ETV Bharat / city

'ಫ್ರಾಡ್‌ಗೆ ಗೌರವ ಡಾಕ್ಟರೇಟ್ ನೀಡಿದ್ದು ಹೇಗೆ?' ಪರಿಷತ್‌ನಲ್ಲಿ ಹೆಚ್‌.ವಿಶ್ವನಾಥ್‌ ಕೋಪತಾಪ

author img

By

Published : Sep 16, 2021, 6:50 PM IST

Updated : Sep 16, 2021, 7:11 PM IST

ಅತ್ಯಾಚಾರ ಆರೋಪ ಪ್ರಕರಣ ಎದುರಿಸುತ್ತಿರುವ ಮಧುಕರ್‌ ಎಂಬ ಚಾನ್ಸಲರ್‌, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಣ್ಣಗೆ ಡಾಕ್ಟರೇಟ್‌ ಗೌರವ ನೀಡಿದ್ದಾರೆ. ಇಂತಹ ಫ್ರಾಡ್‌ಗೆ ಡಾಕ್ಟರೇಟ್‌ ನೀಡಿದ್ದು ಹೇಗೆ ಎಂದು ಪರಿಷತ್‌ನಲ್ಲಿಂದು ಹೆಚ್‌.ವಿಶ್ವನಾಥ್‌ ಪ್ರಶ್ನಿಸಿದ್ದಾರೆ.

Honorary Doctorate issue discussed in Council session
ಫ್ರಾಡ್‌ಗೆ 'ಗೌರವ ಡಾಕ್ಟರೇಟ್' ನೀಡಿದ್ದು ಹೇಗೆಂದು ಪರಿಷತ್‌ನಲ್ಲಿ ಹೆಚ್‌.ವಿಶ್ವನಾಥ್‌ ಕೋಪತಾಪ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದಿಂದ ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ ಎಂಬ ವಿಚಾರ ವಿಧಾನಪರಿಷತ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.

ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾಗೂ ಸಾಕಷ್ಟು ಪ್ರಕರಣವನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಮಧುಕರ್ ಎಂಬ ಚಾನ್ಸಲರ್ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಣ್ಣಗೆ ಡಾಕ್ಟರೇಟ್ ನೀಡಿದ್ದಾರೆ ಎಂಬ ಮಾಧ್ಯಮ ದಾಖಲೆ ಇದೆ. ಈ ಸಮಾರಂಭದಲ್ಲಿ ಹಿಂದಿನ ರಾಜ್ಯಪಾಲ ವಜೂಭಾಯ್ ವಾಲಾ ಸಹ ಇದ್ದಾರೆ. ಇಂತಹ ಫ್ರಾಡ್‌ಗೆ ಡಾಕ್ಟರೇಟ್ ನೀಡಿದ್ದು ಹೇಗೆ? ನೀಡಿಲ್ಲಾ ಎಂದು ಈಗ ವಾದಿಸಲಾಗುತ್ತಿದೆ. ದಯವಿಟ್ಟು ಈ ಪ್ರಕರಣವನ್ನು ಎಸಿಬಿ ಇಲ್ಲವೇ ಸಿಐಡಿ ಮೂಲಕ ತನಿಖೆಗೆ ಒಳಪಡಿಸಬೇಕು. ಉನ್ನತ ಶಿಕ್ಷಣ ಸಚಿವರು ಸೂಕ್ತ ತನಿಖೆ ನಡೆಸಬೇಕು ಎಂದು ಹೆಚ್‌.ವಿಶ್ವನಾಥ್ ಒತ್ತಾಯಿಸಿದರು.

ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಯಾರಿಗೆ ಬೇಕಾದರೂ ಗೌರವ ಡಾಕ್ಟರೇಟ್ ನೀಡುವ ಅಧಿಕಾರ ಇದೆ. ಸರ್ಕಾರದ ಪರವಾನಗಿ ಕೇಳುವ ಅಗತ್ಯವಿಲ್ಲ. ಅವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು. ಅಲ್ಲದೇ ವಿಶ್ವನಾಥ್ ಅವರು ವೈಯಕ್ತಿಕ ಅಭಿಪ್ರಾಯ, ಬೇಸರ, ಅಸಮಾಧಾನವನ್ನು ಇಲ್ಲಿಗೆ ತರಬಾರದು. ಸದನದಲ್ಲಿ ಇಲ್ಲದವರ ಹೆಸರು ಪ್ರಸ್ತಾಪಿಸುವಂತಿಲ್ಲ ಎಂದು ಖಾರವಾಗಿ ನುಡಿದರು.

ವಿಶ್ವನಾಥ್, ಅಶ್ವತ್ಥ ನಾರಾಯಣ ನಡುವೆ ಬಿರುಸಿನ ಮಾತುಕತೆ

ವಿಶ್ವನಾಥ್ ಅವರು ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಬಳಿ ಇದಕ್ಕೆ ಅಭಿಪ್ರಾಯ ಹೇಳಿ ಎಂದಾಗ, ನಮ್ಮಲ್ಲಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾತ್ರ ಇದ್ದಾರೆ. ಅಲ್ಲದೇ ನೀವು ಪ್ರಸ್ತಾಪಿಸಿದ ವ್ಯಕ್ತಿ ಆರೋಪಿತ ಮಾತ್ರ. ಇವರಿಂದ ವಂಚನೆ ಆಗಿದೆ ಎಂದು ವ್ಯಕ್ತಿ ಒಬ್ಬ ವಿಷ ಕುಡಿಯುವ ಪ್ರಯತ್ನ ಮಾಡಿದ್ದ. ಇದು ಪ್ರಕರಣ ದಾಖಲಾಗಿಲ್ಲ, ತನಿಖೆ ಆಗಿಲ್ಲ. ಇದರಿಂದ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಗೌರವ ಡಾಕ್ಟರೇಟ್, ಕಾಂಗ್ರೆಸ್ ಪಕ್ಷದ ಹೆಸರು ಪ್ರಸ್ತಾಪಿಸಿದ ವಿಚಾರವಾಗಿ ತಮ್ಮ ಅಭಿಪ್ರಾಯ ತಿಳಿಸಿದರು.

ಗೌರವ ಡಾಕ್ಟರೇಟ್ ಬಗ್ಗೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿದರು

ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಅನೈತಿಕ, ಅನಧಿಕೃತ ವಿವಿಗಳು ಡಾಕ್ಟರೇಟ್ ನೀಡಿದರೆ ತಪ್ಪು. 2017ರಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಕ್ರಿಮಿನಲ್ ಪ್ರಕರಣ ದಾಖಲಾದರೆ ಅಂತವರಿಗೆ ನೀಡಿದ ಗೌರವ ಹಿಂಪಡೆಯಿರಿ ಎಂದು ಹೇಳಲಾಗದು. ಪಡೆದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ಸಾಬೀತಾಗಿಲ್ಲ. ಇದರಿಂದ ತನಿಖೆಯ ಪ್ರಶ್ನೆ ಉದ್ಭವಿಸಲ್ಲ ಎಂದರು.

ವಿಶ್ವನಾಥ್ ಮಾತನಾಡಿ, ಈ ಕ್ರಿಮಿನಲ್‌ಗೆ ಆಶ್ರಯ ನೀಡುತ್ತಿದ್ದಾರೆ ಎಂಬ ಭಾವನೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಬೆಂಬಲಿಸುವ ರೀತಿ ಇದೆಯೋ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ಎಂದರು. ಮತ್ತೆ ವಾಗ್ವಾದ ನಡೆದಾಗ ಸಭಾಪತಿ ಬಸವರಾಜ ಹೊರಟ್ಟಿ, ಪರಿಶೀಲಿಸುತ್ತೇನೆ ಎಂಬ ಭರವಸೆ ನೀಡಿ ಎಂದರು. ಅದಕ್ಕೆ ಸಚಿವರು ಸಮ್ಮತಿಸಿದರು.

'25 ಶಾಸಕರಿಗೆ ಗೌರವ ಡಾಕ್ಟರೇಟ್'

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ರಾಜ್ಯದ 25 ಮಂದಿ ಶಾಸಕರು ಈ ರೀತಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಹಲವರ ಮೇಲೆ ಪ್ರಕರಣ ಇದೆ. ಕೆಲವರು ಡಾಕ್ಟರೇಟ್ ಅಂತ ಹಾಕಿಕೊಳ್ಳುತ್ತಿಲ್ಲ. ಸಾಕಷ್ಟು ಸಂಸ್ಥೆಗಳು ಇವರಿಗೆ ಡಾಕ್ಟರೇಟ್ ನೀಡಿವೆ. ಇದೀಗ ಅವರ ಡಾಕ್ಟರೇಟ್ ಎಲ್ಲಾ ವಾಪಸ್ ಪಡೆಯುತ್ತೀರಾ ಎಂದು ಕೇಳಿದರು. ನಕ್ಕ ಸಭಾಪತಿಗಳು ಗೌರವ ಡಾಕ್ಟರೇಟ್ ವಿಚಾರಕ್ಕೆ ಕೊನೆ ಹಾಡಿ, ಮುಂದಿನ ವಿಷಯಕ್ಕೆ ಪ್ರಸ್ತಾಪ ಮಂಡಿಸಿದರು.

Last Updated : Sep 16, 2021, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.