ.

somanna
ಸಚಿವ ವಿ.ಸೋಮಣ್ಣ

ಬೆಂಗಳೂರು: ಸೋಲು - ಗೆಲುವು ಅನ್ನೋದಕ್ಕಿಂತ ಅಸ್ಥಿರತೆ, ಸ್ಥಿರತೆ ಬಗ್ಗೆ ಜನ ಯೋಚಿಸಿದ್ದಾರೆ. ಯಡಿಯೂರಪ್ಪ ಸರ್ಕಾರ ಮುಂದುವರೆಸೋದು ಜನರ ಉದ್ದೇಶ ಮತ್ತು ಸ್ಥಿರ ಸರ್ಕಾರದ ಕುರಿತು ಯೋಚಿಸ್ತಿದ್ದಾರೆ. ನಾನು ಉಪ ಚುನಾವಣೆಗಳಲ್ಲಿ ಮಾಸ್ಟರ್. ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಯಡಿಯೂರಪ್ಪರನ್ನ ಕೈ ಬಿಡಲ್ಲ. ನೂರಕ್ಕೆ ನೂರು ಬಿಜೆಪಿ ಸರ್ಕಾರ ಮುಂದುವರೆಯುತ್ತದೆ‌ ಎಂದರು.

ಸಚಿವ ವಿ.ಸೋಮಣ್ಣ
ಸೋತವರಿಗೂ ಸಚಿವ ಸ್ಥಾನ ಕೊಡ್ತಾರಾ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ ಯಡಿಯೂರಪ್ಪ ಮಾತು ತಪ್ಪಲ್ಲ, ಅವರು ಯಾರಿಗೆ ಏನ್ ಮಾತು ಕೊಟ್ಟಿದ್ದಾರೋ ಅದನ್ನು ಉಳಿಸಿಕೊಳ್ಳಲಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಐಶ್ವರ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಏನ್ ಹೇಳಿಕೆ‌ ಕೊಡ್ತಾರೋ ಅದು ಅವರಿಗೆ ಸೇರಿದ್ದು. ಈಶ್ವರಪ್ಪನವರಿಗೂ ವಯಸ್ಸಾಗ್ತಿದೆಯಲ್ಲ ಹಾಗಾಗಿ ಅವರು ಐಶ್ಚರ್ಯ ರೈ ಹೇಳಿಕೆ ಕೊಟ್ಟಿದಾರೆ ಅನ್ಸುತ್ತೆ ನಾನ್ ಅದರ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.ಪಕ್ಷ ಎಲ್ಲದಕ್ಕಿಂತ ದೊಡ್ಡದು, ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಕೊಂಡು ಕ್ಷೇತ್ರ ಸುತ್ತಿದ್ದಾರೆ. ಪ್ರಚಾರಕ್ಕೆ ಬರೋದು ಬಿಡೋದು ಅವರವರ ಆತ್ಮಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಕೆಆರ್ ಪೇಟೆಯಲ್ಲಿ ಮಧ್ಯಾಹ್ನದ ಮೇಲೆ ಉತ್ತಮ ಮತದಾನ ನಡೀತು. ಕೆ.ಆರ್.ಪೇಟೆ ಮತ್ತು ಹುಣಸೂರು ಎರಡೂ ಕಡೆ ಅಚ್ಚರಿಯ ಫಲಿತಾಂಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:

ಬೆಂಗಳೂರು:ಸೋಲು ಗೆಲುವು ಅನ್ನೋದಕ್ಕಿಂತ ಹೆಚ್ಚು ಅಸ್ಥಿರತೆ, ಸ್ಥಿರತೆ ಬಗ್ಗೆ ಜನ ಯೋಚಿಸಿದ್ದಾರೆ ಯಡಿಯೂರಪ್ಪ ಸರ್ಕಾರ ಮುಂದುವರೆಸೋದು ಜನರ ಉದ್ದೇಶ ಸ್ಥಿರ ಸರ್ಕಾರದ ಕುರಿತು ಜನ ಯೋಚಿಸ್ತಿದ್ದಾರೆ ನಾನು ಉಪ ಚುನಾವಣೆಗಳಲ್ಲಿ ನಾನು ಮಾಸ್ಟರ್ ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಯಡಿಯೂರಪ್ಪರನ್ನ ಕೈ ಬಿಡಲ್ಲ ನೂರಕ್ಕೆ ನೂರು ಬಿಜೆಪಿ ಸರ್ಕಾರ ಮುಂದುವರೆಯುತ್ತದೆ‌ ಎಂದರು.

ಸೋತವರಿಗೂ ಮಂತ್ರಿ ಸ್ಥಾನ ಕೊಡ್ತಾರಾ ಎಂಬ ವಿಚಾರ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಆದರೆ ಯಡಿಯೂರಪ್ಪ ಮಾತು ತಪ್ಪಲ್ಲ,ಅವರು ಯಾರಿಗೆ ಏನ್ ಮಾತು ಕೊಟ್ಟಿದ್ದಾರೋ ಅದನ್ನು ಉಳಿಸಿಕೊಳ್ಳಲಿದ್ದಾರೆ ಎಂದರು.

ಇರೋದು ಒಬ್ಬಳೇ ಐಶ್ವರ್ಯಾ ರೈ ಎಂಬ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು ಅವರು ಏನ್ ಹೇಳಿಕೆ‌ ಕೊಡ್ತಾರೋ ಅದು ಅವರಿಗೆ ಸೇರಿದ್ದು ಈಶ್ವರಪ್ಪರಿಗೂ ವಯಸ್ಸಾಗ್ತಿದೆಯಲ್ಲ ಹಾಗಾಗಿ ಅವರು ಐಶ್ಚರ್ಯ ರೈ ಹೇಳಿಕೆ ಕೊಟ್ಟಿದಾರೆ ಅನ್ಸುತ್ತೆ ನಾನ್ ಅದರ ಬಗ್ಗೆ ಮಾತನಾಡಲ್ಲ ಎಂದರು.

ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, ಪಕ್ಷ ಎಲ್ಲದಕ್ಕಿಂತ ದೊಡ್ಡದು ಯಡಿಯೂರಪ್ಪ ರವ್ರು ಕಾಲಿಗೆ ಚಕ್ರ ಕಟ್ಕೊಂಡು ಕ್ಷೇತ್ರ ಸುತ್ತಿದ್ದಾರೆ ಪ್ರಚಾರಕ್ಕೆ ಬರೋದು ಬಿಡೋದು ಅವರವರ ಆತ್ಮಕ್ಕೆ ಬಿಟ್ಟ ವಿಚಾರ ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದರು.

ಕೆಆರ್ ಪೇಟೆಯಲ್ಲಿ ಮಧ್ಯಾಹ್ನದ ಮೇಲೆ ಬಿಜೆಪಿ ಪರ ಮತದಾನ ನಡೀತು ಕೆ ಆರ್ ಪೇಟೆ ಮತ್ತು ಹುಣಸೂರು ಎರಡೂ ಕಡೆ ಅಚ್ಚರಿಯ ಫಲಿತಾಂಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Body:.Conclusion:
Last Updated : Dec 7, 2019, 11:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.